Asianet Suvarna News Asianet Suvarna News

ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್, SUV ಕಾರು ಅನಾವರಣಕ್ಕೆ ರೆಡಿ!

ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್, ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್, ರೆನಾಲ್ಟ್ ಟ್ರೈಬರ್ ಕಾರಿನ ಮೂಲಕ ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಹಿಡಿತ ಸಾಧಿಸುತ್ತಿರುವ ರೆನಾಲ್ಟ್ ಇದೀಗ ಎಲೆಕ್ಟ್ರಿಕ್ ಹಾಗೂ SUV ಕಾರು ಬಿಡುಗಡೆಗೆ ಸಜ್ಜಾಗಿದೆ.

Renault set to showcase kwid based electric and SUV
Author
Bengaluru, First Published Jan 31, 2020, 7:53 PM IST
  • Facebook
  • Twitter
  • Whatsapp

ನವದೆಹಲಿ(ಜ.31): ರೆನಾಲ್ಟ್ ಇಂಡಿಯಾ ಭಾರತದಲ್ಲಿ HBC ಕಾನ್ಸೆಪ್ಟ್ ಕಾರು ಅನಾವರಣಕ್ಕೆ ಸಜ್ಜಾಗಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಆಟೋ ಎಕ್ಸ್ಪೋ 2020 ಮೋಟಾರು ಶೋದಲ್ಲಿ ರೆನಾಲ್ಟ್ SUV ಕಾರಿನ ಜೊತೆಗೆ ಕ್ವಿಡ್ ಎಲೆಕ್ಟ್ರಿಕ್ ಕಾರು ಕೂಡ ಅನಾವರಣ ಮಾಡಲಿದೆ.

ಇದನ್ನೂ ಓದಿ: ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟ್ ಯಶಸ್ವಿ- ಶೀಘ್ರದಲ್ಲಿ ಬಿಡುಗಡೆ!

ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಈಗಾಗಲೇ ಚೀನಾದಲ್ಲಿ ಪರಿಚಯಿಸಲಾಗಿದೆ. ಇದೀಗ ಆಟೋ ಎಕ್ಸ್ಪೋದ ಮೂಲಕ ಭಾರತದಲ್ಲಿ ಅನಾವರಣ ಮಾಡಲು ನಿರ್ಧರಿಸಿದೆ. ಕ್ವಿಡ್ ರೀತಿಯಲ್ಲೆ ಕಡಿಮೆ ಬೆಲೆ, ಹೆಚ್ಚು ಮೈಲೇಜ್ ರೇಂಜ್, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ಆಯ್ಕೆಗಳು ಕ್ವಿಡ್ ಎಲೆಕ್ಟ್ರಿಕ್ ಕಾರಿನಲ್ಲಿವೆ.

ಇದನ್ನೂ ಓದಿ: HBC ಕಾಂಪಾಕ್ಟ್ SUV ಕಾರು ಬಿಡುಗಡೆ ಖಚಿತ ಪಡಿಸಿದ ರೆನಾಲ್ಟ್!

ರೆನಾಲ್ಟ್ HBC ಕಾನ್ಸೆಪ್ಟ್ ಕಾರಿನ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ HBC ಕಾರು ಅನಾವರಣ ಮಾಡುತ್ತಿದೆ. ಹೀಗಾಗಿ ಫೆಬ್ರವರಿ 7 ರಿದ 12ರ ವರೆಗೆ ನಡಯಲಿರುವ ಆಟೋ ಎಕ್ಸ್ಪೋ ಕುತೂಹಲಗಳ ಕೇಂದ್ರ ಬಿಂದುವಾಗಿದೆ.

Follow Us:
Download App:
  • android
  • ios