ಚೆನ್ನೈ(ಡಿ.31): ರಾಯಲ್ ಎನ್‌ಫೀಲ್ಡ್ ಬೈಕ್ ಪ್ರೀಯರಿಗೆ ಶೆರ್ಪಾ ಹೆಸರು ಹೊಸದಲ್ಲ. 1960ರಲ್ಲಿ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬೈಕ್ ಭಾರತದಲ್ಲಿ ಜನಪ್ರಿಯವಾಗಿತ್ತು. 173 cc, 2 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 4 ಸ್ಪೀಡ್ ಗೆರ್ ಬಾಕ್ಸ್ ಹಾಗೂ ಮಲ್ಟಿ ಪ್ಲೇಟ್ ಕ್ಲಚ್ ಹೊಂದಿತ್ತು. ಆದರೆ 1978ರಲ್ಲಿ ಶೆರ್ಪಾ ಬೈಕ್ ಸ್ಥಗಿತಗೊಂಡಿತು.

ಇದನ್ನೂ ಓದಿ: ಅಲೋಯ್ ವೀಲ್ಹ್, BS6: ಹೊಸ ರೂಪದಲ್ಲಿ ನೂತನ ರಾಯನ್ ಎನ್‌ಫೀಲ್ಡ್ ಕ್ಲಾಸಿಕ್ 350!

60 ವರ್ಷಗಳ ಬಳಿಕ ಅಂದರೆ 2020ರಲ್ಲಿ ಇದೇ ಶೆರ್ಪಾ ಬೈಕ್ ಮತ್ತೆ ಬಿಡುಗಡೆ ಮಾಡಲು ರಾಯಲ್ ಎನ್‌ಫೀಲ್ಡ್ ಸಜ್ಜಾಗಿದೆ. ಕೆಲ ಬದಲಾವಣೆ, ಆಧುನಿಕ ತಂತ್ರಜ್ಞಾನಜದ ಜೊತೆಗೆ ರೆಟ್ರೋ ಶೈಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ಮಹಿಳೆಯರಿಗಾಗಿ ಬರುತ್ತಿದೆ ಕಡಿಮೆ ತೂಕದ ರಾಯಲ್ ಎನ್‌ಫೀಲ್ಡ್ ಬೈಕ್

ನೂತನ ಶೆರ್ಪಾ 250cc ಎಂಜಿನ್ ಎನ್ನಲಾಗುತ್ತಿದೆ. ಇಷ್ಟೇ ನೂತನ ಬೈಕ್ ಬೆಲೆ 1.20 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಅಂದಾಜಿಸಲಾಗಿದೆ.