ಭಾರತದ ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ!

ಪುಣೆ ಮೂಲದ ಎಲೆಕ್ಟ್ರಿಕ್ ಬೈಕ್ ಕಂಪನಿ ಇದೀಗ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ. ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು  ಟಾರ್ಕ್ T6X ಮುಂದಾಗಿದೆ. ಈ ಬೈಕ್ ವಿಶೇಷತೆ ಏನು? ಇಲ್ಲಿದೆ ವಿವರ.
 

Pune based Tork T6X will lunch Electric bike end of this year

ನವದೆಹಲಿ(ಮೇ.12): ಪುಣೆ ಮೂಲದ ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ ಇದೀಗ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಕಳೆದ ಕೆಲ ವರ್ಷಗಳಿಂದ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಯಲ್ಲಿ ತೊಡಗಿದ್ದ ಟಾರ್ಕ್ T6X ಇದೀಗ ಭಾರತದ ಮೊತ್ತ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಮೂಲಕ ವಿದೇಶಿ ಎಲೆಕ್ಟ್ರಿಕ್ ಬೈಕ್ ಕಂಪನಿಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.

ಇದನ್ನೂ ಓದಿ: ಬೈಕನ್ನೇ ದೇವರಂತೆ ಪೂಜಿಸುವ ಬುಲೆಟ್ ಬಾಬಾ ಮಂದಿರ!

ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ 2019ರ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನೂತನ ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ. 2019ರ ಜನವರಿಯಲ್ಲಿ ರೋಡ್ ಟೆಸ್ಟ್ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಟಾರ್ಕ್ T6X ಜೂನ್ ತಿಂಗಳಲ್ಲಿ ಬೈಕ್ ಬಿಡುಗಡೆ ಮಾಡಲು ತಯಾರಿ ನಡೆಸಿತ್ತು. ಆದರೆ ಕೆಲ ಕಾರಣಗಳಿಂದ ಬೈಕ್ ಬಿಡುಗಡೆ ಇದೀಗ ವರ್ಷಾಂತ್ಯಕ್ಕೆ ಮುಂಡೂಡಿದೆ.

Pune based Tork T6X will lunch Electric bike end of this year

ಇದನ್ನೂ ಓದಿ: ಹೊಸ ಅವತಾರದಲ್ಲಿ ಭಾರತದ ಕಡಿಮೆ ಬೆಲೆಯ TVS ರೆಡಿಯಾನ್ ಬೈಕ್!

72 Ah ಲೀಥಿಯಂ ಬ್ಯಾಟರಿ ಬಳಸಲಾಗಿದೆ. 1 ಗಂಟೆಯಲ್ಲಿ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ಈ ಬೈಕ್ ಗರಿಷ್ಠ  ವೇಗ 100 KMPH. ಮಹಾರಾಷ್ಟ್ರದ ಚಕನ್ ಬಳಿ ಇರುವ ಉತ್ಪಾದನ ಘಟಕದಲ್ಲಿ ಬೈಕ್ ನಿರ್ಮಾಣವಾಗುತ್ತಿದೆ. ನೂತನ ಬೈಕ್ ಬೆಲೆ ಬಹಿರಂಗವಾಗಿಲ್ಲ.

Latest Videos
Follow Us:
Download App:
  • android
  • ios