Asianet Suvarna News Asianet Suvarna News

ಭಾರತದಲ್ಲಿ ಓಟ ನಿಲ್ಲಿಸಿದ ರೆನಾಲ್ಟ್ ಡಸ್ಟರ್ 85PS ಕಾರು!

ರೆನಾಲ್ಟ್ ಡಸ್ಟರ್ ಕಾರು ಭಾರತದ ಅತ್ಯಂತ ಜನಪ್ರೀಯ SUV ಕಾರು. ಅತ್ಯಂತ ಆಕರ್ಷಣೀಯ ವಿನ್ಯಾಸ ಹಾಗೂ ಹೆಚ್ಚು ಬಲಿಷ್ಠ ಇಂಜಿನ್ ಹೊಂದಿರುವ ರೆನಾಲ್ಟ್ ಡಸ್ಟರ್ 85PS ಕಾರು ಸ್ಥಗಿತಗೊಂಡಿದೆ. ಅಷ್ಟಕ್ಕೂ ಭಾರತದಲ್ಲಿ ಈ ಕಾರು ಸ್ಥಗಿತಗೊಂಡಿದ್ದೇಕೆ? ಇಲ್ಲಿದೆ ಉತ್ತರ.

Renault Duster 85 PS Production Stopped
Author
Bengaluru, First Published Oct 30, 2018, 8:05 PM IST
  • Facebook
  • Twitter
  • Whatsapp

ನವದೆಹಲಿ(ಅ.30): ಭಾರತದಲ್ಲಿ SUV ಕಾರಿಗೆ ಹೊಸ ಆಯಾಮ ನೀಡಿ ರೆನಾಲ್ಟ್ ಡಸ್ಟರ್ ಕಾರು ಕಾರು ಪ್ರೀಯರ ನೆಚ್ಚಿನ ಕಾರಾಗಿ ಹೊರಹೊಮ್ಮಿತ್ತು. 2012ರಲ್ಲಿ ಭಾರತಕ್ಕೆ ಕಾಲಿಟ್ಟ ಈ ರೆನಾಲ್ಟ್ ಡಸ್ಟರ್ ಇತರ SUV ಕಾರುಗಳಿಗೆ ಭಾರಿ ಪೈಪೋಟಿ ನೀಡಿದೆ.

Renault Duster 85 PS Production Stopped

ಹೆಚ್ಚು ಬಲಿಷ್ಠ, ಹೆಚ್ಚು ಆಕರ್ಷಕ ರೆನಾಲ್ಟ್ ಡಸ್ಟರ್ 85ps ಡೀಸೆಲ್ ಇಂಜಿನ್ ಕಾರು ಭಾರತದಲ್ಲಿ ತನ್ನ ಓಟ ನಿಲ್ಲಿಸಿದೆ. ರೆನಾಲ್ಟ್ ಡಸ್ಟರ್ 85ps ಡೀಸೆಲ್ ಕಾರಿಗೆ ಬೇಡಿಕೆ ಇಲ್ಲದ ಕಾರಣ ರೆನಾಲ್ಟ್ ಇಂಡಿಯಾ ಈ ನಿರ್ಧಾರ ತೆಗೆದುಕೊಂಡಿದೆ.

Renault Duster 85 PS Production Stopped

ರೆನಾಲ್ಟ್ ಡಸ್ಟರ್ AMT ಪೆಟ್ರೋಲ್ ಕಾರಿಗಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಪೆಟ್ರೋಲ್ ವೆರಿಯೆಂಟ್ ಕಾರು ಲಭ್ಯವಿದೆ. ಆದರೆ ರೆನಾಲ್ಟ್ ಡಸ್ಟರ್ 85ps ಡೀಸೆಲ್ ಕಾರು ಇನ್ಮುಂದೆ ಲಭ್ಯವಿರೋದಿಲ್ಲ ಎಂದು ರೆನಾಲ್ಟ್ ಇಂಡಿಯಾ ಹೇಳಿದೆ.
 

Follow Us:
Download App:
  • android
  • ios