ನವದೆಹಲಿ(ಮೇ.24): ಭಾರತದ ಬೈಕ್ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್ ಬಜಾಜ್ ಇದೀಗ ಸ್ಕೂಟರ್ ವಿಭಾಗಕ್ಕೆ ಎಂಟ್ರಿಕೊಡುತ್ತಿದೆ. ಆರಂಭದಲ್ಲಿ ಬಜಾಜ್ ಚೇತಕ್ ಸ್ಕೂಟರ್‌ನಿಂದ ಆರಂಭಗೊಂಡ ಬಜಾಜ್ ಬಳಿಕ ಚೇತಕ್ ಸ್ಧಗಿತಗೊಳಿಸಿ ಬೈಕ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿತ್ತು. ಇದೀಗ ಮತ್ತೆ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಬಾರಿ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಗೆಲುವಿನ ಬೆನ್ನಲ್ಲೇ ಮೋದಿ ಹೊಸ ಯೋಜನೆ-2025 ರಿಂದ ಸಿಗಲ್ಲ ಪೆಟ್ರೋಲ್ ದ್ವಿಚಕ್ರವಾಹನ!

ನೂತನ ಎಲೆಕ್ಟ್ರಿಕ್ ಸ್ಕೂಟರ್‍‌ಗೆ ಬಜಾಜ್ ಅರ್ಬನೈಟ್ ಎಂದು ಹೆಸರಿಡಲಾಗಿದೆ. ಇಷ್ಟೇ ಅಲ್ಲ ಎಲೆಕ್ಟ್ರಿಕ್ ವಾಹನದಲ್ಲಿ ಅಗ್ರಗಣ್ಯನಾಗಿರುವ ಟೆಸ್ಲಾಗೆ ಸರಿಸಾಟಿಯಾಗಲಿದೆ ಎಂದು ಬಜಾಜ್ ಚೇರ್ಮೆನ್ ರಾಜೀವ್ ಬಜಾಜ್ ಈ ಹಿಂದೆ ಹೇಳಿದ್ದರು. ಇದೀಗ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ರೋಡ್ ಟೆಸ್ಟ್ ಯಶಸ್ವಿಯಾಗಿ ಪೂರ್ಣಗೊಳಿಸಿದೆ. 

ಇದನ್ನೂ ಓದಿ: ಬಜಾಜ್ ಪ್ಲಾಟಿನ ಬೈಕ್ ಮೇಲೆ 2.87 ಲಕ್ಷ ಕಿ.ಮೀ ರೈಡ್-ದಾಖಲೆ ಬರೆದ ರೈತ!

ಅತ್ಯಾಧುನಿಕ ತಂತ್ರಜ್ಞಾನ ಬಳಸುವುದಾಗಿ ಬಜಾಜ್ ಹೇಳಿಕೊಂಡಿದೆ. ಹೀಗಾಗಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ತೀವ್ರ ಕುತೂಹ ಕೆರಳಿಸಿದೆ. ಇದರ ಬ್ಯಾಟರಿ, ಮೈಲೇಜ್ ರೇಂಜ್ ಹಾಗೂ ಬೆಲೆ ಕುರಿತು ವಿವರ ಬಹಿರಂಗವಾಗಿಲ್ಲ. ಆದರೆ  ಶೀಘ್ರದಲ್ಲೇ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ.