ನವದೆಹಲಿ(ಮಾ.16): ಫ್ರೆಂಚ್ ಮೂಲದ ಸಿಟ್ರೋಯೆನ್ ಕಾರು ಇದೀಗ ಭಾರತಕ್ಕೆ ಕಾಲಿಡುತ್ತಿದೆ. ಎಪ್ರಿಲ್ 3 ರಂದು ಮೊದಲ ಕಾರು ಅನಾವರಣ ಮಾಡಲು ಸಿಟ್ರೋಯೆನ್ ಸಂಸ್ಥೆ ಮುಂದಾಗಿದೆ. ವಿಶ್ವದ ಕಾರು ಅನ್ನೋ ಪ್ರಶಸ್ತಿ ಪಡೆದುಕೊಂಡಿರುವ ಸಿಟ್ರೋಯೆನ್ C5 ಕಾರನ್ನು ಭಾರತದಲ್ಲಿ ಅನಾವರಣ ಮಾಡುತ್ತಿದೆ.

ಇದನ್ನೂ ಓದಿ: ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್, ಮಹೀಂದ್ರ XUV500- ಮೊದಲ ಸ್ಥಾನ ಯಾರಿಗೆ?

ತಮಿಳುನಾಡಿನ ಹೊಸೂರಿನಲ್ಲಿರುವ ಕಾರು ಘಟಕದಲ್ಲಿ ಸಿಟ್ರೋಯೆನ್ ಕಾರು ಉತ್ಪಾದನೆಯಾಗುತ್ತಿದೆ.  ಸಿಟ್ರೋಯೆನ್ C5 ಕಾರು 2.0 ಲೀಟರ್ ಡೀಸೆಲ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಇಷ್ಟೇ ಅಲ್ಲ ಶೀಘ್ರದಲ್ಲೇ ಹೈಬ್ರಿಡ್ ಕಾರು ಕೂಡ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಮನೆ ಮುಂದೆ ವಾಹನ ನಿಲ್ಲಿಸಿದ್ರೆ ಹುಷಾರ್: ಬೀಳುತ್ತೆ ಭಾರೀ ದಂಡ

8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3 ಇಂಚಿನ TFT-ಡಿಜಿಟಲ್ ಇನ್ಸ್ಟ್ರುಮೆಂಟ್ ಸ್ಕ್ರೀನ್ ಹೊಂದಿದೆ. ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಹಾಗೂ ಮಹೀಂದ್ರ XUV500 ಕಾರಿಗೆ ಪ್ರತಿಸ್ಪರ್ಧಿಯಾಗಿ ಈ ಕಾರು ಬಿಡುಗಡೆಯಾಗುತ್ತಿದೆ. ಆದರೆ  ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿಗಳು ಇನ್ನೂ ಬಹಿರಂಗವಾಗಿಲ್ಲ.