ಬರುತ್ತಿದೆ ಓಲಾ ಸೆಲ್ಫ್ ಡ್ರೈವ್ ಕಾರು- ಗ್ರಾಹಕರಿಗೆ ಸಿಗಲಿದೆ BMW,ಆಡಿ, ಬೆಂಝ್!
ಓಲಾ ಕ್ಯಾಬ್ ಇದೀಗ ಮಹತ್ವದ ಹೆಜ್ಜೆ ಇಡುತ್ತಿದೆ. ಝೂಮ್ ಕಾರಿಗೆ ಪೈಪೋಟಿಯಾಗಿ ಸೆಲ್ಫ್ ಡ್ರೈವ್ ಸೇವೆ ಆರಂಭಿಸುತ್ತಿದೆ. ಇದೇ ಮೊದಲ ಬಾರಿಗೆ ಓಲಾ ಐಷಾರಾಮಿ ಹಾಗೂ ದುಬಾರಿ ಕಾರುಗಳನ್ನು ಸೆಲ್ಫ್ ಡ್ರೈವ್ ಸೇವೆಗೆ ಬಳಸಿಕೊಳ್ಳುತ್ತಿದೆ.
ಬೆಂಗಳೂರು(ಏ.23): ನಗರ ಪ್ರದೇಶಗಳಲ್ಲಿ ಸೆಲ್ಫ್ ಡ್ರೈವ್ ಕಾರು ಸೇವೆಗೆ ಭಾರಿ ಬೇಡಿಕೆ ಇದೆ. ಝೂಮ್ ಕಾರು ಈಗಾಗಲೇ ಈ ಕ್ಷೇತ್ರದಲ್ಲಿ ಭಾರಿ ಯಶಸ್ಸು ಕಂಡಿದೆ. ಇದೀಗ ಝೂಮ್ ಕಾರಿಗೆ ಪೈಪೋಟಿ ನೀಡಲು ಓಲಾ ಕ್ಯಾಬ್ ಸಜ್ಜಾಗಿದೆ. ಈಗಾಗಲೇ ಓಲಾ ಸಂಸ್ಥೆ ಸೆಲ್ಫ್ ಡ್ರೈವ್ ಕಾರು ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಇದೀಗ ಓಲಾ ಸೆಲ್ಫ್ ಡ್ರೈವ್ ಕಾರು ಸೇವೆಗೆ ಐಷಾರಾಮಿ ಕಾರುಗಳಾದ BMW,ಆಡಿ ಹಾಗೂ ಮರ್ಸಡೀಸ್ ಬೆಂಝ್ ಕಾರುಗಳನ್ನು ಬಳಸಿಕೊಳ್ಳಲು ಓಲಾ ಮುಂದಾಗಿದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದ ನಿಸ್ಸಾನ್!
ಝೂಮ್ ಕಾರ್, ಡ್ರೈವ್‌ಝಿ ಎರಡು ಸಂಸ್ಥೆಗಳು ಸೆಲ್ಫ್ ಡ್ರೈವ್ ಸೇವೆ ನೀಡುತ್ತಿದೆ. ಆದರೆ ಈ ಎರಡೂ ಸಂಸ್ಥೆಗಳು ಇದುವರೆಗೂ ಐಷಾರಾಮಿ ಕಾರುಗಳನ್ನು ಸೆಲ್ಫ್ ಡ್ರೈವ್ ಕಾರಿಗೆ ಬಳಸಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಓಲಾ ಐಷಾರಾಮಿ ಕಾರುಗಳನ್ನು ಬಳಸಿಕೊಳ್ಳುತ್ತಿದೆ. ಈ ಮೂಲಕ ಗ್ರಾಹಕರಿಗೆ ಎಲ್ಲಾ ರೀತಿಯ ಸೇವೆ ನೀಡಲು ಸಜ್ಜಾಗಿದೆ.
ಓಲಾ ಸೆಲ್ಫ್ ಡ್ರೈವ್ ಕಾರು ಸೇವೆಗೆ ಬರೋಬ್ಬರಿ 3000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಈಗಾಗಲೇ ಹ್ಯುಂಡೈ ಹಾಗೂ ಕಿಯಾ ಮೋಟಾರ್ಸ್ ಓಲಾ ಜೊತೆ ಕೈಜೋಡಿಸಿದೆ. ಹ್ಯುಂಡೈ ಹಾಗೂ ಕಿಯಾ ಮೋಟಾರ್ಸ್ 2000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಕ್ಯಾಬ್, ಟ್ಯಾಕ್ಸಿ ರೂಪದಲ್ಲಿದ್ದ ಓಲಾ ಇದೀಗ ಮತ್ತೊಂದು ಮಹತ್ತರ ಹೆಜ್ಜೆ ಇಡುತ್ತಿದೆ.
ಇದನ್ನೂ ಓದಿ: ಬರುತ್ತಿದೆ ಕಡಿಮೆ ಬೆಲೆಯ ರೆನಾಲ್ಟ್ ಕ್ವಿಡ್ SUV ಕಾರು!
ಆರಂಭಿಕ ಹಂತದಲ್ಲಿ 10,000 ಕಾರುಗಳನ್ನು ಪರಿಚಯಿಸಲು ಒಲಾ ಮುಂದಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಓಲಾ ಸೆಲ್ಫಿ ಡ್ರೈವ್ ಕಾರುಗಳನ್ನು ಪರಿಚಯಿಸಲಾಗುತ್ತಿದೆ. ಬಳಿಕ ಭಾರತದ ಎಲ್ಲಾ ನಗರಗಳಿಗೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ಸೆಲ್ಫಿ ಡ್ರೈವ್ ಕಾರುಗಳಲ್ಲಿ ಝೂಮ್ ಕಾರು ಹೆಚ್ಚು ಜನಪ್ರಿಯವಾಗಿದೆ. ಇದೀಗ ಓಲಾ ಕೂಡ ಇದೇ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದು ಪೈಪೋಟಿ ಹೆಚ್ಚಾಗಲಿದೆ.