ನವದೆಹಲಿ(ಜು.13): ರೆನಾಲ್ಟ್ ಇಂಡಿಯಾ ಮಾರಾಟ ಹೆಚ್ಚಿಸಲು ಆಕ್ಸೆಸರಿ, ಸರ್ವೀಸ್ ಸೇರಿದಂತೆ ಕೆಲ ಡಿಸ್ಕೌಂಟ್ ಆಫರ್ ನೀಡಿದೆ. ಜುಲೈ 13 ರಿಂದ ಜುಲೈ 26ರ ವರೆಗೆ ಈ ಆಫರ್ ಸಂಪೂರ್ಣ ಭಾರತದಲ್ಲಿ ಲಭ್ಯವಿರಲಿದೆ.  ಈ ಮೂಲಕ ದೇಶದಲ್ಲಿ ಗ್ರಾಹಕರನ್ನು ಆಕರ್ಷಿಸಿ ರೆನಾಲ್ಟ್ ಕಾರುಗಳ ಮಾರಾಟ ಹೆಚ್ಚಿಸಲು ನಿರ್ಧರಿಸಿದೆ.

ರೆನಾಲ್ಟ್ ಕ್ವಿಡ್ RXL ಕಾರು ಬಿಡುಗಡೆ; ಬೆಲೆ 4.16 ಲಕ್ಷ ರೂ!.

ರೆನಾಲ್ಟ್ ನೂತನ ಆಫರ್ ಪ್ರಕಾರ, ಕೆಲ ಆಕ್ಸೆಸರಿ ಮೇಲೆ ಶೇಕಡ 50 ರಷ್ಟು ಡಿಸ್ಕೌಂಟ್, ಆಯ್ದ ಸ್ಪೇರ್ ಪಾರ್ಟ್ ಮೇಲೆ ಶೇಕಡ 10  ರಷ್ಟು ಡಿಸ್ಕೌಂಟ್, ಸರ್ವೀಸ್ ಲೇಬರ್ ಚಾರ್ಜ್‌ನಲ್ಲಿ ಶೇಕಡಾ 15 ರಷ್ಟು ಡಿಸ್ಕೌಂಟ್, ಎಂಜಿನ್ ಆಯಿಲ್ ಬದಲಾವಣೆಯಲ್ಲಿ ಶೇಕಡಾ 5 ರಷ್ಟು ಡಿಸ್ಕೌಂಟ್ ಸೇರಿದಂತ ಸರ್ವೀಸ್ ಮೇಲೆಯೂ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ರೆನಾಲ್ಟ್ ಡಸ್ಟರ್ ಪೆಟ್ರೋಲ್ ಕಾರು ಅನಾವರಣ!

ಇದರ ಜೊತೆಗೆ ಗಿಫ್ಟ್ ವೋಚರ್ ಕೂಡ ನೀಡಲಾಗುತ್ತಿದೆ. ಈ ಎಲ್ಲಾ ಆಫರ್ ಭಾರತದ 370 ರೆನಾಲ್ಟ್ ಸೇಲ್ಸ್ ಪಾಯಿಂಟ್ ಹಾಗೂ 450 ಸರ್ವೀಸ್ ಸೆಂಟರ್‌ಗಳಲ್ಲಿ ಲಭ್ಯವಿದೆ. ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್, ರೆನಾಲ್ಟ್ ಡಸ್ಟರ್ ಸೇರಿದಂತೆ ರೆನಾಲ್ಟ್ ಕಾರುಗಳು ಭಾರತದಲ್ಲಿ ಮೋಡಿ ಮಾಡಿದೆ. ಇದೀಗ ರೆನಾಲ್ಟ್ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಮೂಲಕ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ನಿರ್ಧರಿಸಿದೆ.