ನವದೆಹಲಿ(ಫೆ.19): ಭಾರತ ಹೊಸ ವಾಹನದತ್ತ ಹೆಜ್ಜೆ ಇಡುತ್ತಿದೆ. ಇಂಧನ ವಾಹನಗಳ ಆರ್ಭಟಕ್ಕೆ ಬ್ರೇಕ್ ಹಾಕಿ ಎಲೆಕ್ಟ್ರಿಕ್ ವಾಹನಗಳತ್ತ ಚಿತ್ತ ಹರಿಸಿದೆ. ಈಗಾಗಲೇ ಹಲವು ಎಲೆಕ್ಟ್ರಿಕ್ ವಾಹನಗಳು ಭಾರತದ ರಸ್ತೆಗಿಳಿದಿವೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕ್ರಾಂತಿ ಬೆನ್ನಲ್ಲೇ ಸುಪ್ರೀಂ ಕೋರ್ಟ್ ದಿಢೀರ್ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯನ್ನು ಆಮಂತ್ರಿಸಿದೆ.

ಇದನ್ನೂ ಓದಿ: ಭಾರತದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಉದ್ಘಾಟಿಸಿದ ಗಡ್ಕರಿ!

ಭಾರತದಲ್ಲಿನ ಎಲೆಕ್ಟ್ರಾನಿಕ್ ವಾಹನ ಹಾಗೂ ಚಾರ್ಜಿಂಗ್ ಸ್ಟೇಶನ್ ಕುರಿತು ಕೇಂದ್ರ ಸರ್ಕಾರದ ಯೋಜನೆ, ಮಾಲಿನ್ಯ ತಗ್ಗಿಸುವಲ್ಲಿ ಎಲೆಕ್ಟ್ರಿಕ್ ವಾಹನದ ಪಾತ್ರ ಭಾರತದ ಪರಿಸ್ಥಿತಿ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲು ಗಡ್ಕರಿಯನ್ನು ಸುಪ್ರೀಂ ಕೋರ್ಟ್ ಆಹ್ವಾನಿಸಿದೆ.

ಇದನ್ನೂ ಓದಿ:ಬೆಲೆ 6 ಲಕ್ಷ, ಚೀನಾದ R1 ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣ!

ಮುಖ್ಯನಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯೂಯಮೂರ್ತಿ ಬಿಆರ್ ಗವಿ ಹಾಗೂ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ ಗಡ್ಕರಿ ಜೊತೆ ಮಾತುಕತೆ ನಡೆಸಲು ಸರ್ಕಾರದ ಆಡಿಶನ್ ಸಾಲಿಸಿಟರ್ ಜನರಲ್ ಎನ್.ಎಸ್.ನಡಕರ್ಣಿ ಬಳಿ ಆಹ್ವಾನ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನಡಕರ್ಣಿ, ಸಾರಿಗೆ ಸಚಿವರು ಸುಪ್ರೀಂ ಕೋರ್ಟ್‌ಗೆ ಬಂದು ಈ ಕುರಿತು ಮಾತನಾಡಲು ಉತ್ಸುಕರಾಗಿದ್ದಾರೆ. ಆದರೆ ಇದು ಯಾವುದೇ ರಾಜಕೀಯ ಬಣ್ಣ ಹಾಗೂ ಪ್ರೇರಿತವಾಗಬಾರದು ಎಂದಿದ್ದರು.

ಮಾತುಕತೆಯಲ್ಲಿ ನ್ಯಾಯವಾದಿ ಹಾಗೂ ರಾಜಕೀಯ ಕ್ಷೇತ್ರದ ಪ್ರಶಾಂತ್ ಭೂಷಣ್ ಇದ್ದರೂ ಸಚಿವರನ್ನು ರಾಜಕೀಯ ಪ್ರಶ್ನೆಗಳನ್ನು ಕೇಳುವುದಿಲ್ಲ. ಇದು ಮಾಹಿತಿ ವಿನಿಮಯ. ಎಲೆಕ್ಟ್ರಿಕ್ ವಾಹನವನ್ನು ಕೈಗೆಟುಕುವ ಬೆಲೆಗೆ ಮಾರಾಟ ಮಾಡಲು ಸರ್ಕಾರದ ಯೋಜನೆಗಳ ಕುರಿತು ಚರ್ಚಿಸಲಾಗುವುದು ಎಂದಿದೆ. ಶೀಘ್ರದಲ್ಲೇ ನಿತಿನ್ ಗಡ್ಕರಿ ಸುಪ್ರೀಂ ಕೋರ್ಟ್‌ನಲ್ಲಿ ಭಾರತದಲ್ಲಿನ ಎಲೆಕ್ಟ್ರಿಕ್ ವಾಹನ  ಕ್ರಾಂತಿ ಕುರಿತು ಮಾತನಾಡಲಿದ್ದಾರೆ.