Asianet Suvarna News Asianet Suvarna News

ಟ್ರಾಫಿಕ್ ಪೊಲೀಸರಿಗೆ ಹೊಸ ಮಾಡಿಫಿಕೇಶನ್ ಸುಜುಕಿ ಜಿಕ್ಸರ್ !

ರಸ್ತೆ ಸುರಕ್ಷೆತೆ ಕುರಿತು ಸುಜುಕಿ ಮೋಟಾರ್ ಇಂಡಿಯಾ ಹಲವು ಅಭಿಯಾನ ಮಾಡಿದೆ. ಇದೀಗ  ಸೂರತ್ ಟ್ರಾಫಿಕ್ ಪೊಲೀಸರಿಗೆ 5 ಸುಜುಕಿ ಜಿಕ್ಸರ್ ಬೈಕ್ ನೀಡೋ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

Suzuki handover Gixxer 250 SF bike to Surat traffic police
Author
Bengaluru, First Published Jan 10, 2020, 8:10 PM IST

ಸೂರತ್(ಜ.10): ಪೊಲೀಸ್ ವ್ಯವಸ್ಥೆ ಬಲಪಡಿಸಲು ಆಯಾ ರಾಜ್ಯಗಳು ಹೆಚ್ಚಿನ ಶ್ರಮ ವಹಿಸುತ್ತಿದೆ. ಪೊಲೀಸರಿಗೆ ಹೊಸ ಹಾಗೂ ಆಧುನಿಕ ವಾಹನಗಳನ್ನು ನೀಡುತ್ತಿದೆ. ಇದೀಗ ಸುಜುಕಿ ಇಂಡಿಯಾ ಸೂರತ್ ಪೊಲೀಸರಿಗೆ ಜಿಕ್ಸರ್ ಬೈಕ್ ನೀಡೋ ಮೂಲಕ ಪೊಲೀಸರಿಗೆ ನೆರವಾಗಿದೆ.

ಇದನ್ನೂ ಓದಿ: 10 ಸಾವಿರ ರೂಗೆ ಬುಕ್ ಮಾಡಿ ಜಾವಾ ಪೆರಾಕ್ ಬೈಕ್!

ಸೂರತ್ ಪೊಲೀಸ್ ಕಮೀಷನ್ ಆರ್ ಬಿ  ಬ್ರಹ್ಮಭಟ್ ಅವರಿಗೆ 5 ಸುಜುಕಿ ಜಿಕ್ಸರ್ SF 250 ಮಾಡಿಫಿಕೇಶ್ ಬೈಕ್ ಕೀ ಹಸ್ತಾಂತರಿಸಲಾಗಿದೆ. ಗುರುಗಾಂವ್ ಪೊಲೀಸರ ಬಳಿಕ ಇದೀಗ ಸೂರತ್ ಪೂಲೀಸರು ಕೂಡ ಸುಜುಕಿ ಜಿಕ್ಸರ್ SF 250 ಬೈಕ್ ಬಳಕೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

ಇದನ್ನೂ ಓದಿ: ಹೊಸ ವರ್ಷಕ್ಕೆ 60 ವರ್ಷ ಹಳೇ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬೈಕ್ ಮತ್ತೆ ಬಿಡುಗಡೆ!

ಸೂರತ್ ಪೊಲೀಸರಿಗೆ ನೀಡಲಾಗಿರುವ ಸುಜುಕಿ ಜಿಕ್ಸರ್ SF 250 ಬೈಕ್ 49cc, ಸಿಂಗಲ್ ಕಾಲ್ ಆಯಿಲ್ ಕೂಲಿಂಗ್ ಸಿಸ್ಟಮ್, 4 ಸ್ಟ್ರೋಕ್, ಫ್ಯುಯೆಲ್ ಇಂಜೆಕ್ಷನ್ ಎಂಜಿನ್ ಹೊಂದಿದೆ. 26.5ps ಪವರ್ ಹಾಗೂ  22.6Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

6 ಸ್ಪೀಡ್ ಗೇರ್ ಬಾಕ್ಸ್ ಹಾಗೂ ಡ್ಯುಯೆಲ್ ಚಾನೆಲ್ ABS ಹೊಂದಿದೆ. ಪೊಲೀಸರಿಗೆ ನೀಡಲಾಗಿರುವ ಬೈಕ್‌ನಲ್ಲಿ ಕೆಲ ಫೀಚರ್ಸ್ ಸೇರಿಸಲಾಗಿದೆ. ವಾಕಿ ಟಾಕ್, ಪೊಲೀಸ್ ಸೈರನ್, ಲೈಟ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. 

Follow Us:
Download App:
  • android
  • ios