ಚೆನ್ನೈ(ಮೇ.10): ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಬೈಕ್ ಅನ್ನೋ ಹೆಗ್ಗಳಿಕೆಗೆ TVS ರೆಡಿಯಾನ್ ಪಾತ್ರವಾಗಿದೆ. ಇದೀಗ ರೆಡಿಯಾನ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. 48,400 ರೂಪಾಯಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾದ ಈ ಬೈಕ್, ಮಾರಾಟದಲ್ಲೂ ದಾಖಲೆ ಬರೆದಿತ್ತು. ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ಮೂಲಕ ಭಾರತೀಯರ ಮನ ಗೆದ್ದಿತ್ತು.

ಇದನ್ನೂ ಓದಿ: ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ-5 ವೇರಿಯೆಂಟ್ ಲ

ಇದೀಗ TVS ರೆಡಿಯಾನ್ ಬೈಕ್ ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಟೈಟಾನಿಯಂ ಗ್ರೇ ಹಾಗೂ ವೊಲ್ಕಾನೊ ರೆಡ್ ಕಲರ್‌ಗಳಲ್ಲೂ ನೂತನ ಬೈಕ್ ಲಭ್ಯವಿದೆ. ಈ ಮೂಲಕ ಒಟ್ಟು 6 ಬಣ್ಣಗಳಲ್ಲಿ ಟಿವಿಎಸ್ ರೆಡಿಯಾನ್ ಬೈಕ್ ಲಭ್ಯವಿದೆ. ನೂತನ ಬೈಕ್ ಬೆಲೆ 12,000 ರೂಪಾಯಿ ಹೆಚ್ಚಳವಾಗಿದೆ. ಸದ್ಯ TVS ರೆಡಿಯಾನ್ ಬೈಕ್ ಬೆಲೆ  50,070 ರೂಪಾಯಿ.

ಇದನ್ನೂ ಓದಿ: ಹೀರೋ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಬಿಡುಗಡೆ ದಿನಾಂಕ ಪ್ರಕಟ!

ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 109.7cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಡ್ಯೂರೇಬಲ್ ಎಂಜಿನ್ ಹೊಂದಿರುವ ಟಿವಿಎಸ್ ರೆಡಿಯಾನ್ 8.2 bhp (@7000 RPM) ಪವರ್ ಹಾಗೂ 8.7 NM ಪೀಕ್ ಟಾರ್ಕ್(@5000 rpm)ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.