ವಾಹನದ ಮೇಲೆ ಧರ್ಮ, ಜಾತಿ, ರಾಜಕೀಯ ಸ್ಟಿಕ್ಕರ್; ಬೀಳುತ್ತೆ ಭಾರಿ ದಂಡ!
ವಾಹನದ ಮೇಲೆ ಸ್ಟಿಕ್ಕರ್ ಅಥವಾ ಬರಹಗಳನ್ನು ಅಂಟಿಸುವುದು ಭಾರತದಲ್ಲಿ ಟ್ರೆಂಡ್. ಖಾಸಗಿ ವಾಹನವಾಗಲಿ, ಕ್ಯಾಬ್ ಆಗಲಿ, ಕಾರಿನ ಖಾಲಿ ಜಾಗದಲ್ಲಿ ಸ್ಟಿಕ್ಕರ್ ರಾರಾಜಿಸುತ್ತದೆ. ಇದೀಗ ಕಾರು ಸೇರಿದಂತೆ ಯಾವುದೇ ವಾಹನದಲ್ಲಿ ಸ್ಟಿಕ್ಕರ್ ಅಂಟಿಸಿದರೆ ಬಾರಿ ದಂಡ ಕಟ್ಟಬೇಕು.
ಜೈಪುರ(ಸೆ.04): ಭಾರತದಲ್ಲೀಗ ಹಿಂದಿನಂತೆ ಬೇಕಾಬಿಟ್ಟಿ ವಾಹನ ಚಲಾಯಿಸುವಂತಿಲ್ಲ. ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಹೆಚ್ಚೆಂದರೆ 100 ರೂ ದಂಡ, ಕಟ್ಟಿದರಾಯಿತು ಅನ್ನೋ ಜಾಯಮಾನ ಈಗ ನಡೆಯಲ್ಲ. ಕಾರಣ ಭಾರತದೆಲ್ಲೆಡೆ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿದೆ. ದಂಡ ದ ಮೊತ್ತ 10 ಪಟ್ಟು ಹೆಚ್ಚಿಸಲಾಗಿದೆ. ಹೀಗಾಗಿ ಪ್ರತಿ ಸಣ್ಣ ವಿಚಾರದಲ್ಲೂ ಎಚ್ಚರಿಕೆ ವಹಿಸಬೇಕು. ಹೊಸ ಮೋಟಾರ್ ಕಾಯ್ದೆ ಜೊತೆಗೆ ಮತ್ತೊಂದು ನಿಯಮ ಕೂಡ ಜಾರಿಯಾಗಿದೆ. ವಾಹನದ ಮೇಲೆ ಧರ್ಮ, ಜಾತಿ, ರಾಜಕೀಯ ಸೇರಿದಂತೆ ಹಲವು ಸ್ಟಿಕ್ಕರ್‌ಗಳು ಹಾಕಿದರೂ ದಂಡ ಕಟ್ಟಬೇಕು.
ಇದನ್ನೂ ಓದಿ: 15 ಸಾವಿರ ಬೆಲೆಯ ಸ್ಕೂಟಿ: ಹೈರಾಣಾದ 23 ಸಾವಿರ ದಂಡ ಕಟ್ಟಿ!
ಭಾರತೀಯರು ತಮ್ಮ ವಾಹನದ ಮೇಲೆ ಸಂಪೂರ್ಣ ವಿಳಾಸ ಹೊರತು ಪಡಿಸಿದರೆ, ಇನ್ನೆಲ್ಲಾ ಮಾಹಿತಿಗಳನ್ನು ಸ್ಟಿಕ್ಕರ್ ರೂಪದಲ್ಲಿ ಹಾಕಿರುತ್ತಾರೆ. ಅದರಲ್ಲೂ ಧರ್ಮ, ಜಾತಿ, ರಾಜಕೀಯ ಕುರಿತ ಸ್ಟಿಕ್ಕರ್‌ಗಳು ವಾಹನದಲ್ಲಿ ರಾರಾಜಿಸುತ್ತವೆ. ಇದೀಗ ವಾಹನದಲ್ಲಿ ಈ ರೀತಿ ಸ್ಟಿಕ್ಕರ್ ಹಾಕುವುದು ರಾಜಸ್ಥಾನದಲ್ಲಿ ನಿಷೇಧಿಸಲಾಗಿದೆ. ಹೊಸ ಮೋಟಾರು ನಿಯಮದ ಜೊತೆಗೆ ರಾಜಸ್ಥಾನ ಹೆಚ್ಚುವರಿ ನಿಯಮವೊಂದನ್ನು ಜಾರಿ ಮಾಡಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಕೆಲ ದಿನ ಹೊಸ ಟ್ರಾಫಿಕ್ಸ್ ರೂಲ್ಸ್ ಅನ್ವಯಿಸಲ್ಲ: ಹೊಡೀರಿ ಹಲಗಿ
ಆಗಸ್ಟ್ 9 ರಂದು ರಾಜಸ್ಥಾನ ಪೊಲೀಸರ ಸುತ್ತೋಲೆ ಹೊರಡಿಸಿತ್ತು. ಜೈಪುರ ಸೇರಿದಂತೆ ರಾಜಸ್ಥಾನ ನಗರದಲ್ಲಿನ ಕಾರು ಸೇರಿದಂತೆ ಇತರ ವಾಹನಗಳ ಮೇಲೆ ಜಾತಿ, ಧರ್ಮ, ರಾಜಕೀಯ , ವೃತ್ತಿ ಹಾಗೂ ಇತರ ಸ್ಟಿಕ್ಕರ್ ಹಾಕುವುದನ್ನು ನಿಷೇಧಿಸಲಾಗಿದೆ ಎಂದಿತ್ತು. ಆದರೆ ಯಾರೂ ಕೂಡ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಸೆಪ್ಟೆಂಬರ್ 1 ರಿಂದ ರಾಜಸ್ಥಾನದಲ್ಲಿ ನೂತನ ನಿಯಮ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ದೇಶದೆಲ್ಲಡೆ ಹೊಸ ಟ್ರಾಫಿಕ್ ನಿಯಮ; ಪ.ಬಂಗಾಳಕ್ಕೆ ಅನ್ವಯವಾಗಲ್ಲ!
ಕಾರಿನ ಹಿಂಬದಿ ಗಾಜಿನ ಮೇಲೆ, ಕಾರಿನ ಇತರೆಡೆಗಳಲ್ಲಿ ಈ ರೀತಿ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಹಿಂಭಾಗ ವಿಂಡ್‌ಶೀಲ್ಡ್ ಮೇಲೆ ಜಾಹೀರಾತು, ಪ್ರಯೋಜಕತ್ವ ಸೇರಿದಂತೆ ಹಲವು ಸ್ಟಿಕ್ಕರ್ ಕೂಡ ಸಾಮಾನ್ಯವಾಗಿದೆ. ಇದರಿಂದ ವಾಹನ ಸವಾರರಿಗೆ ಕ್ಲೀಯರ್ ವಿಸಿಬಿಲಿಟಿ ಸಿಗುವುದಿಲ್ಲ. ಹಿಂಬದಿಯಿಂದ ಬರುವ ವಾಹನಗಳ ಸ್ಪಷ್ಟ ಚಿತ್ರಣ ಸಿಗುವುದಿಲ್ಲ. ಇದು ಅಪಪಘಾತಕ್ಕೆ ಕಾರಣವಾಗಲಿದೆ. ಈ ರೀತಿಯ ಸ್ಟಿಕ್ಕರ್‌ನಿಂತ ಇತರ ವಾಹನ ಚಾಲಕರ ಏಕಾಗ್ರತೆಗೂ ತೊಡಕಾಗಲಿದೆ. ಜಾತಿ, ಧರ್ಮ ಹಾಗೂ ರಾಜಕೀಯ ಕುರಿತ ಸ್ಟಿಕ್ಕರ್‌ಗಳು ಸಮಾಜ ಸಾಮರಸ್ಯ ಕದಡಲಿದೆ. ಹೀಗಾಗಿ ನಿಷೇಧಿಸಲಾಗಿದೆ ಎಂದು ರಾಜಸ್ಥಾನ ಪೊಲೀಸ್ ಸ್ಪಷ್ಟಪಡಿಸಿದೆ.
1988ರ ಮೋಟಾರು ಕಾಯ್ದೆಯ ಸೆಕ್ಷನ್ 177 ಪ್ರಕಾರ, ವಾಹನದ ಮೇಲಿನ ಸ್ಟಿಕ್ಕರ್ ಅಳವಡಿಕೆಗೆ ನಿರ್ದಿಷ್ಠ ದಂಡ ಮೊತ್ತವನ್ನು ನಮೂದಿಸಿಲ್ಲ. ಆದರೆ ನಿಯಮ ಉಲ್ಲಂಘನೆಯಾಗಿದ್ದಲ್ಲಿ, ಕನಿಷ್ಠ 100 ಹಾಗೂ ಗರಿಷ್ಠ 300 ರೂಪಾಯಿ ದಂಡ ಹಾಕಬಕುದು ಎಂದು ಉಲ್ಲೇಖಿಸಲಾಗಿದೆ. ವಾಹನದ ನಂಬರ್ ಪ್ಲೇಟ್ ಮೇಲೆ ಯಾವುದೇ ಸ್ಟಿಕ್ಕರ್ ಅಂಟಿಸುವುದು ಕೂಡ ನಿಯಮಬಾಹಿರವಾಗಿದೆ. ಇದೀಗ ವಾಹನ ವಿಂಡ್‌ಶೀಟ್‌ನಲ್ಲೂ ಸ್ಟಿಕ್ಕರ್ ಅಂಟಿಸಿದರೆ ನಿಯಮ ಉಲ್ಲಂಘನೆಯಾಗಿದೆ.
ಸೆ.04ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ