ಗ್ರೇಟರ್ ನೋಯ್ಡಾ(ಫೆ.09): ಭಾರತದಲ್ಲಿ ರೆನಾಲ್ಟ್ ಡಸ್ಟರ್ ಕಾರು ಬಿಡುಗಡೆಯಾದ ಬಳಿಕ SUV ಕಾರುಗಳ ಬೇಡಿಕೆ ಹೆಚ್ಚಾಯಿತು. ಡಸ್ಟರ್ ಬಳಿಕ ಹಲವು SUV ಕಾರುಗಳು ಭಾರತದಲ್ಲಿ ಬಿಡುಗಡೆಯಾಗಿದೆ.ಆದರೆ ರೆನಾಲ್ಟ್ ಡಸ್ಟರ್ ತನ್ನ ಜನಪ್ರಿಯತೆಯನ್ನು ಹಾಗೇ ಉಳಿಸಿಕೊಂಡಿದೆ. ಡೀಸೆಲ್ ಎಂಜಿನ್ ಮೂಲಕ ಗಮನ ಸೆಳೆದ ಡಸ್ಟರ್ ಇದೀಗ ಎರಡು ಪೆಟ್ರೋಲ್ ಎಂಜಿನ್ ಕಾರನ್ನು ಅನಾವರಣ ಮಾಡಿದೆ.

ಇದನ್ನೂ ಓದಿ: BS6 ಎಂಜಿನ್ ರೆನಾಲ್ಟ್ ಕ್ವಿಡ್ ಬಿಡುಗಡೆ; ಕೇವಲ 9 ಸಾವಿರ ರೂ ಹೆಚ್ಚಳ!...

ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್ಪೋ 2020 ರಲ್ಲಿ ರೆನಾಲ್ಟ್ ನೂತನ ಡಸ್ಟರ್ ಕಾರು ಅನಾವರ ಮಾಡಿದೆ. 1.0 ಲೀಟರ್, ಟರ್ಬೋ ಪೆಟ್ರೋಲ್ ಹಾಗೂ 1.3 ಲೀಟರ್ ಪೆಟ್ರೋಲ್ ಎಂಜಿನ್ ಎಂಬ ಎರಡು ವೇರಿಯೆಂಟ್ ಕಾರು ಹೊರತಂದಿದೆ. ಇತ್ತೀಚೆಗಷ್ಟೇ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ಪೆಟ್ರೋಲ್ ಕಾರು ಅನಾವರ ಮಾಡಲಾಗಿದೆ.

ಇದನ್ನೂ ಓದಿ: HBC ಕಾಂಪಾಕ್ಟ್ SUV ಕಾರು ಬಿಡುಗಡೆ ಖಚಿತ ಪಡಿಸಿದ ರೆನಾಲ್ಟ್!...

1.3 ಲೀಟರ್ ಕಾರು 4 ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ.153 bhp ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಮೂಲಕ ಸದ್ಯ ಮಾರುಕಟ್ಟೆಯಲ್ಲಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಕಾರಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ನೂತನ ಕಾರು 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ CVT ಆಟೋಮ್ಯಾಟಿಕ್ ಆಯ್ಕೆ ಹೊಂದಿದೆ.