ಸಂಚಾರಿ ನಿಯಮ ಉಲ್ಲಂಘನೆಗೆ ಸೆ.1ರಿಂದ ಭಾರಿ ದಂಡದ ಬರೆ

ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಬೀಳುತ್ತೆ ಭಾರೀ ದಂಡ. ಮುಂದಿನ ಸೆಪ್ಟೆಂಬರ್ 1 ರಿಂದಲೇ ನೂತನ ಕಾನೂನು ಜಾರಿ ಸಾಧ್ಯತೆ ಇದೆ. 

Heavy Fine For Traffic Violation From September 1

ನವದೆಹಲಿ [ಆ.22]: ಆ್ಯಂಬುಲೆನ್ಸ್‌ನಂತಹ ತುರ್ತು ವಾಹನಗಳಿಗೆ ದಾರಿ ಬಿಡದೇ ಇದ್ದರೆ 10 ಸಾವಿರ ರು. ದಂಡ ಸೇರಿದಂತೆ ಸಾರಿಗೆ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ವಿಧಿಸಲು ಅವಕಾಶ ಇರುವ ನೂತನ ಮೋಟಾರು ವಾಹನ ಕಾಯ್ದೆ ಸೆ.1ರಿಂದ ಜಾರಿಗೆ ಬರುವ ಸಾಧ್ಯತೆ ನಿಚ್ಚಳವಾಗಿದೆ.

ಮೋಟಾರು ವಾಹನ ತಿದ್ದುಪಡಿ ಕಾಯ್ದೆ- 2019 ಈಗಾಗಲೇ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡಿದೆ. ಕುಡಿದು ವಾಹನ ಚಾಲನೆ, ಅತಿ ವೇಗದ ವಾಹನ ಚಾಲನೆ ಸೇರಿದಂತೆ 63 ಷರತ್ತುಗಳನ್ನು ನಾವು ಸೆ.1ರಿಂದ ಅನುಷ್ಠಾನಗೊಳಿಸಲು ನಿರ್ಧರಿಸಿದ್ದೇವೆ. ಆದರೆ ಇದಕ್ಕೆ ಕಾನೂನು ಸಚಿವಾಲಯದ ಒಪ್ಪಿಗೆ ಬಾಕಿ ಇದೆ ಎಂದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನೂತನ ಕಾಯ್ದೆ ಪ್ರಕಾರ, ಆ್ಯಂಬುಲೆನ್ಸ್‌ ನಂತಹ ತುರ್ತು ವಾಹನಗಳಿಗೆ ದಾರಿ ಬಿಡದೇ ಇದ್ದರೆ 10,000 ರು. ದಂಡ ವಿಧಿಸಲು ಅವಕಾಶವಿದೆ. ಅಲ್ಲದೇ ಕುಡಿದು ವಾಹನ ಚಾಲನೆ ಮತ್ತು ಪರವಾನಗಿ ರದ್ದಾಗಿದ್ದರೂ ವಾಹನ ಚಾಲನೆ ಮಾಡಿದರೂ ಇಷ್ಟೇ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ದಂಡ ಎಷ್ಟು?  (ರು.ಗಳಲ್ಲಿ)

ಅಪರಾಧ    ಹೊಸ ದಂಡ

ಸಂಚಾರ ನಿಯಮ ಉಲ್ಲಂಘನೆ    500

ಲೈಸೆನ್ಸ್‌ ಇಲ್ಲದೆ ಚಾಲನೆ 5,000

ವಿಮೆ ಇಲ್ಲದಿದ್ದರೆ  2,000

ವೇಗದ ಚಾಲನ 2,000

ಸೀಲ್‌ ಬೆಲ್ಟ್‌ ಇಲ್ಲದಿದ್ದರೆ  1,000

ಹೆಲ್ಮೆಟ್‌ ರಹಿತ ಚಾಲನೆ    1,000

ಮದ್ಯಸೇವಿಸಿ ಚಾಲನೆ    10,000

Latest Videos
Follow Us:
Download App:
  • android
  • ios