ರೋಲ್ಸ್ ರಾಯ್ಸ್ to ಪೊರ್ಶೆ: ಹರಾಜಾಯ್ತು ನೀರವ್ ಮೋದಿ 12 ಕಾರು !
ಭಾರತೀಯ ಬ್ಯಾಂಕ್‌ಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ, ಭಾರತದಲ್ಲಿ ಬಿಟ್ಟು ಹೋದ ಕಾರುಗಳೆಲ್ಲಾ ಹರಾಜಾಗಿದೆ. ಯಾವ ಕಾರು ಎಷ್ಟು ಮೊತ್ತಕ್ಕೆ ಹರಾಜಾಯಿತು. ಇಲ್ಲಿದೆ ವಿವರ.
ಮುಂಬೈ(ಏ.26): ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ವಂಚಿಸಿ ವಿದೇಶದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ನೀರವ್ ಮೋದಿ ಇದೀಗ ಜಾಮೀನಿಗಾಗಿ ಅಲೆದಾಡುತ್ತಿದ್ದಾರೆ. ಇದರ ಬೆನ್ನಲ್ಲೇ ನೀರವ್ ಮೋದಿ ಹಾಗೂ ಮೆಹೂಲ್ ಚೋಕ್ಸಿ ಭಾರತದಲ್ಲಿ ಬಿಟ್ಟು ಹೋದ 12 ಕಾರುಗಳು ಹರಾಜಾಗಿದೆ. ಈ ಮೂಲಕ ನೀರವ್ ಮೋದಿ ವಂಚಿಸಿರುವ 13,000 ಕೋಟಿ ರೂಪಾಯಿ ವಸೂಲಿ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದಿ: ಮಾರುತಿ ಬಲೆನೊ ಈಗ ಟೊಯೊಟಾ ಗ್ಲಾಂಝಾ ಆಗಿ ಶೀಘ್ರದಲ್ಲಿ ಬಿಡುಗಡೆ!
ಇಡಿ ಅಧಿಕಾರಿಗಳು ವಶಪಡಿಸಿಕೊಂಡ ಕಾರುಗಳನ್ನು ಹರಾಜಿಗಿಡಲು ಮಂಬೈ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ. ಬಳಿಕ ಆನ್‌ಲೈನ್ ಮೂಲಕ ನೀರವ್ ಮೋದಿ ಹಾಗೂ ಮೆಹೂಲ್ ಚೋಕ್ಸಿಯ 12 ಕಾರುಗಳನ್ನು ಹರಾಜು ಮಾಡಲಾಗಿದೆ. ನೀರವ್ ಮೋದಿ ಹಾಗೂ ಚೂಕ್ಸಿ ಕಾರುಗಳ ಪೈಕಿ ಟೊಯೊಟಾ ಕೊರೊಲಾ ಅಲ್ಟಿಸ್ ಕಾರು ಖರೀದಿಸಲು ಯಾರೂ ಕೂಡ ಮುಂದಾಗಲಿಲ್ಲ.
ಇಡಿ ಅಧಿಕಾರಿಗಳು ನಿಗಧಿ ಪಡಿಸಿದ ಹರಾಜಿನ ಮೂಲ ಬೆಲೆಗಿಂತ ಕೇವಲ 28 ಲಕ್ಷ ರೂಪಾಯಿ ಹೆಚ್ಚುವರಿ ಹಣ ಸಂಗ್ರಹಿಸಲಾಗಿದೆ. ಹರಾಜಿನಲ್ಲಿದ್ದ ದುಬಾರಿ ಕಾರು ರೋಲ್ಸ್ ರಾಯ್ಸ್ ಘೋಸ್ಟ್ 1.33 ಕೋಟಿಗೆ ಹರಾಜಾಗಿದೆ. ಪೊರ್ಶೆ ಪನಾಮೆರಾ ಕಾರು 54 ಲಕ್ಷ ರೂಪಾಯಿಗೆ ಹರಾಜಾಗಿದೆ. ಇನ್ನು ಮರ್ಸಡೀಸ್ ಬೆಂಝ್ GL350 ಕಾರು 53.76 ಲಕ್ಷ ರೂಪಾಯಿಗೆ ಬಿಕರಿಯಾಗಿದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದ ನಿಸ್ಸಾನ್!
ಮೆಹೂಲ್ ಚೋಕ್ಸಿಯ BMW ಕಾರು 11.75 ಲಕ್ಷ ರೂಪಾಯಿಗೆ ಹರಾಜಾಗಿದೆ. ಟೊಯೊಟಾ ಇನೋವಾ ಕ್ರಿಸ್ಟಾ 18.06 ಲಕ್ಷ ರೂಪಾಯಿ ಹಾಗೂ ಹೊಂಡಾ ಬ್ರಿಯೋ ಕಾರು 2. 7 ಲಕ್ಷ ರೂಪಾಯಿಗೆ ಹರಾಜಾಗಿದೆ. ಈ ಮೂಲಕ ಒಟ್ಟು 13 ಕಾರುಗಳು ಹರಾಜಿನಲ್ಲಿ ಸೇಲಾಗಿದೆ.