ನವದೆಹಲಿ(ನ.09): ದೀಪಾವಳಿ ಹಬ್ಬಕ್ಕೆ ಭಾರತೀಯ ಆಟೋಮೊಬೈಲ್ ಕಂಪನಿಗಳು ಹಲವು ಆಫರ್ ಘೋಷಿಸುತ್ತಿದೆ. ಇದೀಗ ರೆನಾಲ್ಟ್ ಇಂಡಿಯಾ ಬರೋಬ್ಬರಿ 1 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ರೆನಾಲ್ಟ್ ಕ್ವಿಡ್, ಡಸ್ಟರ್, ಟ್ರೈಬರ್ ಕಾರುಗಳ ಮೇಲೆ ಆಫರ್ ನೀಡಿದೆ.

ದೀಪಾವಳಿಗೆ ಭರ್ಜರಿ ಆಫರ್ ಘೋಷಿಸಿದ ನಿಸಾನ್, ಗರಿಷ್ಠ 55,000 ರೂ ಡಿಸ್ಕೌಂಟ್!

ರೆನಾಲ್ಟ್ ಡಸ್ಟರ್ ಕಾರಿನ ಮೇಲೆ ಗರಿಷ್ಠ ಆಫರ್ ನೀಡಲಾಗಿದೆ. ಡಸ್ಟರ್ ಕಾರಿನ ಮೇಲೆ ಗರಿಷ್ಠ 1 ಲಕ್ಷ ರೂಪಾಯಿ ಆಫರ್ ನೀಡಲಾಗಿದೆ. ಡಿಸ್ಕೌಂಟ್ ಆಫರ್ 70,000 ರೂಪಾಯಿ ಹಾಗೂ ಕಾರ್ಪೊರೇಟ್ ಆಫರ್ 30,000 ರೂಪಾಯಿ ನೀಡಲಾಗಿದೆ.  ಕ್ವಿಡ್ ಕಾರಿನ ಮೇಲೆ ಕ್ಯಾಶ್ ಆಫರ್ 40,000 ರೂಪಾಯಿ ಹಾಗೂ ಕಾರ್ಪೋರೇಟ್ ಆಫರ್ 9,000 ರೂಪಾಯಿ ನೀಡಲಾಗಿದೆ. ಈ ಮೂಲಕ ಕ್ವಿಡ್ ಕಾರಿನ ಮೇಲೆ ಒಟ್ಟು 49,000 ರೂಪಾಯಿ ಆಫರ್ ನೀಡಲಾಗಿದೆ.

ರೆನಾಲ್ಟ್ ಟ್ರೈಬರ್ ಕಾರಿನ ಮೇಲೆ 39,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ ಆಫರ್ 30,000 ರೂಪಾಯಿ ಹಾಗೂ 9,000 ರೂಪಾಯಿ ಕಾರ್ಪೋರೇಟ್ ಆಫರ್ ಘೋಷಿಸಲಾಗಿದೆ. ಟ್ರೈಬರ್ ಕಾರಿಗೆ ಮತ್ತೊಂದು ವಿಶೇಷ ಆಫರ್ ನೀಡಲಾಗಿದೆ. ಕಾರು ಖರೀದಿಗೆ ಕೇವಲ 3.99 ಶೇಕಡಾ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ.

ಸೂಚನೆ: ಆಫರ್ ಕುರಿತ ಹೆಚ್ಚಿನ ಮಾಹಿತಿಯನ್ನು ಸ್ಥಳೀಯ ಡೀಲರ್‌ಬಳಿ ಖಚಿತಪಡಿಸಿ