ದೆಹಲಿ(ಏ.03): ಪಾರ್ಕ್ ಮಾಡಿದ ಕಾರು ಬೈಕ್ ಸೇರಿದಂತೆ ಯಾವುದೇ ವಾಹನಗಳನ್ನು ತೆಗೆಯುವಾಗ ಎಚ್ಚರ ವಹಿಸೋದು ತುಂಬಾ ಮುಖ್ಯ. ಪಾರ್ಕ್ ಮಾಡಿದ ವಾಹನಗಳ ಒಳಗೆ ಹಾವುಗಳು ಸೇರಿಕೊಳ್ಳುವ ಸಾಧ್ಯತೆ ಹೆಚ್ಚು. ಇದೀಗ ಹೊಂಡಾ ಯುನಿಕಾರ್ನ್ ಬೈಕ್ ಒಳಗಡೆ ಹೆಬ್ಬಾವು ಸೇರಿಕೊಂಡು ಎಲ್ಲರನ್ನೂ ಬೆಚ್ಚಿ ಬೀಳಿಸಿದ ಘಟನೆ ನಡೆದಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬುಲೆಟ್ 350 ABS ಬೈಕ್ ಬೆಲೆ ಬಹಿರಂಗ!

ಪಾರ್ಕ್ ಮಾಡಿದ್ದ ಹೊಂಡಾ ಯುನಿಕಾರ್ನ್  ಬೈಕ್‌ನ ಹಿಂಭಾಗದ ಚಕ್ರದ ಮೇಲ್ಭಾಗ ಹಾಗೂ ಸೈಲೆನ್ಸ್ ಬದಿಯಲ್ಲಿ ಹೆಬ್ಬಾವು ಸುತ್ತಿಕೊಂಡು ಮಲಗಿದೆ. 7-9 ಅಡಿ ಉದ್ದವಿರುವ ಹೆಬ್ಬಾವು ಬೈಕ್ ಮಾಲೀಕನಿಗೆ ಶಾಕ್ ನೀಡಿದೆ. ಅದೆಷ್ಟೇ ಪ್ರಯತ್ನ ಪಟ್ಟರೂ ಹೆಬ್ಬಾವು ಮಾತ್ರ ಅಲುಗಾಡದೇ ಮಲಗಿತ್ತು. ಕೊನೆಗೆ ಹಾವು ಹಿಡಿಯುವವರನ್ನು ಕರೆ ತರಬೇಕಾಯಿತು.

ಇದನ್ನೂ ಓದಿ: ಉದ್ಯಮಿಗಳ ಜೊತೆ BMW ಕಾರಿನಲ್ಲಿ ಹಾವು ಪ್ರಯಾಣ-ಮುಂದೇನಾಯ್ತು?

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು:
ಈ ರೀತಿ ಸಂದರ್ಭಗಲ್ಲಿ ಎಚ್ಚರವಹಿಸುವುದು ಅಗತ್ಯ. ಹಾವು ಸೇರಿಕೊಂಡಿದೆ ಎಂದು ತಿಳಿದ ತಕ್ಷಣ ಗಾಬರಿಯಾಗಬೇಡಿ. ಕಾರಣ ಯಾವುದೇ ಹಾವು ಸುಖಾ ಸುಮ್ಮನೆ ಮೈಮೇಲೆ ಎರಗುವುದಿಲ್ಲ. ಹಾವನ್ನು ಭಯಬೀಳಿಸೋ ಅಥವಾ ಹಾವಿಗೆ ನೋವು, ಗಾಯ ಮಾಡೋ ಪ್ರಯತ್ನಕ್ಕೆ ಮುಂದಾಬೇಡಿ. ಹಾವು ಹಿಡಿಯುವವರನ್ನು ಕರೆಸುವುದು ಒಳಿತು. ಆದರೆ ಹೆಚ್ಚಿನ ಜನರನ್ನು ಸೇರಿಸಿ ಹಾವನ್ನು ಮತ್ತಷ್ಟು ಭಯಭೀತಗೊಳಿಸಬೇಡಿ.

ಕಾರು ಅಥವಾ ವಾಹನ ಚಲಾವಣೆಗೂ ಮುನ್ನ ಸಂಪೂರ್ಣ ಪರೀಕ್ಷಿಸಿ. ಡ್ರೈವಿಂಗ್ ವೇಳೆ ಹಾವು ಕಾಣಿಸಿದರೆ, ತಕ್ಷಣ ಕಾರು ನಿಲ್ಲಿಸಿ, ಕಾರಿನಿಂದ  ಇಳಿಯಿರಿ. ಕೆಲ ಹೊತ್ತು ನಿಲ್ಲಿಸಿ ಹಾಗೂ ಯಾವುದೇ ಕಸರತ್ತಿಗೂ ಮುಂದಾಗಬೇಡಿ. ಸುಮ್ಮನ್ನಿದ್ದರೆ ಹಾವು ವಾಹನದಿಂದ ಇಳಿದು ಹೋಗುವ ಸಾಧ್ಯತೆ ಇದೆ.