ಸಿಗ್ನಲ್ ಜಂಪ್- ರದ್ದಾಗಲಿದೆ 900 ಮಂದಿಯ ಡ್ರೈವಿಂಗ್ ಲೈಸೆನ್ಸ್!
ಸಿಗ್ನಲ್ ಜಂಪ್ ಮಾಡಿ 100 ರೂ ಕಟ್ಟಿದರೆ ಮುಗಿದೇ ಹೋಯ್ತು ಅಂದುಕೊಂಡರೆ ತಪ್ಪು. ಸಿಗ್ನಲ್ ಜಂಪ್ ಮಾಡಿದರೆ ಲೈಸೆನ್ಸ್ ರದ್ದಾಗಲಿದೆ. ಈಗಾಗಲೇ 900 ಮಂದಿಯ ಲೈಸೆನ್ಸ್ ರದ್ದು ಮಾಡಲು ಪೊಲೀಸರು ಮುಂದಾಗಿದ್ದಾರೆ.
ನೊಯ್ಡಾ(ಡಿ.10): ನಗರದಲ್ಲಿ ವಾಹನ ಬಳಕೆ ಮಾಡುವ ಹಲವರು ರೆಡ್ ಸಿಗ್ನಲ್ ಜಂಪ್ ಮಾಡುವುದೇ ಹವ್ಯಾಸ ಮಾಡಿಕೊಂಡಿರುತ್ತಾರೆ. ಇಂತವರಿಗೆ ಪಾಠ ಕಲಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಹೀಗೆ ರೆಡ್ ಸಿಗ್ನಲ್ ಜಂಪ್ ಮಾಡಿದ 900 ಮಂದಿಯ ಲೈಸೆನ್ಸ್ ರದ್ದು ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ನೊಯ್ಡಾದಲ್ಲಿ ರೆಡ್ ಸಿಗ್ನಲ್ ಜಂಪ್ ಮಾಡಿದ 900 ಮಂದಿಗೆ ಈಗಾಗಲೇ ಟ್ರಾಫಿಕ್ ಪೊಲೀಸರು ನೊಟಿಸ್ ನೀಡಿದ್ದಾರೆ. 7 ದಿನಗಳ ಒಳಗೆ ತಮ್ಮ ಲೈಸೆನ್ಸ್ ಸಲ್ಲಿಕೆ ಮಾಡಲು ಸೂಚಿಸಲಾಗಿದೆ. ಈ ಗಡುವು ಮೀರಿದರೆ ಲೈಸೆನ್ಸ್ ಜೊತೆಗೆ ವಾಹನ ಕೂಡ ಎತ್ತಂಗಡಿಯಾಗಲಿದೆ.
ಕಟ್ಟು ನಿಟ್ಟಿನ ಕ್ರಮದ ಮೂಲಕ ಸಿಗ್ನಲ್ ಜಂಪ್ ಹಾಗೂ ಅದರಿಂದ ಆಗುವ ಅಪಘಾತ ತಪ್ಪಿಸಲು ನೋಯ್ಡಾ ಪೊಲೀಸರು ಮುಂದಾಗಿದ್ದಾರೆ. ಈ ನಿಯಮ ದೇಶದ ಇತರ ನಗರದಲ್ಲೂ ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಇದರಿಂದ ಸಿಗ್ನಲ್ ಜಂಪ್ ಸೇರಿದಂತೆ ರಸ್ತೆ ನಿಯಮಗಳ ಉಲ್ಲಂಘನೆ ಕಡಿಮೆಯಾಗಲಿದೆ.