ಬೆಲೆ 6 ಲಕ್ಷ, ಚೀನಾದ R1 ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣ!

ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯ R1 ಎಲೆಕ್ಟ್ರಿಕ್ ಕಾರು ವಿಶ್ವದ ಅತ್ಯಂತ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಈ ಅಗ್ಗದ ಕಾರು ಭಾರತದಲ್ಲಿ ಅನಾವರಣಗೊಂಡಿದೆ. ನೂತನ ಕಾರಿನ ವಿಶೇಷತೆ, ಮೈಲೇಜ್ ಹಾಗೂ ಇತರ ಮಾಹಿತಿ ಇಲ್ಲಿದೆ.

World Cheapest China electric car unveiled Auto expo 2020 Delhi

ಗ್ರೇಟರ್ ನೋಯ್ಡಾ(ಫೆ.09): ಕಡಿಮೆ ಬೆಲೆ, ಹೆಚ್ಚು ಫೀಚರ್ಸ್, ಆಕರ್ಷಕ. ಚೀನಾ ಉತ್ಪನ್ನಗಳೇ ಹಾಗೆ, ಮೊಬೈಲ್ ಇರಲಿ, ಇನ್ಯಾವುದೇ ವಸ್ತುಗಳೇ ಇರಲಿ. ಬ್ರ್ಯಾಂಡೆಡ್ ಕಂಪನಿಗಳನ್ನೇ ಹೇಳ ಹೆಸರಿಲ್ಲದಂತೆ ಮಾಡುವ ಸಾಮರ್ಥ್ಯ ಚೀನಾ ವಸ್ತುಗಳಿಗಿದೆ. ಇದೀಗ ವಿಶ್ವದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯ R1 ಕಾರು ಭಾರತದಲ್ಲಿ ಅನಾವರಣಗೊಂಡಿದೆ.

ಇದನ್ನೂ ಓದಿ: ಚೀನಾದ ಕಡಿಮೆ ಬೆಲೆಯ ಬರ್ಡ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣ!

R1 ಕಾರಿನ ಭಾರತದ ಬೆಲೆ 6.15 ರಿಂದ 7.30 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಗ್ರೇಟ್ ವಾಲ್ ಮೋಟಾರ್ಸ್ ಹೇಳಿದೆ. ಭಾರತದ ಅತೀ ದೊಡ್ಡ ಅಟೋ ಎಕ್ಸ್ಪೋದಲ್ಲಿ ಈ ಎಲೆಕ್ಟ್ರಿಕ್ ಕಾರು ಅನಾವರಣಗೊಂಡಿದೆ. ಸಂಪೂರ್ಣ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡಲಿದೆ. 48 ps ಪವರ್ ಹಾಗೂ 125nm ಪೀಕ್ ಟಾರ್ಕ್ ಪವರ್ ಹೊಂದಿದೆ. 40 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ.

ಇದನ್ನೂ ಓದಿ: ಭಾರತದಲ್ಲಿ ಅನಾವರಣಗೊಂಡಿತು ಚೀನಾ ಕಾರು, ಶುರುವಾಯ್ತು ದರ್ಬಾರು!

ಚೀನಾದಲ್ಲಿ ಇದೇ ಕಾರು ಒರಾ ಹೆಸರನಲ್ಲಿ ಅನಾವರಣಗೊಂಡಿದೆ. R1 ಕಾರು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಬೇಸ್ ವೇರಿಯೆಂಟ್ ಕಾರಿನಲ್ಲಿ 28.5 kWh ಬ್ಯಾಟರಿ ಮೋಟಾರ ಬಳಸಲಾಗಿದ್ದರೆ, ಟಾಪ್ ಮಾಡೆಲ್ ಕಾರಿನಲ್ಲಿ 33 kWh ಬ್ಯಾಟರಿ ಬಳಸಲಾಗಿದೆ. ವಿಶೇಷ ಅಂದರೆ ಚಿಕ್ಕ ಕಾರಿನಲ್ಲಿ 6 ಏರ್‌ಬ್ಯಾಗ್ ಹಾಗೂ ಆಟೋನೊಮಸ್ ಎರ್ಮಜೆನ್ಸಿ ಬ್ರೇಕ್ ಸೌಲಭ್ಯ ಲಭ್ಯವಿದೆ. 

Latest Videos
Follow Us:
Download App:
  • android
  • ios