ನವದೆಹಲಿ(ಅ.01): ರೆನಾಲ್ಟ್ ಇಂಡಿಯಾ ಹೊಚ್ಚ ಹೊಸ ಕ್ವಿಡ್ ನಿಯೋಟೆಕ್ ಕಾರು ಬಿಡುಗಡೆ ಮಾಡುತ್ತಿದೆ. ಆಕರ್ಷಕ ಬಣ್ಣದಲ್ಲಿ ನೂತನ ಕಾರು ಲಭ್ಯವಿದೆ. ವಿಶೇಷವಾಗಿ ಡ್ಯುಯೆಲ್ ಟೋನ್ ಕಲರ್ ಸೇರಿದಂತೆ ಕೆಲ ವಿಶೇಷತೆಗಳು ಈ ಕಾರಿನಲ್ಲಿವೆ. ನೂತನ ಕಾರು ಲಿಮಿಟೆಡ್ ಎಡಿಶನ್ ಕಾರು ಇದಾಗಿದ್ದು, ಆಕರ್ಷಕವಾಗಿದೆ.

ರೆನಾಲ್ಟ್ ಕ್ವಿಡ್ RXL ಕಾರು ಬಿಡುಗಡೆ; ಬೆಲೆ 4.16 ಲಕ್ಷ ರೂ!.

ನೂತನ ಕ್ವಿಡ್ ನಿಯೋಟೆಕ್ ಕಾರಿನ ಬೆಲೆ 4.29 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಮಾರುಕಟ್ಟೆಯಲ್ಲಿರು ಕ್ವಿಡ್ ಕಾರಿಗಿಂತ 30,000 ರೂಪಾಯಿ ಅಧಿಕವಾಗಿದೆ. ನೂತನ ಕಾರು 0.8 ಲೀಟರ್ ಪೆಟ್ರೋಲ್ ಎಂಜಿನ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 1.0 ಲೀಟರ್ ಪೆಟ್ರೋಲ್ ಆಯ್ಕೆ ಲಭ್ಯವಿದೆ. 

ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್, SUV ಕಾರು ಅನಾವರಣಕ್ಕೆ ರೆಡಿ!...

ಜಂಸ್ಕಾರ್ ಬ್ಲೂ ಬಾಡಿ ಹಾಗೂ ಸಿಲ್ವರ್ ಕಲರ್ ರೂಫ್ ಅಥವಾ ಸಿಲ್ವರ್ ಬಾಡಿ ಹಾಗೂ ಜಂಸ್ಕಾರ್ ರೂಫ್ ಕಲರ್‌ಗಳಲ್ಲಿ ಲಭ್ಯವಿದೆ. 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, USB ಸಾಕೆಟ್, AUX ಸಾಕೆಟ್, ಫ್ಲೆಕ್ಸ್ ವೀಲ್ಸ್, ಸಿ ಪಿಲ್ಲರ್, ನಿಯೋಟೆಕ್ ಡೋರ್ ಕ್ಲಾಡಿಂಗ್ಸ್, ಸೀಟ್ ಫ್ಯಾಬ್ರಿಕ್ ಮಾಡಿಫಿಕೇಶನ್ ಮಾಡಲಾಗಿದೆ. ಇನ್ನು ಮುಂಭಾಗ ಗ್ರಿಲ್‌ಗೆ ಕ್ರೋಮ್ ಫಿನೀಶಿಂಗ್ ನೀಡಲಾಗಿದೆ.