ಚಲಿಸುತ್ತಿದ್ದ ಕಾರಿನಲ್ಲಿ ಹಾವಿನಾಟ- ಒಳಗಿದ್ದವರಿಗೆ ಪ್ರಾಣಸಂಕಟ!

ಕಾರಿನಲ್ಲಿ ಹಾವು ಕಾಣಿಸಿಕೊಳ್ಳೋದು ಮೊದಲೇನಲ್ಲ. ಹಾವು ಕಂಡ  ತಕ್ಷಣ ಕಾರು ನಿಲ್ಲಿಸಿ ಹಾವನ್ನು ಹೊರತೆಗೆಯೋ ಪ್ರಯತ್ನ ಮಾಡುತ್ತಾರೆ. ಆದರೆ ಇಲ್ಲಿ ಕಾರಿನಲ್ಲಿ ಹಾವು ಆಟ ಶುರು ಮಾಡಿದ್ದರೆ, ಪ್ರಯಾಣಿಕರು ಕಾರನ್ನು ನಿಲ್ಲಿಸದೆ ಹಾವನ್ನು ಹೊರಕಳುಹಿಸಿದ್ದಾರೆ. ಪ್ರಯಾಣಿಕರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
 

Snake found in moving car flicked off by wiper

ಕನಾಸ್ ಸಿಟಿ(ಜು.02): ಕಾರಿನ ಎಂಜಿನ್ ಸೇರಿಕೊಂಡ ಹಾವು, ಚಲಿಸುತ್ತಿದ್ದಾಗ ಬುಸುಗುಟ್ಟಿದ ಹಾವು ಸೇರಿದಂತೆ ಹಲವು ಸಂದರ್ಭಗಳಲ್ಲಿ ವಾಹನದೊಳಗೆ ಹಾವು ಸೇರಿಕೊಂಡ  ಘಟನೆ ವರದಿಯಾಗಿದೆ. ಆದರೆ ಅಮೇರಿಕಾದ ಕನಾಸ್ ಸಿಟಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಹಾವು ಅತ್ತಿಂದಿತ್ತ ಚಲಿಸಿ, ಪ್ರಯಾಣಿಕರಲ್ಲಿ ಭಯದ ವಾತವರಣ ಸೃಷ್ಟಿಸಿದೆ.

ಕನಾಸ್ ಸಿಟಿಯಲ್ಲಿ ಇಬ್ಬರು ಗೆಳೆಯರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಕಾರಿ ಸೈಡ್ ಮಿರರ್ ಬಳಿ ಹಾವು ಕಾಣಿಸಿಕೊಂಡಿದೆ.  ಕಾರಿನ ವಿಂಡೋ ಗ್ಲಾಸ್ ಮುಚ್ಚಲಾಗಿತ್ತು. ಹೀಗಾಗಿ ಇಬ್ಬರು ಗೆಳೆಯರು ಕಾರನ್ನು ನಿಲ್ಲಿಸಿ ಕಾರಿನಿಂದ ಇಳಿಯುವ ಪ್ರಯತ್ನಕ್ಕೆ ಮುಂದಾಗಲಿಲ್ಲ. ಇತ್ತ ಭಯಗೊಂಡ  ಹಾವು ಕಾರಿನಿಂದ ಇಳಿದು ಹೋಗಲು ಪ್ರಯತ್ನಿಸುತ್ತಿತ್ತು.

ಇದನ್ನೂ ಓದಿ: ಸ್ಕೂಟರ್ ಒಳಗಡೆ ನಾಗಣ್ಣ- ಹಾವಿನ ರಕ್ಷಣೆಗಾಗಿ ವಾಹನ ಬಿಚ್ಚಿದ ಮಾಲೀಕ!

ಆದರೆ ಇಬ್ಬರು ಗೆಳೆಯರು ಕಾರು ನಿಲ್ಲಿಸೋ ಗೋಜಿಗೆ ಹೋಗಿಲ್ಲ. ಅದೇ ವೇಗದಲ್ಲಿ ಕಾರು ಚಲಿಸುತ್ತಿತ್ತು. ಇತ್ತ ಹಾವು ಸೈಡ್ ಮಿರರ್ ಬಳಿಯಿಂದ ಮುಂಭಾಗದ ಗಾಜಿನ ಮೇಲೆ ಓಡಾಟ ಶುರುಮಾಡಿತು. ವೇಗವಾಗಿ ಚಲಿಸುತ್ತಿದ್ದ ಕಾರಣ ಹಾವಿಗೆ ದಿಕ್ಕೇ ತೋಚದಾಗಿದೆ. ಮುಂಭಾಗ ಗಾಜಿನ ಎಡಬದಿಗೆ ಬರುತ್ತಿದ್ದಂತೆ ವೈಪರ್ ಆನ್ ಮಾಡಿದ್ದಾರೆ. ಹೀಗಾಗಿ ಹಾವು ಕಾರಿನಿಂದ ಕೆಳಕ್ಕೆ ಬಿದ್ದಿದೆ.  

 

ಇದನ್ನೂ ಓದಿ: ಸ್ಕೂಟರ್ ಏರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ನಾಗಣ್ಣ!

ಕಾರು ನಿಲ್ಲಿಸದೆ ಹಾವಿಗೆ ಸುಗಮವಾಗಿ ಕಾರಿನಿಂದ ಇಳಿಯಲು ಅವಕಾಶ ಮಾಡಿಕೊಡ ಪ್ರಯಾಣಿಕರ ಮೇಲೆ ಆಕ್ರೋಶ ವ್ಯಕ್ತವಾಗಿದೆ. ಪಾರ್ಕ್ ಮಾಡಿದಾಗ ಹಾವು ಕಾರಿನಲ್ಲಿ ಸೇರಿಕೊಂಡಿದೆ. ಆದರೆ ಹಾವು ಕಂಡ  ತಕ್ಷಣ ಕಾರನ್ನು ನಿಲ್ಲಿಸಿ ಹಾವಿಗೆ ಕಾರಿನಿಂದ ಇಳಿದು ಹೋಗಲು ಅವಕಾಶ ಮಾಡಿಕೊಟಬೇಕಿತ್ತು.  ವನ್ಯ ಜೀವಿಗೆ ತೊಂದರೆ ಕೊಟ್ಟ ಕಾರಣ ಇಬ್ಬರನ್ನೂ ಬಂಧಿಸಿ ಎಂಬ ಕೂಗು ಕೇಳಿಬಂದಿದೆ.

Latest Videos
Follow Us:
Download App:
  • android
  • ios