ನವದೆಹಲಿ(ಏ.26): ಮಾರುತಿ ಸುಜುಕಿಯ ಗರಿಷ್ಠ ಮಾರಾಟ ಹೊಂದಿರುವ ಹ್ಯಾಚ್‌ಬ್ಯಾಕ್ ಕಾರು ಬಲೆನೊ ಇದೀಗ ಟೊಯೊಟಾ ಗ್ಲಾಂಝಾ ಕಾರಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು, ಹೊಸ ಅವತಾರದಲ್ಲಿ ಬೆಲೆನೊ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. 2017ರಲ್ಲಿ ನಡೆಸಿದ ಒಪ್ಪಂದದ ಪ್ರಕಾರ ಮಾರುತಿ ಸಂಸ್ಥೆಯ ಕೆಲ ಕಾರುಗಳನ್ನು ಹಾಗೂ ಟೊಯೊಟಾ ಹಾಗೂ ಟೊಯೊಟಾ ಕಾರಗಳನ್ನು ಮಾರುತಿ ಸಂಸ್ಥೆ ಬಿಡುಗಡೆ ಮಾಡಲು ಸಹಿ ಹಾಕಿದೆ.

ಇದನ್ನೂ ಓದಿ: ಮುಂದಿನ ವರ್ಷದಿಂದ ಮಾರುತಿ ಡೀಸೆಲ್‌ ಕಾರಿಲ್ಲ

ನೂಟನ ಟೊಯೊಟಾ ಗ್ಲಾಂಝಾ ಕಾರಿನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ವಿನ್ಯಾಸ, ಎಂಜಿನ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂಭಾಗದ ಗ್ರಿಲ್, ಲೋಗೋ ಬದಲಾವಣೆಯಾಗಲಿದೆ. ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಬಲೇನೋ ಕಾರನ್ನ ಟೊಯೋಟಾ ಸಂಸ್ಥಗೆ ನೀಡುತ್ತಿದೆ.  ಇದೇ ವರ್ಷ ನೂತನ ಕಾರು ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ಬರಲಿದೆ ಮಾರುತಿ ಡಿಜೈರ್ ಪ್ರತಿಸ್ಪರ್ಧಿ ರೆನಾಲ್ಟ್ ಕ್ವಿಡ್ ಸೆಡಾನ್ ಕಾರು!

ಈಗಾಗಲೇ ಮಾರುತಿ ಸುಜುಕಿ ಸಂಸ್ಥೆ ಬಲೇನೋ ಕಾರು ಖರೀದಿಸಿ ಗ್ರಾಹಕರು ಸರ್ವೀಸ್ ಹಾಗೂ ಇತರ ಯಾವುದೇ ವಿಚಾರಕ್ಕೆ ಮಾರುತಿ ಸುಜುಕಿ ಸಂಸ್ಥೆಗೆ ಭೇಟಿ ನೀಡಬೇಕಿದೆ.  ಆದರೆ  ಸದ್ಯ ಬಿಡುಗಡೆಯಾಗಲಿರುವ  ಟೊಯೋಟಾ ಗ್ಲಾಂಝಾ(ಮಾರುತಿ ಬಲೆನೊ) ಕಾರಿನ ಜವಾಬ್ದಾರಿ ಟೊಯೋಟಾ ಸಂಸ್ಥೆ ಮೇಲಿರುತ್ತೆ. ಮಾರುತಿ ಸುಜುಕಿಯ ವಿಟಾರ ಬ್ರೀಜಾ ಕಾರನ್ನೂ ಕೂಡ ಟೊಯೋಟಾ ಹೊಸದಾಗಿ ನಿರ್ಮಾಣ ಮಾಡಲಿದೆ. ಮುಂದಿನ ವರ್ಷದಲ್ಲಿ ಮಾರುತಿ ವಿಟಾರ ಬ್ರೆಜಾ, ಟೊಯೋಟಾ ಬ್ರೆಜಾ ಕಾರಾಗಿ ಬದಲಾಗಲಿದೆ. 

 

 

ಏನಿದು ಕ್ರಾಸ್ ಬ್ಯಾಡ್ಜಿಂಗ್: 
ಜನಪ್ರೀಯ ಕಾರುಗಳನ್ನ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಮಾರಕಟ್ಟೆಗೆ ಬಿಡುಗಡೆಗೊಳಿಸುವುದೇ ಕ್ರಾಸ್ ಬ್ಯಾಡ್ಜಿಂಗ್. (ಉದಾಹರಣೆಗೆ ಮಾರುತಿ ಸುಜುಕಿಯ ಯಾವುದೇ ಕಾರನ್ನ ಬೇರೆ ಮೋಟಾರು ಕಂಪೆನಿ ಬಿಡುಗಡೆ ಮಾಡವುದು) ಹೊಸ ಕಂಪೆನಿ ಸಣ್ಣ ಬದಲಾವಣೆಯೊಂದಿಗೆ ಬಿಡುಗಡೆ ಮಾಡಲಿದೆ. ಹೆಡ್ ಲೈಟ್, ಒಳವಿನ್ಯಾಸ ಸೇರಿದಂತೆ ಕೆಲೆ ಬದಲಾವಣೆಯೊಂದಿಗೆ ಹೊಸ ಕಂಪೆನಿ ಕಾರನ್ನ ಬಿಡುಗಡೆ ಮಾಡುವುದೇ ಕ್ರಾಸ್ ಬ್ಯಾಡ್ಜಿಂಗ್.

ಇದನ್ನೂ ಓದಿ: ಬೇಸಿಗೆಯಲ್ಲಿ ಕಾರಿನ AC ಎಫೆಕ್ಟೀವ್ ಮಾಡಲು ಇಲ್ಲಿದೆ 5 ಸರಳ ಟಿಪ್ಸ್!

ಅಂತಾರಾಷ್ಟ್ರೀಯ ವ್ಯಾಪಾರ ಮಾರುಕಟ್ಟೆಯಲ್ಲಿನ ಗೊಂದಲ, ವಹಿವಾಟು ನಡೆಸೋ ಸಂಸ್ಥೆಗಳು ಎದುರಿಸೋ ಸವಾಲಿಗೆ ಉತ್ತರವಾಗಿ 1817ರಲ್ಲಿ ಡೇವಿಡ್ ರಿಕಾರ್ಡೋ ಹೊಸ ಥಿಯರಿ ಪ್ರಸ್ತುತ ಪಡಿಸಿದರು. ರಿಕಾರ್ಡೋ ಥಿಯರ್ ಪ್ರಕಾರ ಇದೀಗ ಕ್ರಾಸ್ ಬ್ಯಾಡ್ಜಿಂಗ್ ನಡೆಸಲು ಜಪಾನ್ ಮೂಲದ ಮಾರುತಿ ಸುಜುಕಿ ಹಾಗೂ ಟೊಯೋಟಾ ಮುಂದಾಗಿದೆ.

ಕ್ರಾಸ್ ಬ್ಯಾಡ್ಜಿಂಗ್ ಭಾರತಕ್ಕೆ ಹೊಸದು ಆದರೆ ಇತರ ದೇಶಗಳಲ್ಲಿ ಈಗಾಗಲೇ ಹಲವು ಮೋಟಾರು ಸಂಸ್ಥೆಗಳು ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಹಲವು ಕಾರುಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.