ನವದೆಹಲಿ(ಏ.23): ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಕಂಪೆನಿಯ ಕಾರ್‌ಗಳ ಏರ್‌ ಕಂಡೀಶನರ್‌ಅನ್ನು ಸುಸ್ಥಿತಿಯಲ್ಲಿಡಲು ನಿಸ್ಸಾನ್‌ ಕಂಪೆನಿ ಏರ್‌ ಕಂಡೀಷನ್‌ ತಪಾಸಣಾ ಕ್ಯಾಂಪ್‌ಅನ್ನು ಆಯೋಜಿಸಿದೆ. ಇದು ಕಂಪೆನಿಯ ನಿಸ್ಸಾನ್‌ ಹಾಗೂ ದಾಟ್ಸುನ್‌ ಕಾರ್‌ಗಳಿಗೆ ಅನ್ವಯಿಸುತ್ತದೆ. ಮೇ 31ರ ತನಕ ಈ ಕ್ಯಾಂಪ್‌ ಡೀಲರ್‌ಶಿಪ್‌ಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: BMW ಹೊಸ Z4 ರೋಡ್‌ಸ್ಟರ್‌ ಕಾರು ಬಿಡುಗಡೆ

ಈ ಕುರಿತು ಮಾತನಾಡಿದ ನಿಸ್ಸಾನ್‌ ಮೋಟರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಇಂಡಿಯಾದ ಮುಖ್ಯಸ್ಥ ಅತುಲ್‌ಅಗರ್‌ವಾಲ್‌, ‘ತನ್ನ ಗ್ರಾಹಕರಿಗೆ ಆಫ್ಟರ್‌ ಸೇಲ್ಸ್‌ ಅನುಭವ ಒದಗಿಸಲು ನಿಸ್ಸಾನ್‌ ಸದಾ ಶ್ರಮಿಸುತ್ತದೆ. ನಮ್ಮ ಗ್ರಾಹಕರ ಕಾರುಗಳ ಎ ಸಿ ವ್ಯವಸ್ಥೆಯನ್ನು ಪೂರ್ವಭಾವಿಯಾಗಿ ತಪಾಸಣೆ ನಡೆಸುವುದು ಹಾಗೂ ಅಗತ್ಯಇರುವ ಸರ್ವಿಸ್‌ಗಳನ್ನು ಶಿಫಾರಸು ಮಾಡುವುದೇ ಈ ಕ್ಯಾಂಪ್‌ನ ಪ್ರಮುಖಉದ್ದೇಶ,’ ಎಂದು ಹೇಳಿದರು. ಈ ಕ್ಯಾಂಪ್‌ನಲ್ಲಿ ಉಚಿತವಾಗಿ ಕಾರಿನ ಟಾಪ್‌ವಾಶ್‌ ಮಾಡಲಾಗುತ್ತದೆ. ಜತೆಗೆ ಆಕ್ಸೆಸರಿಗಳಲ್ಲಿ ಆಕರ್ಷಣೀಯ ಕೊಡುಗೆಗಳು ದೊರೆಯಲಿದೆ. ಬಿಡಿಭಾಗಗಳ ಖರೀದಿಯಲಿ ್ಲಆಫರ್‌ ಘೋಷಿಸಲಾಗಿದ್ದು, ಲೇಬರ್‌ಚಾಚ್‌ರ್‍ನಲ್ಲಿ ಶೇ. 20ರಷ್ಟುರಿಯಾಯಿತಿ ಸಿಗಲಿದೆ.