ಮನಾಲಿ(ನ.17): 5 ಸ್ಟಾರ್ ಸೇಫ್ಟಿ ಕಾರುಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು SUV ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಮೈಕ್ರೋ SUV ಕಾರಾಗಿದ್ದು, ರೋಡ್ ಟೆಸ್ಟ್ ಯಶಸ್ವಿಯಾಗಿ ನಡೆಸಿದೆ. ನೂತನ ಟಾಟಾ HBX ಮೈಕ್ರೋ SUV ಕಾರು ಲೆಹ್ ಹಾಗೂ ಮನಾಲಿಯಲ್ಲಿ ರೋಡ್ ಟೆಸ್ಟ್ ನಡೆಸಿದೆ.

ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿರುವ ಕ್ರಾಸ್ಓವರ್ ಕಾರು; ಟಾಟಾ HBX ಮೇಲೆ ಎಲ್ಲರ ಚಿತ್ತ!.

ದೇಶದ ವಿವಿಧ ಭಾಗಗಳಲ್ಲಿ ಟಾಟಾ HBX ಮೈಕ್ರೋ SUV ಕಾರು ಟೆಸ್ಟ್ ನಡೆಸಿದೆ. 2020ರ ಅಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಿದ್ದ HBX ಮೈಕ್ರೋ SUV ಕಾರು ಇದೀಗ ಬಿಡುಗಡೆಯಾಗುತ್ತಿರು ಕಾರಿಗೂ ಶೇಕಡಾ 95ರಷ್ಟು ಹೋಲಿಕೆ ಇದೆ. ಹೆಚ್ಚಿನ ಬದಲಾವಣೆಗಳಿಲ್ಲ, ಮೋಟಾರು ಶೋನಲ್ಲಿ ಅನಾವರಣ ಮಾಡಿದ್ದ ಅದೇ ವಿನ್ಯಾದಲ್ಲಿ ಕಾರು ಬಿಡುಗಡೆಯಾಗಲಿದೆ.

ಮಹೀಂದ್ರ KUV 100 ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಟಾಟಾ HBX ಮೈಕ್ರೋ SUV ಕಾರು, ದೇಶದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಕಾರಣ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಭಾರಿ ಬೇಡಿಕೆ ಇದೆ. ಇದರ ಜೊತೆಗೆ  ಮೈಕ್ರೋ SUV ಕಾರುಗಳ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಇದೇ ವೇಳೆ ಟಾಟಾ HBX ಮೈಕ್ರೋ SUV ಕಾರು ಬಿಡುಗಡೆಗೆ ರೆಡಿಯಾಗಿದೆ.

ಟಾಟಾ ಅಲ್ಟ್ರೋಜ್ ಕಾರಿನಲ್ಲಿ ಬಳಸಿರು 1.2 ಲೀಟರ್ ಎಂಜಿನ್ ನೂತನ HBX ಮೈಕ್ರೋ SUVಕಾರಿನಲ್ಲೂ ಬಲಸಲಾಗುತ್ತಿದೆ. ಹೀಗಾಗಿ ನೂತನ ಕಾರು 85 Bhp ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.