ಆಟಿಕೆ ಕಾರಿನಲ್ಲಿ ಮುಖ್ಯ ರಸ್ತೆಗೆ ಬಂದ ಪುಟಾಣಿ- ಕಕ್ಕಾಬಿಕ್ಕಿಯಾದ ಪೊಲೀಸ್!
ಮನೆ ಅಂಗಳದಲ್ಲಿ 5 ವರ್ಷದ ಮಗು ತನ್ನ ಎಲೆಕ್ಟ್ರಿಕ್ ಕಾರಿನ ಜೊತೆ ಆಟವಾಡುತ್ತಿತ್ತು. ಕೆಲ ಹೊತ್ತಲ್ಲೇ ಮಗು ಕಾಣೆಯಾಗಿದೆ. ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಅಷ್ಟರಲ್ಲೇ ಮಗು ತನ್ನ ಆಟಿಕೆ ಕಾರಿನಲ್ಲಿ ಲಾಂಗ್ ಡ್ರೈವ್ ಹೊರಟಾಗಿತ್ತು. ಇಲ್ಲಿದೆ ರೋಚಕ ಸ್ಟೋರಿಯ ಸಂಪೂರ್ಣ ವಿವರ.
ವಿಜಯವಾಡ(ಮಾ.28): ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ವಾಹನಗಳನ್ನು ಚಲಾಯಿಸಲು ಅರ್ಹರು. ಆದರೆ ಕೇವಲ 5 ವರ್ಷ ಮಗುವೊಂದು ಎಲೆಕ್ಟ್ರಿಕ್ ಕಾರಿನ ಜೊತೆ ಮುಖ್ಯರಸ್ತೆಯಲ್ಲಿ ಡ್ರೈವ್ ಮಾಡಿ ಪೊಲೀಸರ ಎದೆಬಡಿತ ಹೆಚ್ಚಿಸಿದ ಘಟನೆ ನಡೆದಿದೆ.
ಇದನ್ನೂ ಓದಿ: ಖರೀದಿಸಿದ 2 ನಿಮಿಷದಲ್ಲಿ ಕಾಪೌಂಡ್‌ಗೆ ಡಿಕ್ಕಿ- 2.2 ಕೋಟಿ ಲ್ಯಾಂಬೋರ್ಗಿನಿ ಪುಡಿ ಪುಡಿ!
ಈ ಘಟನೆ ನಡೆದಿರುವುದು ವಿಜಯವಾಡದಲ್ಲಿ. 5 ವರ್ಷದ ಮಗು ತನ್ನ ಆಟಿಕೆ ಕಾರಿನಲ್ಲಿ ಮನೆಯ ಮುಂಭಾಗದಲ್ಲಿ ಆಡುತ್ತಿತ್ತು. ಬ್ಯಾಟರಿ ಚಾಲಿತ, ರಿಮೂಟ್ ಕಂಟ್ರೋಲ್ ಕಾರಿನಲ್ಲಿ ಆಡುತ್ತಿದ್ದ ಮಗು ತಿಳಿಯದೇ ಮುಖ್ಯರಸ್ತೆ ತಲುಪಿದ್ದಾನೆ. ಬೆಂಝ್ ಸರ್ಕಲ್ ಬಳಿ ತನ್ನ ಆಟಿಕೆ ಕಾರಿನಲ್ಲಿ ಡ್ರೈವ್ ಮಾಡುತ್ತಾ ತೆರಳಿದ್ದಾನೆ.
ಮುಖ್ಯರಸ್ತೆಯಲ್ಲಿ ಕಾರು ಸೇರಿದಂತೆ ಇತರ ಭಾರಿ ವಾಹನಗಳು ಚಲಿಸುತ್ತಿತ್ತು. ಇದೇ ರಸ್ತೆಯಲ್ಲಿ ಆಟಿಕೆ ಕಾರಿನ ಜೊತೆ ಮಗು ಕೂಡ ಚಲಿಸಿದ್ದಾನೆ. ಸರ್ಕಲ್ ಬಳಿ ಸಾರ್ವಜನಿಕರು ಗಮನಿಸಿದ್ದಾರೆ. ಇದೇ ವೇಳೆ ಪೊಲೀಸರು ಕಣ್ಣಿಗೆ ಬಿದ್ದಿದೆ. ತಕ್ಷಣವೇ ಪೊಲೀಸರು ಬಾಲಕ ಹಾಗೂ ಆಟಿಕೆ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!
ಪೊಲೀಸರು ಹಾಗೂ ಸಾರ್ವಜನಿಕರನ್ನು ನೋಡಿದ ಮಗು ಅಳಲು ಶುರುಮಾಡಿದೆ. ಬಳಿಕ ಆಟೋ ರಿಕ್ಷಾದಲ್ಲಿ ಮಗುವನ್ನು ಪೋಷಕರ ಬಳಿ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲೇ ಪೋಷಕರು ಮನೆಯ ಸುತ್ತ ಮುತ್ತ ಮಗುವಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ಮುಖ್ಯ ರಸ್ತೆ ತಲುಪಿದ ವಿಚಾರ ಪೋಷಕರಿಗೆ ತಿಳಿದೇ ಇಲ್ಲ.
ಪೋಷಕರ ಜೊತೆ ಮಾತನಾಡಿದ ಪೊಲೀಸರು ಮಕ್ಕಳ ಮೇಲೆ ಕಣ್ಣಿಡಲು ಸೂಚಿಸಿದ್ದಾರೆ. ಪೊಲೀಸರು ಹಾಗೂ ಸಾರ್ವಜನಿಕರ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಆಟಿಕೆ ಕಾರುಗಳನ್ನು ಮುಖ್ಯರಸ್ತೆಗಳಲ್ಲಿ ಚಲಾಯಿಸುವಂತಿಲ್ಲ. ಇದು ಕಾನೂನು ಉಲ್ಲಂಘಿಸಿದಂತೆ. ಈ ಪ್ರಕರಣದಲ್ಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.