ಲಂಡನ್(ಮಾ.26): ಭಾರತದಲ್ಲಿ ಆಟೋ ರಿಕ್ಷಾಗಳು ಸಾಮಾನ್ಯ. ಎಲ್ಲೋ ಹೋದರು ಸುಲಭವಾಗಿ ಆಟೋ ಪ್ರಯಾಣ ಮಾಡಬಹುದು. ಇದೀಗ ಇಂಗ್ಲೆಂಡ್ ನಗರದ ರಸ್ತೆಗಳಲ್ಲಿ ಆಟೋ ರಾರಾಜಿಸುತ್ತಿದೆ. ವಿಶೇಷ ಅಂದರೆ ಭಾರತದ ಬಜಾಜ್ ಆಟೋ ಲಂಡನ್ ರಸ್ತೆಗಿಳಿದಿದೆ.  ಲಿವರ್‌ಪೂಲ್ ಸಿಟಿಯಲ್ಲಿ ಬಜಾಜ್ ಅಟೋ ರಿಕ್ಷಾ ಸೇವೆ ಲಭ್ಯವಿದೆ.

ಇದನ್ನೂ ಓದಿ: ಬಜಾಜ್, ಮಹೀಂದ್ರಗೆ ಪೈಪೋಟಿ - ಬರುತ್ತಿದೆ ಪಿಯಾಗ್ಯೊ ಎಲೆಕ್ಟ್ರಿಕ್ ಆಟೋ ರಿಕ್ಷಾ!

ಬೆಂಗಳೂರು ಮೂಲದ ಓಲಾ ಟ್ಯಾಕ್ಸಿ ಸೇವೆ ಲಿವರ್‌ಪೂಲ್ ಸಿಟಿಯಲ್ಲಿ ಸೇವೆ ಆರಂಭಿಸಿದೆ. ಭಾರತದಲ್ಲಿರುವಂತೆ ಒಲಾ ಆಟೋ ಸೇವೆ ಇದೀಗ ಲಿವರ್‌ಪೂಲ್ ಸಿಟಿಯಲ್ಲಿ ಆರಂಭಗೊಂಡಿದೆ. ಒಲಾ ಆಟೋಗಾಗಿ ಲಿವರ್‌ಪೂಲ್ ಬಜಾಜ್ ಆಟೋ ರಸ್ತೆಗಿಳಿಸಿದೆ. ಈ ಮೂಲಕ ಲಿವರ್‌ಪೂಲ್ ಸಿಟಿಯಲ್ಲಿ ಭಾರತದ ಟ್ಯಾಕ್ಸಿ ಹಾಗೂ ಭಾರತದ ಆಟೋ ರಾರಾಜಿಸುತ್ತಿದೆ.

 

 

ಬಜಾಜ್ ಆಟೋ 145.45 cc ಕ್ಯೂಬಿಕ್  ಕೆಪಾಸಿಟಿ ಎಂಜಿನ್ಲ ಹೊಂದಿದ್ದು, 6.6Kw ಪವರ್(@5000rpm) ಹಾಗೂ 15.5 N.m ಪೀಕ್ ಟಾರ್ಕ್( @3300rpm) ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. 4 ಸ್ಟ್ರೋಕ್ ಎಂಜಿನ್ ಹೊಂದಿದೆ. 

ಇದನ್ನೂ ಓದಿ: ಸಣ್ಣ ಕಾರಿಗೆ ಪ್ರತಿಸ್ಪರ್ಧಿ- ಬಜಾಜ್ ಕ್ಯೂಟ್ ಕಾರಿನ ಬೆಲೆ ಬಹಿರಂಗ!

ಲಿವರ್‌ಪೂಲ್ ಸಿಟಿ ನಾಗರೀಕರು ಒಲಾ ಆಟೋ ಸೇವೆಯನ್ನು ಸ್ವಾಗತಿಸಿದ್ದಾರೆ. ಇಷ್ಟೇ ಅಲ್ಲ ಬಜಾಜ್ ಆಟೋ ಪ್ರಯಾಣಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸುಲಭ ಪ್ರಯಾಣ ಹಾಗೂ ಕಡಿಮೆ ದರ ಲಿವರ್‌ಪೂಲ್ ನಾಗರೀಕರ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಸುಲಭವಾಗಿಸಿದೆ. ಮೊದಲ ದಿನ ಸಂಪೂರ್ಣ ಉಚಿತ ಪ್ರಯಾಣ ನೀಡಲಾಗಿತ್ತು. ಇದೀಗ ಶೇಕಡಾ  50 ರಷ್ಟು ರಿಯಾಯಿತಿ ನೀಡಲಾಗಿದೆ. ಇಂಗ್ಲೆಂಡ್‌ನ ಕಾರ್ಡಿಫ್, ಬ್ರಿಸ್ಟೋಲ್ ಸೇರಿದಂತೆ ಪ್ರಮುಖ ನಾಲ್ಕು ನಗರಗಳಲ್ಲಿ 2018ರಲ್ಲೇ ಓಲಾ ಆಟೋ ಸೇವೆ ಆರಂಭಿಸಿದೆ.