ಬಜಾಜ್ ಕಂಪನಿಯ ಕ್ಯೂಟ್ ಕಾರಿನ ಬೆಲೆ ಬಹಿರಂಗವಾಗಿದೆ. ನೂತನ ಕಾರು 2 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಎರಡು ಕಾರುಗಳ ಬೆಲೆ ಬಹಿರಂಗವಾಗಿದೆ. ಇಲ್ಲಿದೆ ಹೆಚ್ಚಿನ ವಿವರ.
ಮುಂಬೈ(ಮಾ.24): ಬಜಾಜ್ ಕಂಪನಿಯ ನೂತನ ಕ್ಯೂಟ್ ಕ್ವಾರ್ಡ್ರಿಸೈಕಲ್ ಬೆಲೆ ಬಹಿರಂಗಗೊಂಡಿದೆ. ಸಣ್ಣ ಕಾರಿನ ರೂಪದಲ್ಲಿರುವ ಬಜಾಜ್ ಕ್ಯೂಟ್ ಇದೀಗ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. 2018ರ ನವೆಂಬರ್‌ನಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆದಿರುವ ಬಜಾಜ್ ಕ್ಯೂಟ್ ಕಾರು ಬಿಡುಗಡೆಗೆ ಸಜ್ಜಾಗಿದೆ.
ಇದನ್ನೂ ಓದಿ: ಟಾಟಾ ನ್ಯಾನೋ ಬದಲು ಬರುತ್ತಿದೆ ಹೊಸ ಸಬ್-ಟಿಯಾಗೋ ಕಾರು!
ನೂತನ ಬಜಾಜ್ ಕ್ಯೂಟ್ ಬೆಲೆ 2.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದರಲ್ಲಿ CNG ವೇರಿಯೆಂಟ್ ಕೂಡ ಲಭ್ಯವಿದೆ. ಇದರ ಬೆಲೆ 2.83 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇದು ಇಂಧನ ವೇರಿಯೆಂಟ್ ಕ್ಯೂಟ್ ಕಾರಿಗಿಂತ 20,000 ರೂಪಾಯಿ ಹೆಚ್ಚಾಗಲಿದೆ.
ಇದನ್ನೂ ಓದಿ: ಟೆಸ್ಲಾ ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ- ಭಾರತಕ್ಕೆ ಕಾಲಿಡುತ್ತಿದೆ ಅಮೇರಿಕ ಕಾರು!
ಭಾರತದ 20 ರಾಜ್ಯಗಳಲ್ಲಿ ಬಜಾಜ್ ಕ್ಯೂಟ್ ಕಮರ್ಶಿಯಲ್ ಬಳಕೆ ಮಾಡಲು ಅನುಮತಿ ಸಿಕ್ಕಿದೆ. ಇನ್ನ 15 ರಾಜ್ಯಗಳಲ್ಲಿ ಖಾಸಗಿ ಬಳಕೆಗೆ ಬಜಾಜ್ ಕ್ಯೂಟ್ ಬಳಕೆ ಮಾಡಲು ಅನುಮತಿ ಸಿಕ್ಕಿದೆ. ಈ ಕಾರಿನ ತೂಕ 425 kg. 216cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ DTSi ಎಂಜಿನ್ ಹೊಂದಿದೆ. s 13.2 hp ಪವರ್(@ 5,500 rpm)ಹಾಗೂ 18.9 Nm ಟಾರ್ಕ್(@4,000 rpm) ಉತ್ಪಾದಿಸಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 24, 2019, 8:46 PM IST