ಬಜಾಜ್ ಪಲ್ಸರ್ 150 vs KTM 125 ಡ್ಯೂಕ್ ರೇಸ್- ಅಚ್ಚರಿ ಫಲಿತಾಂಶ!
ಬಜಾಜ್ ಪಲ್ಸಾರ್ 150 ಹಾಗೂ KTM 125 ಡ್ಯೂಕ್ ನಡುವಿನ ರೇಸ್ ಅಚ್ಚರಿ ಫಲಿತಾಂಶ ನೀಡಿದೆ. 125ಸಿಸಿ ಹಾಗೂ 150ಸಿಸಿ ಬೈಕ್‌ಗಳ ಸಾಮರ್ಥ್ಯ, ವೇಗ, ಪಿಕ್ ಅಪ್ ಎಲ್ಲವೂ ಈ ರೇಸ್‌ನಲ್ಲಿ ಪರೀಕ್ಷಿಸಲಾಯಿತು. ಇಲ್ಲಿದೆ ರಿಸಲ್ಟ್.
ಬೆಂಗಳೂರು(ಮಾ.17): ಭಾರತದಲ್ಲಿ ಬಜಾಜ್ ಪಲ್ಸರ್ ಹಾಗೂ KTM ಡ್ಯೂಕ್ ಬೈಕ್‌ಗೆ ಗರಿಷ್ಠ ಮಾರುಕಟ್ಟೆ ಇದೆ. ಆದರೆ ಈ ಎರಡು ಬೈಕ್‌ಗಳಲ್ಲಿ ಬಲಿಷ್ಠ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್ ಯಾವುದು? ಈ ಪಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಬಜಾಜ್ ಪಲ್ಸರ್ 150 ಹಾಗೂ KTM 125 ಡ್ಯೂಕ್ ಬೈಕ್ ರೇಸ್ ಆಯೋಜಿಸಲಾಗಿತ್ತು. ಇವರ ಫಲಿತಾಂಶ ಅಚ್ಚರಿ ತರುವಂತಿದೆ.
ಇದನ್ನೂ ಓದಿ: ಬಜಾಜ್ ಚೇತಕ್ ಸ್ಕೂಟರ್‌ಗೆ ಟ್ರಕ್ ಟಯರ್ - ಇದು ವಿಚಿತ್ರ ಸ್ಕೂಟರ್!
ಮೂರು ರೌಂಡ್‌ಗಳಲ್ಲಿ ರೇಸ್ ನಡೆಸಲಾಯಿತು. ಮೊದಲ ರೌಂಡ್‌ನಲ್ಲಿ ಕೆಟಿಎಂ 125 ಡ್ಯೂಕ್ ಮುನ್ನಡೆ ಪಡೆದುಕೊಂಡಿತು. ಪಲ್ಸರ್ ಆರಂಭ ನಿಧಾನವಾಗಿತ್ತು. ಅಷ್ಟರೊಳಗೆ ಡ್ಯೂಕ್ ಮುನ್ನಡೆ ಕಾಯ್ದುಕೊಂಡಿದೆ. 2ನೇ ರೌಂಡ್‌ನಲ್ಲಿ ಎರಡು ಬೈಕ್‌ಗಳು ಒಂದೇ ಸಮಯದಲ್ಲಿ ಸ್ಟಾರ್ ಮಾಡಲಾಯಿತು. ಒಂದೇ ಸಮಯದಲ್ಲೇ ರೇಸ್ ಆರಂಭಿಸಿತು. ಈ ವೇಳೆ ಪಲ್ಸರ್ ಮುನ್ನಡೆ ಪಡೆದುಕೊಂಡಿತು. ಆದರೆ ರೇಸ್ ಟಚ್ ಲೈನ್ ಸಮೀಪಿಸುತ್ತಿದ್ದಂತೆ ಡ್ಯೂಕ್ ತೀವ್ರ ಸ್ಪರ್ಧೆ ನೀಡಿತು.
ಇದನ್ನೂ ಓದಿ: ಭಾರತಕ್ಕೆ ಕಾಲಿಡುತ್ತಿದೆ ಫ್ರೆಂಚ್ SUV ಕಾರು -ಟಾಟಾಗೆ ಪೈಪೋಟಿ!
3ನೇ ಸುತ್ತಿನಲ್ಲಿ ರೈಡರ್‌ಗಳು ಬೈಕ್ ಬದಲಾಯಿಸಿದರು. ಈ ಸುತ್ತಿನಲ್ಲೂ ಪಲ್ಸರ್ ಹಾಗೂ ಡ್ಯೂಕ್ ತೀವ್ರ ಪೈಪೋಟಿ ನಡೆಸಿತು. ಗುರಿ ಮುಟ್ಟುವ ವೇಳೆ ಡ್ಯೂಕ್, ಪಲ್ಸಾರ್ ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿತು. ಈ ಮೂಲಕ 125 ಸಿಸಿ ಡ್ಯೂಕ್, 150 ಸಿಸಿ ಪಲ್ಸರ್ ಬೈಕ್ ಮುಂದೆ ಅತ್ಯಂತ ಶಕ್ತಿ ಶಾಲಿ ಹಾಗೂ ಇತರ ಬೈಕ್‌ಗಳಿಗೆ ಪೈಪೋಟಿ ನೀಡಬಲ್ಲ ಸಾಮರ್ಥ್ಯ ಹೊಂದಿದೆ ಅನ್ನೋದನ್ನ ಸಾಬೀತುಪಡಿಸಿತು.