ನವದೆಹಲಿ(ನ.06):  ಮಿಡ್ ಸೈಝ್ ಮೋಟಾರ್‌ಸೈಕಲ್ ಸಿಗ್ಮೆಂಟ್ (250 CC -750 CC) ಮಟ್ಟಿಗೆ ಜಗತ್ತಿನ ಪ್ರಮುಖ ಕಂಪನಿಯಾಗಿರುವ ರಾಯಲ್ ಎನ್‌ಫೀಲ್ಡ್ ಇಂದು ತನ್ನ ಹೊಸ ಈಸಿ ಕ್ರೂಸರ್, ರಾಯಲ್ ಎನ್‌ಫೀಲ್ಡ್ ಮೀಟಿಯೋರ್ 350 ಬೈಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅರ್ಜೆಂಟೀನ ಪೊಲೀಸರಿಗೆ ಭಾರತದ ರಾಯಲ್ ಎನ್‌ಫೀಲ್ಡ್ ಬೈಕ್!

ರಾಯಲ್ ಎನ್‌ಫೀಲ್ಡ್ ಮೀಟಿಯೊರ್ 350 ಖಚಿತವಾಗಿಯೂ ಕ್ರೂಸರ್‌ಗಳಿಗೆ ಹೊಸ ಬೆಂಚ್‌ಮಾರ್ಕ್ ಆಗಲಿದೆ. ಸಿಟಿ ರೈಡಿಂಗ್‌ ಮೋಟಾರ್‌‌ಸೈಕಲ್ಲಿನ ವಿಶಿಷ್ಟ ಅಗತ್ಯಗಳನ್ನು ಗಮನದಲ್ಲಿರಿಸಿ ಜೊತೆಗೆ  ಹೈವೇ ರೈಡಿಂಗ್ ಗಾಗಿ ಮತ್ತು ದೈನಂದಿನ ಜೀವನದ ಒತ್ತಡಗಳಿಂದ ಪಾರಾಗಲು ಅನುವು ಮಾಡಿಕೊಡುವ ರೈಡಿಂಗ್‌ ಗಳಿಗೂ ಸೂಕ್ತವಾಗಿರುವಂತೆ ತಯಾರಿಸಲಾಗಿದೆ. ಮೀಟಿಯೊರ್ 350 ಸುಮಾರು 350 ನಗರಗಳಲ್ಲಿ 560 ಡೀಲರ್‌ ಶಿಪ್‌‌ಗಳಲ್ಲಿ ಇಂದಿನಿಂದಲೇ ಟೆಸ್ಟ್ ರೈಡಿಂಗ್ ಗಾಗಿ ಲಭ್ಯವಿರುತ್ತದೆ. ದೇಶದ ಎಲ್ಲಾ ಡೀಲರ್ ಶಿಪ್‌ ಗಳಲ್ಲಿಯೂ ಬುಕಿಂಗ್ ಆರಂಭಿಸಲಾಗುವುದು. ರಾಯಲ್ ಎನ್‌ಫೀಲ್ಡ್ ಮೀಟಿಯೊರ್ 350 ಮೋಟಾರ್‌ಸೈಕಲ್ ಡೆಲಿವರಿಗಳನ್ನು ನವೆಂಬರ್ 7, 2020 ರಿಂದ ನೀಡಲಾಗುವುದು. ಮೀಟಿಯೊರ್ 350 ಫೈರ್‌ಬಾಲ್‌ ರೂ. 1,75,817, ಸ್ಟೆಲ್ಲಾರ್ ಗೆ ರೂ. 1,81,326 ಮತ್ತು ಸೂಪರ್‌‌ನೋವಾ ಎಡಿಶನ್ ರೂ. 1,90,536 ನ ಆರಂಭಿಕ ಬೆಲೆಗಳಲ್ಲಿ ಲಭ್ಯವಿರುತ್ತದೆ. (ಎಲ್ಲವೂ ಚೆನ್ನೈನ ಎಕ್ಸ್ ಶೋರೂಂ ಬೆಲೆಗಳು)

ಕೊರೋನಾ ನಡುವೆ: ಸದ್ದು ಮಾಡಿದ ರಾಯಲ್ ಎನ್‌ಫೀಲ್ಡ್ ಬೈಕ್‌ನ 4 ವಿಚಾರ!

ಕ್ರೂಸರ್ ಬೈಕ್ ರಾಯಲ್‌ ಎನ್‌ಫೀಲ್ಡ್‌ಗೆ ಹೊಸದಲ್ಲ.  1990 ರ ದಶಕದಲ್ಲಿ ಸಿಟಿಬೈಕ್ ನಂತರ ಲೈಟ್ನಿಂಗ್ ಹಾಗೆಯೇ, 2002 ರಲ್ಲಿ ಭಾರತದ ಮೊದಲ ಹೈವೇ ಕ್ರೂಸರ್ ಮೊದಲ ಜನರೇಶನ್‌ನ ಥಂಡರ್‌ಬರ್ಡ್‌ ಬಿಡುಗಡೆ ಮಾಡಿತು. ನಂತರದ ಬದಲಾವಣೆಗಳಾಗಿ, 2008 ರಲ್ಲಿ ಯುಸಿಇ ಟ್ವಿನ್-ಸ್ಪಾರ್ಕ್ ಥಂಡರ್ ಬರ್ಡ್ ಮತ್ತು 2018 ರಲ್ಲಿ ಥಂಡರ್ಬರ್ಡ್ ಎಕ್ಸ್, ಭಾರತದ ಕ್ರೂಸರ್ ಸೆಗ್ಮೆಂಟ್  ಬಿಡುಗಡೆ ಮಾಡಿತು.   ಸದ್ಯ ನಗರದೊಳಗಡೆಯ ಪ್ರಯಾಣ ಹಾಗೂ ಹೈವೆ ರೈಡ್ ಎರಡಕ್ಕೂ ಸೂಕ್ತವಾಗಿರುವ ವಾಹನವನ್ನು ಒದಗಿಸುತ್ತದೆ. ಮೀಟಿಯೊರ್ 350 ಅದನ್ನು ಮತ್ತಷ್ಟು ಮುಂದುವರಿಸಲಿದೆ ಮತ್ತು ಈ ವಿಶ್ವಾಸಾರ್ಹ ಪರಂಪರೆ ಮತ್ತು ಲಾಂಗ್ ಡಿಸ್ಟನ್ಸ್ ರೈಡಿಂಗ್ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲಿದೆ.

ಒಂದೇ ದಿನ ಒಂದು ಸಾವಿರ ಬೈಕ್ ಡೆಲಿವರಿ; ದಾಖಲೆ ಬರೆದ ರಾಯಲ್ ಎನ್‌ಫೀಲ್ಡ್!..

ಮೀಟಿಯೋರ್ ಹೆಸರು:
ಮೀಟಿಯೋರ್ ತನ್ನ ಹೆಸರನ್ನು 1950 ರ ದಶಕದಲ್ಲಿ ಮಾರುಕಟ್ಟೆಯಲ್ಲಿದ್ದ ಐಕಾನಿಕ್ ಆದ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನಿಂದ ಪಡೆದುಕೊಂಡಿದೆ. 1952 ರ ಕೊನೆಯಲ್ಲಿ ಬಿಡುಗಡೆಯಾಗಿದ್ದ ಮೀಟಿಯೋರ್ ಒಂದು ಅದ್ಭುತ ಟೂರಿಂಗ್ ಮೋಟಾರ್‌ಸೈಕಲ್ ಆಗಿದ್ದು, ಸುದೀರ್ಘವಾದ ಕಾಲಾವಧಿಗೆ ಜನಪ್ರಿಯವಾಗಿತ್ತು. ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್ 350 ಈಸಿ-ಕ್ರೂಸರ್, ರಾಯಲ್ ಎನ್‌ಫೀಲ್ಡ್ ಸಿಗ್ನೇಚರ್ ಸ್ಟೈಲಿಂಗ್ ಅನ್ನು ಹೊಂದಿದೆ ಮತ್ತು ಅನೇಕ ಹೊಸ ಟೆಕ್ನಾಲೊಜಿಗಳ ಮೂಲಕ, ಸಮಕಾಲೀನ ಅಗತ್ಯಗಳನ್ನು ಪೂರೈಸುವ ಅತ್ಯುತ್ತಮ ಕ್ರೂಸರ್ ಬೈಕ್ ಆಗಿದೆ.

ಕೊಂಚ ಬದಲಾವಣೆಯೊಂದಿಗೆ ಬಿಎಸ್‌6 ಇಂಜಿನ್‌ನ ರಾಯಲ್‌ ಬೈಕು!.

ಮೀಟಿಯೋರ್ 350 ಅತ್ಯಂತ ಪರಿಷ್ಕೃತ, ಸುಲಭ ರೈಡಿಂಗ್ ಒದಗಿಸುವ ಮತ್ತು ಆಕ್ಸೆಸೆಬಲ್ ಕ್ರೂಸರ್ ಆಗಿದೆ. ಇದರಲ್ಲಿರುವ ಅತ್ಯಾಧುನಿಕ ತಾಂತ್ರಿಕತೆಗಳನ್ನು ಕ್ಲಾಸಿಕ್ ಕ್ರೂಸರ್ ಸ್ಟೈಲಿಂಗ್‌ ಜೊತೆಯಲ್ಲಿ ಆಕರ್ಷಕವಾಗಿ ಸಂಯೋಜಿಸಲಾಗಿದೆ. ಹೊಸ ರೈಡರ್‌‌ಗಳು ಮತ್ತು ಎಕ್ಸ್‌ಪರ್ಟ್‌ ರೈಡರ್‌‌ಗಳಿಬ್ಬರಿಗೂ ಉತ್ತಮ ಪ್ರಯಾಣದ ಅನುಭವವನ್ನು ಒದಗಿಸುವ ಮೋಟಾರ್‌‌ಸೈಕಲ್ ಅನ್ನು ತಯಾರಿಸುವುದು ನಮ್ಮ ಇಚ್ಛೆಯಾಗಿತ್ತು. ಮೀಟಿಯೊರ್ 350 ಅವೆಲ್ಲವನ್ನು ಹೊಂದಿರುವ ಪರಿಪೂರ್ಣವಾದ ಬೈಕ್ ಆಗಿದೆ. ಇದು ದೂರಪ್ರಯಾಣ, ರೈಡಿಂಗ್ ಮತ್ತು ಹೈವೇ ಪ್ರಯಾಣಕ್ಕಾಗಿ ಸುಲಭ, ಆರಾಮದಾಯಕ ಮತ್ತು ಸಂಪೂರ್ಣವಾಗಿ ಆನಂದದಾಯಕವಾಗಿದೆ, ಹಾಗಿದ್ದರೂ ಅತ್ಯುತ್ತಮ ಸಿಟಿ ರೈಡಿಂಗ್ ಅನುಭವವನ್ನೂ ನೀಡುತ್ತದೆ ಎಂದು  ಐಷರ್ ಮೋಟಾರ್ಸ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸಿದ್ಧಾರ್ಥ ಲಾಲ್ ಹೇಳಿದರು.

ಮೋಟಾರ್‌‌ಸೈಕಲ್‌‌ನ ಬ್ಯಾಲನ್ಸ್, ಅದರ ಚುರುಕಾದ ನಿರ್ವಹಣೆ ಮತ್ತು ಅಪ್ ರೇಟೆಡ್ ಬ್ರೇಕಿಂಗ್ ಎಲ್ಲವೂ ಸಾಟಿಯಿಲ್ಲದ ಸವಾರಿ ಅನುಭವವನ್ನು ಒದಗಿಸುತ್ತವೆ. ಮೀಟಿಯೊರ್ ರಾಯಲ್ ಎನ್‌ಫೀಲ್ಡ್ ಅಪ್ಲಿಕೇಶನ್‌ ಅನ್ನು ಕನೆಕ್ಟ್ ಮಾಡುವ ಅನುಕೂಲಕರ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಪಾಡ್, ರಾಯಲ್ ಎನ್‌ಫೀಲ್ಡ್ ಟ್ರಿಪ್ಪರ್‌ ಅನ್ನು ಕೂಡ ಹೊಂದಿದೆ. ಸ್ಥಳೀಯ ಗೂಗಲ್ ಮ್ಯಾಪ್ ಇಂಟಿಗ್ರೇಶನ್ ಮೂಲಕ ನ್ಯಾವಿಗೇಷನ್ ಅನ್ನು ಸರಳ ಮತ್ತು ತ್ವರಿತವಾಗಿ ತಿಳಿಯುವಂತಾಗಿಸಲು ನಾವು ಸಾಕಷ್ಟು ಸಮಯ ಮತ್ತು ಶ್ರಮವನ್ನು ಹೂಡಿಕೆ ಮಾಡಿದ್ದೇವೆ. ಹೋಗಬೇಕಾದ ರಸ್ತೆಯ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಇದು ಸ್ಪಷ್ಟವಾದ ರೀತಿಯಲ್ಲಿ ರೈಡರ್‌‌ಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸ್ಪಷ್ಟವಾಗಿ ನೀಡುತ್ತದೆ. ಇದು ರೈಡರ್‌ಗೆ ಗೊಂದಲವಾಗದಂತೆ ನೋಡಿಕೊಳ್ಳುತ್ತದೆ ಮತ್ತು ದಾರಿ ತಪ್ಪಿ ಕಷ್ಟ ಅನುಭವಿಸುವುದನ್ನು ತಡೆಯುತ್ತದೆ. ಒಟ್ಟಾಗಿ ಇದು ಅತ್ಯುತ್ತಮ ಟೂ-ವೀಲರ್ ನ್ಯಾವಿಗೇಶನ್ ಸಪೋರ್ಟ್. ಮೀಟಿಯೊರ್ 350 ಅದ್ಭುತವಾದ, ಪರಿಷ್ಕೃತ ಮೋಟಾರ್‌‌ಸೈಕಲ್ ಮತ್ತು ಇದು ಭಾರತೀಯ ರಸ್ತೆಗಳಲ್ಲಿ ರೈಡ್ ಮಾಡುವ ಮಟ್ಟಿಗೆ ಹೊಸ ಯುಗವನ್ನು ತರುತ್ತದೆ ಎಂದು ನಾವು ನಂಬುತ್ತೇವೆ ” ಎಂದರು.
ಕ್ರೂಸರ್‌ಗಳಲ್ಲಿ ಹೊಸ ಬೆಂಚ್‌ಮಾರ್ಕ್‌‌ಗಳನ್ನು ಸೆಟ್ ಮಾಡುವಂತೆ, ರಾಯಲ್ ಎನ್‌ಫೀಲ್ಡ್ ಮೀಟಿಯೋರ್ 350 3 ಎಡಿಶನ್‌‌‌‌ಗಳಲ್ಲಿ ಲಭ್ಯವಿರುತ್ತದೆ - ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌‌‌ನೋವಾ. ಸಿಟಿ ರೈಡಿಂಗ್‌ ಮೋಟಾರ್‌‌ಸೈಕಲ್ಲಿನ ವಿಶಿಷ್ಟ ಅಗತ್ಯಗಳನ್ನು ಗಮನದಲ್ಲಿರಿಸಿ ಅಂತೆಯೇ ಹೈವೇ ರೈಡಿಂಗ್ ಗಾಗಿ ಮತ್ತು ದೈನಂದಿನ ಜೀವನದ ಒತ್ತಡಗಳಿಂದ ಪಾರಾಗಲು ಅನುವು ಮಾಡಿಕೊಡುವ ರೈಡಿಂಗ್‌ ಗಳಿಗೂ ಸೂಕ್ತವಾಗಿರುವಂತೆ ತಯಾರಿಸಲಾಗಿದೆ.

ಮೀಟಿಯೊರ್ 350 ಬಿಡುಗಡೆಯೊಂದಿಗೆ, ರಾಯಲ್ ಎನ್‌ಫೀಲ್ಡ್‌ನ ಮೇಕ್ ಇಟ್ ಯುವರ್ಸ್  ಇನಿಶಿಯೇಟೀವ್ ಕೂಡ ಪರಿಚಯಿಸಿಲಾಗಿದ್ದು, ಇದು ಒಂದು ವಿಶಿಷ್ಟವಾದ ಮೋಟಾರ್‌ಸೈಕಲ್ ಅನ್ನು ನಮಗೆ ಬೇಕಾದಂತೆ ರೂಪಿಸುವ ವಿಧಾನ. ಮೀಟಿಯೊರ್ 350 ಮೂಲಕ, ಮಾಲೀಕರು ತಮ್ಮ ಮೋಟಾರ್‌ಸೈಕಲ್ ಅನ್ನು ರಾಯಲ್ ಎನ್‌ಫೀಲ್ಡ್ ಆ್ಯಪ್ ಮೂಲಕ, ವೆಬ್‌ಸೈಟ್‌ನಲ್ಲಿ ಅಥವಾ ಡೀಲರ್‌ ಗಳಲ್ಲಿ ಆರ್ಡರ್ ಮಾಡಿದಾಗ ಲಭ್ಯವಿರುವ ಕಸ್ಟಮೈಸೇಶನ್ ನ ಆಯ್ಕೆಗಳಲ್ಲಿ ಸಾವಿರಾರು ಸಂಭಾವ್ಯ ಸಂಯೋಜನೆಗಳನ್ನು ಗಮನಿಸಬಹುದು. 7 ಸ್ಟ್ಯಾಂಡರ್ಡ್ ಬಣ್ಣಗಳ ಜೊತೆಗೆ, 3 ಎಡಿಶನ್‌ ಗಳ ಅಡಿಯಲ್ಲಿ, ಗ್ರಾಹಕರಿಗೆ ಹೆಚ್ಚುವರಿ 8 ಬಣ್ಣಗಳ ಆಯ್ಕೆಗಳನ್ನು ಎಂಐವೈ ಒದಗಿಸುತ್ತದೆ.

ಬಿಡುಗಡೆಯ ಕುರಿತು ಮತ್ತು ನಿರ್ದಿಷ್ಟವಾಗಿ ಮೇಕ್ ಇಟ್ ಯುವರ್ಸ್ ಉಪಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ರಾಯಲ್ ಎನ್‌ಫೀಲ್ಡ್ ಸಿಇಒ ವಿನೋದ್ ಕೆ. ದಾಸರಿ ಅವರು “ಮೀಟಿಯೊರ್ 350 ರೊಂದಿಗೆ, ನಾವು ಜನರಿಗೆ ಇದು ಬ್ರ್ಯಾಂಡ್‌ನೊಂದಿಗೆ ತೊಡಗಿಸಿಕೊಳ್ಳಲು ಮತ್ತು ಅವರ ಖರೀದಿ ಮತ್ತು ಮಾಲೀಕತ್ವದಲ್ಲಿ ಸ್ವಂತಿಕೆಯ ಅನುಭವವನ್ನು ಪಡೆಯುವ ಸಂಪೂರ್ಣ ಹೊಸ ಹಾದಿಯನ್ನು ತೋರಿಸುವ ಒಂದು ಅದ್ಭುತವಾದ ಮೋಟಾರ್‌ಸೈಕಲ್ ಅನ್ನು ತಯಾರಿಸಲು ಪ್ರಯತ್ನಿಸಿದ್ದೇವೆ. ಕಳೆದ ದಶಕದಲ್ಲಿ ಮೋಟಾರ್‌‌‌ಸೈಕಲ್ ಕಸ್ಟಮೈಸೇಶನ್ ಅಗಾಧ ಪ್ರಮಾಣದಲ್ಲಿ ಬೆಳೆದಿದ್ದರೂ ಕೂಡ, ಕಸ್ಟಮೈಸೇಶನ್ ಮೂಲಕ ಖರೀದಿಯ ಅನುಭವವನ್ನು ಹೊಂದುವುದಕ್ಕೆ ಆಯ್ಕೆಗಳು ಪ್ರಾಯೋಗಿಕವಾಗಿ ಲಭ್ಯವಿಲ್ಲ. ನಾವು ಅದನ್ನು ಬದಲಾಯಿಸಿದ್ದೇವೆ. ನಮ್ಮ ಮ್ಯಾನ್ಯುಫ್ಯಾಕ್ಚರಿಂಗ್ ಟೀಮ್ ನಮ್ಮ ವಿಶ್ವಸ್ತರದ ವಲ್ಲಂ ವಡಗಲ್ ಪ್ಲಾಂಟ್ ನಲ್ಲಿ ಹೊಸ ಮ್ಯಾನ್ಯುಫ್ಯಾಕ್ಚರಿಂಗ್ ಸಿಸ್ಟಂಗಳನ್ನು ಅಭಿವೃದ್ಧಿಪಡಿಸುವಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದೆ ಮತ್ತು ಪ್ರೇರಣೆ ನೀಡುವ, ಘರ್ಷಣೆಯಿಲ್ಲದ ಆರ್ಡರ್ ಮಾಡುವ ಸಿಸ್ಟಂ ಅನ್ನು ರೂಪಿಸಿದೆ. ನಮ್ಮ ಗ್ರಾಹಕರು ತಮ್ಮ ಹೊಸ ಮೋಟರ್‌ಸೈಕಲ್‌ಗಳನ್ನು ಆರ್ಡರ್ ಮಾಡುವಾಗ ವಿಶಾಲ ವ್ಯಾಪ್ತಿಯ ಪರ್ಸನಲೈಸೇಶನ್ ಆಪ್ಷನ್‌‌ ಗಳನ್ನು ನೀಡುವ ಮೊದಲ ಭಾರತೀಯ ಮೋಟಾರ್‌ಸೈಕಲ್ ಕಂಪನಿ ಎನ್ನುವ ಕುರಿತು ನಾವು ತುಂಬಾ ಹೆಮ್ಮೆಪಡುತ್ತೇವೆ ” ಎಂದು ಹೇಳಿದರು.

ರಾಯಲ್ ಎನ್‌ಫೀಲ್ಡ್‌ ನ ತಮಿಳುನಾಡಿನ ಚೆನ್ನೈ, ಮತ್ತು ಯುಕೆಯಲ್ಲಿನ ಬ್ರಂಟಿಂಗ್‌ಥೋರ್ಪ್‌ನ ಎರಡು ಅತ್ಯಾಧುನಿಕ ಟೆಕ್ನಿಕಲ್ ಸೆಂಟರ್‌ ಗಳಲ್ಲಿ ಪ್ರತಿಭಾನ್ವಿತ ಡಿಸೈನರುಗಳು ಮತ್ತು ಎಂಜಿನಿಯರ್‌ಗಳ ಟೀಂಗಳು ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಮೀಟಿಯೋರ್ 350 ಆಕರ್ಷಕ ಮೋಟಾರ್‌ಸೈಕಲ್ ಆಗಿದೆ.

ಎಲ್ಲಾ ಪ್ರಮುಖ ರಾಯಲ್ ಎನ್‌ಫೀಲ್ಡ್ ಡಿಎನ್‌ಎಗಳನ್ನು ಉಳಿಸಿಕೊಂಡು ನೈಜ ಅತ್ಯುತ್ತಮವಾದ, ಆಧುನಿಕ ಮೋಟಾರ್‌ಸೈಕಲ್ ಅನ್ನು ಒದಗಿಸಲು ಮೆಕ್ಯಾನಿಕಲ್, ಫಿಟ್ಟಿಂಗ್ ಮತ್ತು ಫಿನಿಶ್ ವಿಭಾಗಗಳಲ್ಲಿ ಪರಿಷ್ಕರಣೆಯ ಮಟ್ಟವನ್ನು ಹೆಚ್ಚಿಸಲಾಗಿದೆ. 349 ಸಿಸಿ ಏರ್-ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಮೀಟಿಯೊರ್ 20.2 ಬಿಹೆಚ್‌ಪಿ ಮತ್ತು 4000 ಆರ್‌ಪಿಎಂನಲ್ಲಿ 27 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಕ್ರೂಸರ್‌ ನ ಮೂಲಭೂತ ಲಕ್ಷಣ ಎನ್ನಬಹುದಾದ ಲೋ-ಡೌನ್ ಗ್ರಂಟ್ ಹೊಂದಿದೆ. ಬ್ಯಾಲೆನ್ಸರ್ ಶಾಫ್ಟ್‌ ನೊಂದಿಗೆ ವಿನ್ಯಾಸಗೊಳಿಸಲಾಗಿರುವ ಈ ಹೊಸ ಪ್ಲಾಟ್‌ಫಾರ್ಮ್ ಸುಗಮ ಮತ್ತು ಸುಸಜ್ಜಿತ ರೈಡಿಂಗ್ ಅನುಭವವನ್ನು ನೀಡುತ್ತದೆ, ಆದಾಗ್ಯೂ ರಾಯಲ್ ಎನ್‌ಫೀಲ್ಡ್ ‘ಥಂಪ್’ ಅನ್ನು ಉಳಿಸಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸಲಾಗಿದೆ. ಎಲೆಕ್ಟ್ರಾನಿಕ್ ಫ್ಯುಯೆಲ್ ಇಂಜೆಕ್ಷನ್‌‌ ನ ಥ್ರೊಟಲ್ ರೆಸ್ಪಾನ್ಸ್ ಅನ್ನು ವಿಶ್ವಾಸಾರ್ಹ ಸ್ಟಾರ್ಟಿಂಗ್ ಮತ್ತು ಪ್ರಯತ್ನವಿಲ್ಲದ, ಲೀನಿಯರ್ ಆಕ್ಸಿಲರೇಶನ್‌ ಗಾಗಿ ಹೊಂದುವಂತೆ ಮಾಡಲಾಗಿದೆ. ವರ್ಸಟೈಲಿಟಿಗಾಗಿ, ಹೊಸ ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ಒತ್ತಡವಿಲ್ಲದ ಮತ್ತು ಮಿತವ್ಯಯದ ಹೈವೇ ಕ್ರೂಸಿಂಗ್ ಗಾಗಿ ಐದನೇ ಗೇರ್ ಮತ್ತು ಟ್ರಾಫಿಕ್‌ ನಲ್ಲಿ ಸುಲಭವಾದ ಗೇರ್ ಬದಲಾವಣೆಗಳಿಗೆ 7-ಪ್ಲೇಟ್ ಕ್ಲಚ್ ನೀಡಲಾಗಿದೆ.

ಮೀಟಿಯೊರ್ 350 ರ ಟ್ವಿನ್ ಡೌನ್‌‌ಟ್ಯೂಬ್ ಸ್ಪ್ಲೈನ್ ​​ಫ್ರೇಮ್ ಅನ್ನು ಟ್ವಿಸ್ಟೀಸ್ ನಲ್ಲಿ ವಿಶ್ವಾಸವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ, ಇದು ಹೈವೇಯಲ್ಲಿ ದೃಢವಾಗಿರುತ್ತದೆ ಮತ್ತು ದಟ್ಟಣೆಯಿರುವ ಸಿಟಿ ಸ್ಟ್ರೀಟ್ ಗಳಲ್ಲಿ ಸುಲಭವಾಗಿ ಓಡಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಸೀಟ್ ಹೈಟ್ ಕಡಿಮೆಯಿರುವುದು ಮತ್ತು ಸೆಂಟರ್ ಆಫ್ ಗ್ರಾವಿಟಿಯು ಅದರ ಒಳಗಿನ ಶಕ್ತಿ ಮತ್ತು ದೃಢತೆಯ ಸಂಯೋಜನೆಯು ಸಿಟಿ ರೈಡರುಗಳಿಗೆ ಇದನ್ನು ಸೂಕ್ತವಾದ ಮೋಟಾರ್‌ಸೈಕಲ್‌ ಆಗಿಸುತ್ತದೆ. ದೃಢವಾದ ನಿರ್ವಹಣೆ ಮತ್ತು ಆರಾಮದಾಯಕ ಪ್ರಯಾಣಕ್ಕೆ 130 ಎಂಎಂ ಟ್ರಾವೆಲ್ ಹೊಂದಿರುವ 41 ಎಂಎಂ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ 6-ಸ್ಟೆಪ್ ಅಡ್ಜಸ್ಟೆಬಲ್ ಪ್ರಿ-ಲೋಡ್‌ನೊಂದಿಗೆ ಟ್ವಿನ್ ಟ್ಯೂಬ್ ಎಮಲ್ಷನ್ ಶಾಕ್ ಅಬ್ಸಾರ್ಬರ್‌ಗಳು ಸಹಾಯ ಮಾಡುತ್ತವೆ. ನೈಜ ಕ್ರೂಸರ್ ಅನುಭವಕ್ಕಾಗಿ, ಹೀಲ್ ಮತ್ತು ಟೋ ಗೇರ್‌ಶಿಫ್ಟ್‌ ನೊಂದಿಗೆ ಫುಟ್‌ಪೆಗ್‌ಗಳನ್ನು ಮುಂದಕ್ಕೆ ಮೌಂಟ್ ಮಾಡಲಾಗಿದೆ.

ರಾಯಲ್ ಎನ್‌ಫೀಲ್ಡ್‌ ನಲ್ಲಿ ಮೊದಲ ಬಾರಿಗೆ, ಮೀಟಿಯೋರ್ 350 ಹೊಸ ಟಿಬಿಟಿ (ಟರ್ನ್-ಬೈ-ಟರ್ನ್) ನ್ಯಾವಿಗೇಷನ್ ಪಾಡ್‌ ಅನ್ನು ಹೊಂದಲಿದೆ, ಗೂಗಲ್ ಮ್ಯಾಪ್ಸ್ ಪ್ಲಾಟ್‌ಫಾರ್ಮ್‌ನೊಂದಿಗೆ ನಿರ್ಮಿಸಲಾದ ರಿಯಲ್ ಟೈಮ್ ಡೈರೆಕ್ಷನ್‌‌‌ ಗಾಗಿ ಹೆಚ್ಚು ಗಮನ ನೀಡುವ ನ್ಯಾವಿಗೇಷನ್ ಡಿಸ್‌ಪ್ಲೇ ಡಿವೈಸ್ ಆಗಿರುವ ಇದನ್ನು ರಾಯಲ್ ಎನ್‌ಫೀಲ್ಡ್ ಟ್ರಿಪ್ಪರ್ ಎನ್ನಲಾಗುತ್ತದೆ. ಗೂಗಲ್ ಮ್ಯಾಪ್ಸ್ ಟೂ ವೀಲರ್ ನ್ಯಾವಿಗೇಶನ್ ಬಳಸಿ ಗಮ್ಯತಾಣವನ್ನು ತಲುಪಲು ಟ್ರಿಪ್ಪರ್ ಅತ್ಯುತ್ತಮವಾಗಿರುವ ದಾರಿಯನ್ನು ಪ್ರದರ್ಶಿಸುತ್ತದೆ, ಇದು ಯಾವುದೇ ಭಾರತದಲ್ಲಿ ತಯಾರಿಸಿದ ಮೋಟಾರ್‌ಸೈಕಲ್‌ ಮಟ್ಟಿಗೆ ಮೊದಲನೆಯದು. ರಾಯಲ್ ಎನ್‌ಫೀಲ್ಡ್ ಆ್ಯಪ್ ಮೂಲಕ ರೈಡರ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಿರುವ ಟ್ರಿಪ್ಪರ್ ಸರಳ, ಸ್ಪಷ್ಟ ಮತ್ತು ಪರಿಣಾಮಕಾರಿಯಾದ ಅಗತ್ಯ ಮಾರ್ಗದರ್ಶನಗಳನ್ನು ನೀಡುತ್ತದೆ, ಆದರೆ ಅದೇ ಸಮಯದಲ್ಲಿ ನಿಖರವಾಗಿರುತ್ತದೆ ಮತ್ತು ಯಾವುದೇ ಗೊಂದಲವನ್ನು ಉಂಟುಮಾಡುವುದಿಲ್ಲ.

ವೈಬ್ರಂಟ್ ರೆಡ್ ಅಥವಾ ಯಲ್ಲೋ ಸಿಂಗಲ್ ಕಲರ್ ಫ್ಯುಯೆಲ್ ಟ್ಯಾಂಕ್‌ಗಳು ಮತ್ತು ಮ್ಯಾಚಿಂಗ್ ವೀಲ್ ರಿಮ್ ಲೈನಿಂಗ್‌ನಲ್ಲಿ ಲಭ್ಯವಿರುವ ಮೀಟಿಯೋರ್ 350 ಫೈರ್‌ಬಾಲ್, ಮಶಿನ್ಡ್ ಫಿನ್‌ ಗಳಿಂದ ಫಿನಿಶಿಂಗ್ ಮಾಡಲಾದ ಕಪ್ಪು ಬಣ್ಣದ ಮೋಟಾರ್‌‌ ಸೈಕಲ್ ಭಾಗಗಳು ಮತ್ತು ಎಂಜಿನ್ ಹೊಂದಿದೆ. ಕಂಟೆಂಪರರಿ ರೆಡ್, ಬ್ಲೂ ಅಥವಾ ಮ್ಯಾಟ್ ಬ್ಲಾಕ್ ಟ್ಯಾಂಕ್‌ಗಳು ಮತ್ತು ಮ್ಯಾಚಿಂಗ್ ಬಾಡಿ ಪಾರ್ಟ್‌ ಗಳನ್ನು ಹೊಂದಿರುವ ಸ್ಟೆಲ್ಲಾರ್, ಕ್ರೋಮ್ ಹ್ಯಾಂಡಲ್‌ ಬಾರ್‌ಗಳು ಮತ್ತು ಎಕ್ಸಾಸ್ಟ್ ಜೊತೆಗೆ ಪಿಲಿಯನ್‌ಗೆ ಕಾಂಫಿ ಬ್ಯಾಕ್‌ರೆಸ್ಟ್‌ ನೊಂದಿಗೆ ಬರುತ್ತದೆ. ಮ್ಯಾಚಿಂಗ್ ಬಾಡಿ ಪಾರ್ಟ್‌ ಗಳ ಜೊತೆಯಲ್ಲಿ ಡ್ಯುಯಲ್-ಟೋನ್ ಬ್ಲೂ ಅಥವಾ ಬ್ರೌನ್ ಫಿನಿಶ್ ಹೊಂದಿರುವ ಟಾಪ್-ಆಫ್-ಲೈನ್ ಸೂಪರ್‌‌‌ನೋವಾವು ಮಶಿನ್ಡ್ ವೀಲ್‌ ಗಳು, ಪ್ರೀಮಿಯಂ ಸೀಟ್‌ ಮತ್ತು ವಿಂಡ್‌ಸ್ಕ್ರೀನ್‌ ಆಯ್ಕೆಗಳನ್ನು ಒದಗಿಸುತ್ತದೆ.

ಎಲ್ಲಾ ಎಡಿಶನ್ ಗಳಲ್ಲಿಯೂ ಅಲಾಯ್ ವೀಲುಗಳು ಮತ್ತು ಟ್ಯೂಬ್ ಲೆಸ್ ಟೈರುಗಳನ್ನು ಸ್ಟ್ಯಾಂಡರ್ಡ್‌ನಂತೆ ಅಳವಡಿಸಲಾಗಿದ್ದು, ರೈಡರುಗಳಿಗೆ ಆರಾಮ ಮತ್ತು ನೆಮ್ಮದಿಯನ್ನು ವಿಶೇಷವಾಗಿ ದೂರ ಪ್ರಯಾಣದಲ್ಲಿ ನೀಡುತ್ತವೆ. ಹೆಚ್ಚಿನ ಸೌಕರ್ಯ ಮತ್ತು ನೈಜ ಕ್ರೂಸರ್ ಲುಕ್‌ಗಾಗಿ, ಮುಂಭಾಗದಲ್ಲಿ 100/90 - 19 ಟೈರ್ ಮತ್ತು ಹಿಂಭಾಗದಲ್ಲಿ 140/70 - 17 ಅನ್ನು ಬಳಸಲಾಗುತ್ತದೆ. ಇಲ್ಲಿಯವರೆಗಿನ ರಾಯಲ್ ಎನ್‌ಫೀಲ್ಡ್ ವಾಹನಗಳಲ್ಲಿ ಇದು ಅತ್ಯಂತ ದೃಢವಾದ ಬ್ರೇಕಿಂಗ್ ಆಗಿದ್ದು, 300 ಎಂಎಂ ಫ್ರಂಟ್ ಮತ್ತು 270 ಎಂಎಂ ರಿಯರ್ ಡಿಸ್ಕ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದೆ.

ಮೀಟಿಯೊರ್ 350 ಹೆಡ್ ಮತ್ತು ಟೇಲ್ ಲ್ಯಾಂಪುಗಳು ಎಲ್ಇಡಿಗಳ ಸ್ವಚ್ಛ, ಕಾಂಟೆಂಪರರಿ ಲುಕ್ ಅನ್ನು ಉತ್ತಮವಾಗಿ ವಿಂಗಡಿಸಲಾದ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ನ ದಕ್ಷತೆ ಮತ್ತು ಆಕರ್ಷಣೆಯೊಂದಿಗೆ ಸಂಯೋಜಿಸುತ್ತವೆ. ಅನ್‌ಕ್ಲಟರ್ಡ್ ಹ್ಯಾಂಡಲ್‌ಬಾರ್ ಕಂಟ್ರೋಲ್‌‌ ಗಳು ಮತ್ತು ರೋಟರಿ ಪವರ್ ಹೊಂದಿರುವ ಪ್ರೀಮಿಯಂ ಗುಣಮಟ್ಟದ ಸ್ವಿಚ್‌ ಗೇರ್ ಮತ್ತು ಲೈಟಿಂಗ್ ಸ್ವಿಚ್‌ಗಳು ಈ ಸಂಯೋಜನೆಗೆ ಪೂರಕವಾಗಿವೆ.

ಎಲ್ಲಾ ಮೂರು ಮೀಟಿಯೊರ್ ಎಡಿಶನ್ ಗಳಲ್ಲಿಯೂ ಇನ್‌‌ಸ್ಟ್ರೂಮೆಂಟ್ ಕ್ಲಸ್ಟರ್‌ ಹೊಸತನವನ್ನು ಹೊಂದಿದೆ, ಇದು ಗೇರ್ ಇಂಡಿಕೇಟರ್, ಪ್ಯುಯೆಲ್ ಗೇಜ್, ಕ್ಲಾಕ್ ಮತ್ತು ಟ್ರಿಪ್‌ಮೀಟರ್‌ನಂತಹ ಅಗತ್ಯಗಳಿಗಾಗಿ ಎಲ್‌ಸಿಡಿ ಡಿಸ್‌‌ಪ್ಲೇ ಹೊಂದಿದ್ದು ‘ಡ್ಯಾನ್ಸಿಂಗ್ ನೀಡಲ್’ ಅನಲಾಗ್ ಸ್ಪೀಡೋಮೀಟರ್‌ನ ಸೊಬಗನ್ನು ಇವುಗಳೊಂದಿಗೆ ಸಂಯೋಜಿಸುತ್ತದೆ. ಅಲ್ಲದೇ ಪ್ರಯಾಣಿಸುತ್ತಿರುವಾಗ ಚಾರ್ಜಿಂಗ್ ಗೆ ಅನುಕೂಲವಾಗುವಂತೆ ಯುಎಸ್‌ಬಿ ಪೋರ್ಟ್ ಅನ್ನು ಹ್ಯಾಂಡಲ್‌ಬಾರ್‌ಗಳ ಕೆಳಗೆ ಜೋಡಿಸಲಾಗಿದೆ.

ಮೀಟಿಯೊರ್350 ಜೆನ್ಯುನ್ ಮೋಟಾರ್‌‌‌ಸೈಕಲ್ ಆಸೆಸರಿಗಳನ್ನು ಹೊಂದಿದ್ದು, ಇವನ್ನು ಹೊಸ ಮೋಟಾಸೈಕಲ್‌ ಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ, ಇವೆಲ್ಲವನ್ನೂ ಮೋಟಾರ್ ಸೈಕಲ್ ಆರ್ಡರ್ ಮಾಡುವ ಸಂದರ್ಭದಲ್ಲಿ ಸೇರಿಸಬಹುದು. ಈ ರೇಂಜ್ ಫಂಕ್ಷನಲ್ ಪ್ರಾಡಕ್ಟುಗಳನ್ನು ಒಳಗೊಂಡಿದೆ, ಉದಾಹರಣೆಗೆ ಇವುಗಳಲ್ಲಿ ಪಿಲಿಯನ್ ಬ್ಯಾಕ್‌ರೆಸ್ಟ್, ಟೂರಿಂಗ್ ಸ್ಕ್ರೀನ್‌ಗಳು, ದೃಢವಾದ ಎಂಜಿನ್ ಮತ್ತು ಸಂಪ್ ಗಾರ್ಡ್‌ಗಳು, ಆರ್‌ಎಚ್‌ಎಸ್ ಪ್ಯಾನಿಯರ್ ಬಾಕ್ಸ್, ಮತ್ತು ಕ್ಲಾಸಿಕ್ ಸ್ಟೈಲಿಂಗ್ ಎಂಬೆಲಿಶ್‌‌ಮೆಂಟುಗಳು, ಅನೇಕ ಬ್ರಷ್ಡ್ ಸ್ಟೇನ್‌ಲೆಸ್ ಸ್ಟೀಲ್ ಮತ್ತು ಬ್ಲಾಕ್ ಪೌಡರ್ ಕೋಟೆಡ್ ಸ್ಲಿಪ್-ಆನ್ ಸೈಲೆನ್ಸರ್ ಆಯ್ಕೆಗಳು ಮತ್ತು ಸುಂದರವಾಗಿದ ಟೂರಿಂಗ್ ಸೀಟ್ ಗಳು ಸೇರಿವೆ, ಇವೆಲ್ಲವೂ 3 ವರ್ಷಗಳ ವಾರೆಂಟಿ ಹೊಂದಿರುತ್ತವೆ. ಮತ್ತಷ್ಟು ಸ್ವ-ಅಭಿವ್ಯಕ್ತಿಗಾಗಿ, ಮೀಟಿಯೊರ್ ಮತ್ತು ಕ್ರೂಸರ್ ಲೈಫ್‌‌ಸ್ಟೈಲ್ ಅಡಿಯಲ್ಲಿ ಹೆಲ್ಮೆಟ್‌ಗಳನ್ನು ಒಳಗೊಂಡಂತೆ ರೈಡಿಂಗ್ ಸಲಕರಣೆಗಳ ಆಯ್ಕೆಯನ್ನು ಕಾಂಪ್ಲಿಮೆಂಟರಿ ಕಲರ್ ಗಳು, ಟೀ ಶರ್ಟ್‌ಗಳು ಮತ್ತು ಪರ್ಸನಲ್ ಆಸೆಸರಿಗಳಲ್ಲಿ ತಯಾರಿಸಲಾಗಿದೆ.

ಮೊದಲ ಬಾರಿಗೆ, ಮೀಟಿಯೊರ್ 350 ಅನ್ನು ಬುಕ್ ಮಾಡುವ ಗ್ರಾಹಕರು ಏಕಕಾಲದಲ್ಲಿ ವಾರ್ಷಿಕ ಮೇನ್‌‌ಟೆನನ್ಸ್ ಒಪ್ಪಂದಗಳು (ಎಎಂಸಿ), ಎಕ್ಸ್‌ಟೆಂಡೆಡ್ ವಾರೆಂಟಿ ಮತ್ತು ರೋಡ್ ಸೈಡ್ ಅಸಿಸ್ಟನ್ಸ್ ಆಯ್ಕೆ ಮಾಡಿಕೊಳ್ಳುವುದು ಸಾಧ್ಯವಿರುತ್ತದೆ, ಇವೆಲ್ಲವೂ ಸವಾರರ ಅವಶ್ಯಕತೆಗಳಿಗೆ ಅನುಗುಣವಾಗಿ ನಿರ್ಮಿಸಲಾದ ನಮ್ಯತೆ ಹೊಂದಿವೆ. ಮೀಟಿಯೊರ್ 350 ಬಿಡುಗಡೆಯೊಂದಿಗೆ ಬರುವ ಮತ್ತೊಂದು ಡಿಜಿಟಲ್ ಆವಿಷ್ಕಾರವೆಂದರೆ ರಾಯಲ್ ಎನ್‌ಫೀಲ್ಡ್ ಮೆಕ್ಯಾನಿಕ್ ಅಪ್ಲಿಕೇಶನ್. ಇಡೀ ಮೆಕ್ಯಾನಿಕ್ ಎಕೋಸಿಸ್ಟಂ, ಅಥೋರೈಸ್ಡ್‌ ಸರ್ವೀಸ್ ಸೆಂಟರ್ ನೆಟ್‌ವರ್ಕ್ ಮತ್ತು ತಲೆಮಾರುಗಳಿಂದ ಬ್ರಾಂಡ್‌ನ ಸರ್ವೀಸ್ ನೆಟ್‌ವರ್ಕ್‌ ವಿಸ್ತರಣೆಗಳು ಎನ್ನಬಹುದಾದ ಸಾವಿರಾರು ಫ್ರೀಲಾನ್ಸ್ ಮೆಕ್ಯಾನಿಕ್‌ಗಳನ್ನು ಪುನಃ ಉತ್ತೇಜಿಸಲು ಮತ್ತು ಕೌಶಲ್ಯ ಹೆಚ್ಚಿಸಲು ಇದನ್ನು ರೂಪಿಸಲಾಗಿದೆ. ಮೆಕ್ಯಾನಿಕ್ ಅಪ್ಲಿಕೇಶನ್ ಡಿಜಿಟೈಸ್ಡ್ ಪ್ಲಾಟ್‌ಫಾರ್ಮ್ ಆಗಿದ್ದು, ಹೆಚ್ಚಿನ ಸರ್ವೀಸ್ ಅಗತ್ಯಗಳನ್ನು ಸುಲಭ, ವೇಗವಾಗಿ ಮತ್ತು ನಿಖರವಾಗಿ ಪತ್ತೆಹಚ್ಚಲು ಮತ್ತು ಪರಿಹರಿಸಲು ಇ-ಡಯಾಗ್ನೋಸ್ಟಿಕ್ಸ್ ಅನ್ನು ಒದಗಿಸುತ್ತದೆ. ಡಾಂಗಲ್‌ ಅನ್ನು ಸರಳವಾಗಿ ಪ್ಲಗ್ ಮಾಡುವ ಮೂಲಕ, ರೈಡರ್‌ ಗಳು ತಮ್ಮ ಮೋಟಾರ್‌ಸೈಕಲ್ ಅನ್ನು ಆರ್‌ಇ ಮೆಕ್ಯಾನಿಕ್ ಅಪ್ಲಿಕೇಶನ್‌ನೊಂದಿಗೆ ಸ್ಮಾರ್ಟ್‌ಫೋನ್ ಮೂಲಕ ಇಂಟರ್ಫೇಸ್ ಮಾಡಬಹುದು. ಇಂಟರಾಕ್ಟೀವ್ ಲರ್ನಿಂಗ್ ಮಾಡ್ಯೂಲ್‌ಗಳು, ಸರ್ವೀಸ್ ಮ್ಯಾನ್ಯುಯಲ್, ಎಲೆಕ್ಟ್ರಾನಿಕ್ ಪಾರ್ಟ್ಸ್ ಕ್ಯಾಟಲಾಗ್ ಮತ್ತು ಆನ್‌ಲೈನ್ ಆರ್ಡರ್ ಮುಂತಾದ ಅಮೂಲ್ಯ ಹೆಚ್ಚುರಿ ಫೀಚರ್‌‌‌ಗಳನ್ನೂ ಸಹ ಈ ಅಪ್ಲಿಕೇಶನ್ ಒಳಗೊಂಡಿದೆ.