ಗ್ರೇಟರ ನೋಯ್ಡಾ(ಫೆ.11): ದಹೆಲಿ ಆಟೋ ಎಕ್ಸ್ಪೋದಲ್ಲಿ 70ಕ್ಕೂ ಹೆಚ್ಚು ವಾಹನಗಳು ಈಗಾಗಲೇ ಅನಾವರಣಗೊಂಡಿದೆ.  30ಕ್ಕೂ ಹಚ್ಚು ಕಂಪನಿಗಳು ಪಾಲ್ಗೊಂಡಿದೆ. ಸುಜುಕಿ ಮೋಟಾರ್‌ಸೈಕಲ್ ಕಟಾನ ಬೈಕ್ ಅನಾವರಣ ಮಾಡಿತ್ತು. ಇದೀಗ ದೆಹಲಿ ಮೋಟಾರು ಶೋನಲ್ಲಿ ಅನಾವರಣಗೊಂಡ ಬೆಸ್ಟ್ ಬೈಕ್ ಅನ್ನೋ ಪ್ರಶಸ್ತಿ ಪಡೆದುಕೊಂಡಿದೆ.

 

ಇದನ್ನೂ ಓದಿ: ಒಂದೇ ದಿನ 1 ಲಕ್ಷ ಜನ ಭೇಟಿ, ದಾಖಲೆ ಬರೆದ Auto Expo 2020

ಸುಜುಕಿ GSX-S1000F ಬೈಕ್‌ನಿಂದ ಸ್ಪೂರ್ತಿ ಪಡೆದು ಸುಜುಕಿ ಕಟಾನ ಬೈಕ್ ನಿರ್ಮಾಣ ಮಾಡಲಾಗಿದೆ. 1980ರಲ್ಲಿ ಸುಜುಕಿ ಕಟಾನ ಹೆಸರಿನ ಬೈಕ್ ಹೆಚ್ಚು ಜನಪ್ರಿಯವಾಗಿತ್ತು. ಇದೇ ಹೆಸರನ್ನು ನೂತನ ಬೈಕ್‌ಗೆ ಇಡಲಾಗಿದೆ. 

ಇದನ್ನೂ ಓದಿ: ಭಾರತದಲ್ಲಿ ಅನಾವರಣಗೊಂಡಿತು ಚೀನಾ ಕಾರು, ಶುರುವಾಯ್ತು ದರ್ಬಾರು!

ಸುಜುಕಿ ಕಟಾನ ಬೈಕ್ 999 cc, 4 ಸಿಲಿಂಡರ್ ಎಂಜಿನ್ ಹೊಂದಿದ್ದು, 147 bhp ಪವರ್ ಹಾಗೂ 105 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಬೈಕ್ ಆಟೋ ಎಕ್ಸ್ಪೋ 2020ರಲ್ಲಿ ಅನಾವರಣಗೊಂಡ ಬೆಸ್ಟ್ ಬೈಕ್ ಅನ್ನೋ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.