ನವದೆಹಲಿ(ನ.16): ರೆನಾಲ್ಟ್ ಇಂಡಿಯಾ ಇದೀಗ ಭಾರತದ ಬಹುಬೇಡಿಕೆಯ ಸಬ್ ಕಾಂಪಾಕ್ಟ್ SUV ವೇರಿಯೆಂಟ್ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿರುವ ರೆನಾಲ್ಟ್ ಇಂಡಿಯಾ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. 

ದೀಪಾವಳಿ ಹಬ್ಬಕ್ಕೆ 1 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದ ರೆನಾಲ್ಟ್!.

ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರ ಎಕ್ಸ್‌ಯುವಿ 300 ಸೇರಿದಂತೆ ಸಬ್ ಕಾಂಪಾಕ್ಚ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ಕಾರು ಬಿಡುಗಡೆಯಾಗುತ್ತಿದೆ.  ನೂತನ ಕಾರು ರೆನಾಲ್ಟ್ ಕ್ವಿಡ್ ಹಾಗೂ ಟ್ರೈಬರ್ ರೀತಿಯಲ್ಲೇ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ.

ಕೈಗೆಟುಕುವ ದರದಲ್ಲಿ ಕ್ವಿಡ್ ರೀತಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾದ ರೆನಾಲ್ಟ್!

ಬೆಲೆ ಅಗ್ಗವಾಗಿದ್ದರೂ, ದಕ್ಷತೆ, ಸುರಕ್ಷತೆ ಹಾಗೂ ಸ್ಟೈಲೀಶ್ ಡಿಸೈನ್‌ನಲ್ಲಿ ಯಾವುದೇ ರಾಜಿಯಿಲ್ಲ. ಡಸ್ಟರ್ ರೀತಿ ನಂಬಿಕಸ್ಥ ವಾಹನ ಇದಾಗಿರಲಿದೆ ಅನ್ನೋ ಸೂಚನೆಯನ್ನು ಟೀಸರ್ ಮೂಲಕ  ಸೂಚಿಸಲಾಗಿದೆ.

ಟೀಸರ್‌ನಲ್ಲಿ LED ಹೆಡ್‌ಲ್ಯಾಂಪ್ಸ್, ಟೈಲ್ ಲ್ಯಾಂಪ್ಸ್, ಆಕರ್ಷಕ ವಿನ್ಯಾಸದ ಝಲಕ್  ತೋರಿಸಲಾಗಿದೆ. ಇನ್ನು ಆಧುನಿಕ ತಂತ್ರಜ್ಞಾನ, ಹೆಚ್ಚುವರಿ ಫೀಚರ್ಸ್, ಟಚ್ ಸ್ಕ್ರೀನ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.