ಒಂದೇ ದಿನ 1 ಲಕ್ಷ ಜನ ಭೇಟಿ, ದಾಖಲೆ ಬರೆದ Auto Expo 2020

ಭಾರತ ಅತೀ ದೊಡ್ಡ ಅಟೋ ಎಕ್ಸ್ಪೋ 2020 ಹೊಸ ದಾಖಲೆ ಬರೆದಿದೆ. ಬರೋಬ್ಬರಿ 30 ಬ್ರ್ಯಾಂಡ್ ಆಟೋಮೊಬೈಲ್ ಕಂಪನಿಗಳು ಪಾಲ್ಗೊಂಡಿರುವ ಈ ಆಟೋ ಎಕ್ಸ್ಪೋದಲ್ಲಿ 70 ವಾಹನಗಳು ಅನಾವರಣಗೊಂಡಿದೆ. ವಾಹನ ಅನಾವರಣದ ನಡುವೆ ಆಟೋ ಎಕ್ಸ್ಪೋ 2020 ಹೊಸ ಇತಿಹಾಸ ನಿರ್ಮಿಸಿದೆ.
 

Auto expo 2020 create record of 1 lakh visitor per day on Saturday Sunday

ದೆಹಲಿ(ಫೆ.10): ವಿಶ್ವದಲ್ಲೆಡೆ ಆಯೋಜಿಸಲಾಗುವ ಅಟೋ ಎಕ್ಸ್ಪೋ ಮೇಳಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಫೆಬ್ರವರಿ 5 ರಿಂದ ಗ್ರೇಟರ್ ನೋಯ್ಡಾದಲ್ಲಿ ಆರಂಭವಾಗಿರುವ ಆಟೋ ಎಕ್ಸ್ಪೋ ಮೇಳ ಹೊಸ ದಾಖಲೆ ಬರೆದಿದೆ. ಭಾನುವಾರ ಒಂದೇ ದಿನ ಆಟೋ ಎಕ್ಸ್ಪೋಗೆ ಬರೋಬ್ಬರಿ 1 ಲಕ್ಷ ಜನ ಆಗಮಿಸಿದ್ದಾರೆ.

ಇದನ್ನೂ ಓದಿ: ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು ಅನಾವರಣ; ಬುಕಿಂಗ್ ಆರಂಭ!

ಫೆಬ್ರವರಿ 7 ರಿಂದ ಗ್ರೇಟರ್ ನೋಯ್ಡಾ ಆಟೋ ಎಕ್ಸ್ಪೋ ಮೇಳ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಮೊದಲ ದಿನ 70,000 ಮಂದಿ ಆಟೋ ಎಕ್ಸ್ಪೋ ವೇಳಕ್ಕೆ ಭೇಟಿ ನೀಡಿದ್ದರು. ಆದರೆ ಶನಿವಾರ(ಫೆ.09) ಹಾಗೂ ರವಿವಾರ(ಫೆ.09) ತಲಾ 1 ಲಕ್ಷ ಜನ ಭೇಟಿ ನೀಡೋ ಮೂಲಕ ದಾಖಲೆ ಬರೆದಿದೆ. 

ಇದನ್ನೂ ಓದಿ: ಬೆಲೆ 6 ಲಕ್ಷ, ಚೀನಾದ R1 ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣ!

2018ರಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ಒಟ್ಟು 605,000 ಮಂದಿ ಭೇಟಿ ನೀಡಿದ್ದರು. ಇದು 2016ರಕ್ಕೆ ಹೋಲಿಸಿದರೆ ಕಡಿಮೆಯಾಗಿತ್ತು. 2016ರಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಇದೀಗ ವಾರಾಂತ್ಯದಲ್ಲೇ 2 ಲಕ್ಷ ಮಂದಿ ಭೇಟಿ ನೀಡಿರುವುದು ಎಕ್ಸ್ಪೋ ಆಯೋಜಕರಾದ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾನ್ಯುಫ್ಯಾಕ್ಟರ್ (SIAM) ಸಂತಸ ಹೆಚ್ಚಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಅನಾವರಣಗೊಂಡಿತು ಚೀನಾ ಕಾರು, ಶುರುವಾಯ್ತು ದರ್ಬಾರು! 

ಈ ಬಾರಿಯ ಆಟೋ ಎಕ್ಸ್ಪೋದಲ್ಲಿ ಭಾರತ ಸೇರಿದಂತೆ ವಿಶ್ವದ ಪ್ರತಿಷ್ಠಿತ 30 ಆಟೋಮೊಬೈಲ್ ಕಂಪನಿಗಳು ಪಾಲ್ಗೊಂಡಿವೆ. ಈಗಾಗಲೇ 70 ವಾಹನಗಳು ಅನಾವರಣಗೊಂಡಿದೆ. ಫೆಬ್ರವರಿ 12ರ ವರೆಗೆ ನಡೆಯಲಿರುವ ಈ ಮೇಳದಲ್ಲಿ ಹೊಸ ಹೊಸ ವಾಹನಗಳು ಅನಾವರಣಗೊಂಡಿದೆ. ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಈ ಬಾರಿಯ ಆಟೋ ಎಕ್ಸ್ಪೋ ಮೇಳದಲ್ಲಿ ಮಿಂಚುತ್ತಿದೆ.

ಫೆಬ್ರವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios