ಬೆಂಗಳೂರು(ಅ.22): `ಮೇಕ್ ಇನ್ ಇಂಡಿಯಾ’ ಮತ್ತು `ಮೇಕ್ ಫಾರ್ ದಿ ವರ್ಲ್ಡ್’ ತತ್ವದ ಆಧಾರದಲ್ಲಿ ನಿಸಾನ್ ಇಂಡಿಯಾ ತಯಾರಿಸಿರುವ ಬಹುನಿರೀಕ್ಷಿತ BSVI ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೆಟ್ SUV ಅನಾವರಣ ಮಾಡಿದೆ. ನಿಸಾನ್ ನೆಕ್ಸ್ಟ್ ಅಡಿ ಇದು ಕಂಪನಿಯ ಮೊದಲ ಉತ್ಪನ್ನವಾಗಿದೆ. ಈ ಹೊಸ ಕಾರನ್ನು ಭಾರತೀಯ ಮಾರುಕಟ್ಟೆಗೆ 2020-21 ನೇ ಹಣಕಾಸು ಸಾಲಿನ ದ್ವಿತೀಯಾರ್ಧದಲ್ಲಿ ಬಿಡುಗಡೆ ಮಾಡಲಾಗುತ್ತದೆ.  ನಿಸಾನ್-ನೆಸ್’ ಪರಿಕಲ್ಪನೆಯ ನಿಜವಾದ ಪ್ರತಿಬಿಂಬ ಇದಾಗಿದೆ. ಇದು ಅದ್ಭುತ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಮೂಲಕ ಜನರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದ್ದು, ಎಲ್ಲಾ ಹೊಸ ನಿಸಾನ್ ಮ್ಯಾಗ್ನೆಟ್ ಅನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಜಾಗತಿಕ ಪ್ರೇಕ್ಷಕರಿಗಾಗಿ ಅನಾವರಣಗೊಳಿಸಲಾಯಿತು. 

ಫೋರ್ಡ್ ಫ್ರೀಸ್ಟೈಲ್ ಫ್ಲೇರ್ t0 ನಿಸಾನ್ ಎ ಪ್ರೊಟೊ: ಭಾರತದಲ್ಲಿ ಹೊಸ 'ಕಾರು ಬಾರು'!.

ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೆಟ್ ನಮ್ಮ ನಿಸಾನ್ ನೆಕ್ಸ್ಟ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕ-ಕೇಂದ್ರಿತ ಸಂಸ್ಥೆಯಾಗಿರುವ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಅನುಭವಗಳನ್ನು ಸಮೃದ್ಧಗೊಳಿಸಲು ಅತ್ಯಾಕರ್ಷಕ ಉತ್ಪನ್ನಗಳನ್ನು ತಲುಪಿಸುವ ನಿಟ್ಟಿನಲ್ಲಿ ನಾವು ಮಾಡುವ ಎಲ್ಲದರ ಹೃದಯದಲ್ಲಿ ಗ್ರಾಹಕರನ್ನು ಇಟ್ಟುಕೊಳ್ಳುವ ನಮ್ಮ ಬ್ರ್ಯಾಂಡ್ ನ ತತ್ತ್ವಶಾಸ್ತ್ರವನ್ನು ಈ ಹೊಚ್ಚ ಹೊಸ ಕಾರು ಪುನರುಚ್ಚರಿಸುತ್ತದೆ. ವಾಹನಗಳ ಬಗ್ಗೆ ಮಹತ್ವಾಕಾಂಕ್ಷೆಯ ಮತ್ತು ವಿವೇಚನೆಯನ್ನು ಹೊಂದಿರುವ ಭಾರತೀಯ ಗ್ರಾಹಕರಲ್ಲಿ ನಾವು ಆದ್ಯತೆ ಮತ್ತು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತಿದ್ದೇವೆ. ಈ ಮೂಲಕ ನಿಸಾನ್ ಮ್ಯಾಗ್ನೆಟ್ ಸುಸ್ಥಿರ ಬೆಳವಣಿಗೆಯನ್ನು ಶಕ್ತಗೊಳಿಸುವ ಮೊದಲ ಉತ್ಪನ್ನವಾಗಿದೆ. ಅಲ್ಲದೇ ನಿಸಾನ್ ಭಾರತದಲ್ಲಿ ಪ್ರೈಮರಿ ಬ್ರ್ಯಾಂಡ್ ಆಗಿ ಮುಂದುವರಿಯಲಿದೆ ಎಂದು ನಿಸಾನ್ ಮೋಟರ್ ಇಂಡಿಯಾದ ಅಧ್ಯಕ್ಷ ಸಿನಾನ್ ಒಝ್ಕೋಕ್ ಹೇಳಿದರು.

ಹೆಚ್ಚಾದ ಪೈಪೋಟಿ; ನಿಸಾನ್ ಕಿಕ್ಸ್ XE ಕಾರು ಬಿಡುಗಡೆ!.

ಎಲ್ಲಾ ಹೊಸ ನಿಸಾನ್ ಮ್ಯಾಗ್ನೆಟ್ ನಿಸಾನ್ ಜಾಗತಿಕ ಎಸ್ ಯುವಿ ಡಿಎನ್ಎಗೆ ಪಟ್ಟು ಹಿಡಿದ ನಾವೀನ್ಯತೆ, ಸುಧಾರಿತ ತಂತ್ರಜ್ಞಾನ ಮತ್ತು ಜಪಾನಿನ ಇಂಜಿನಿಯರಿಂಗ್ ಗೆ ಸಾಕ್ಷಿಯಾಗಿದೆ. ನಿಸಾನ್ ಇಂಟಲಿಜೆಂಟ್ ಮೊಬಿಲಿಟಿ (ಎನ್ಐಎಂ)ಯ ಭಾಗವಾದ ಇತ್ತೀಚಿನ ತಂತ್ರಜ್ಞಾನವನ್ನು ಒಳಗೊಂಡಿದೆ. ವಾಹನಗಳು ಹೇಗೆ ಚಲಿಸುತ್ತವೆ, ಚಾಲನೆಗೊಳ್ಳುತ್ತವೆ ಮತ್ತು ಸಮಾಜಕ್ಕೆ ಹೇಗೆ ಸಂಯೋಜನೆಗೊಳ್ಳುತ್ತವೆ ಎಂಬ ಕಂಪನಿಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಪಾನಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರ ಜತೆಗೆ ಭಾರತೀಯ ಗ್ರಾಹಕರ ಅಗತ್ಯತೆಗಳು ಮತ್ತು ಅವರ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಸಾನ್ ಮ್ಯಾಗ್ನೆಟ್ ನಲ್ಲಿ ಹಲವಾರು ಅತ್ಯುತ್ಕೃಷ್ಠ ದರ್ಜೆಯ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ಇದು ಗ್ರಾಹಕರಿಗೆ ವಿಭಿನ್ನವಾದ, ನವೀನ ಮತ್ತು ಅತ್ಯುತ್ತಮವಾದ ಮಾಲೀಕತ್ವದ ಅನುಭವವನ್ನು ನೀಡುತ್ತದೆ.

ಭಾರತದಲ್ಲಿ ಬಿ-ಎಸ್ ಯುವಿಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ಈ ವಿಭಾಗವನ್ನು ಪುನರ್ ವ್ಯಾಖ್ಯಾನಿಸುವ ದಿಸೆಯಲ್ಲಿ ಮತ್ತು ದೇಶದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ಮೀರಿಸುವ ರೀತಿಯಲ್ಲಿ ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೆಟ್ ಅನ್ನು ನಾವು ಸಿದ್ಧಪಡಿಸಿದ್ದೇವೆ. ಬಲವಾದ ಎಸ್ ಯುವಿ ಪರಂಪರೆಯನ್ನು ಹೊಂದಿರುವ ಜಾಗತಿಕ ಬ್ರ್ಯಾಂಡ್ ಆಗಿರುವ ನಿಸಾನ್ ನಿಂದ ಗ್ರಾಹಕರು ತಮ್ಮ ಆಯ್ಕೆಗಳನ್ನು ಮಾಡಿಕೊಂಡು ವಿಶ್ವದರ್ಜೆಯ ಎಸ್ ಯುವಿ ಹೊಂದಲು ಭಾರತದ ಹ್ಯಾಚ್ ಬ್ಯಾಕ್ ಗ್ರಾಹಕರಿಗೆ ಇದು ಮಹಾತ್ವಾಕಾಂಕ್ಷೆಯ ವಾಹನವಾಗಲಿದೆ ಎಂದು ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಹೇಳಿದರು.

ಈ ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೆಟ್ ನಿಜವಾಗಿಯೂ ದೊಡ್ಡದಾದ ಮತ್ತು ಸುಂದರವಾದ ಚೆರಿಸ್ಮ್ಯಾಟಿಕ್ ಬಿ-ಎಸ್ ಯುವಿ ಆಗಿ ಗ್ರಾಹಕರಿಗೆ ಸಂಪೂರ್ಣವಾದ ಪ್ಯಾಕೇಜ್ ಅನ್ನು ನೀಡಲಿದೆ. ಇದು ಕುಟುಂಬ ಮತ್ತು ಸ್ನೇಹಿತರಿಗೆ ಅತ್ಯುತ್ತಮವಾದ ಅನುಭವವನ್ನು ನೀಡುತ್ತದೆ. ಡೈನಾಮಿಕ್ ವಿನ್ಯಾಸ ಮತ್ತು ಅಧಿಕ ಗ್ರೌಂಡ್ ಕ್ಲಿಯರೆನ್ಸ್, ಥ್ರಿಲ್ ಅನ್ನು ಇಷ್ಟಪಡುವವರಿಗೆ ಎಚ್ಆರ್ ಎ0 1.0 ಲೀಟರ್ ಟರ್ಬೋ ಇಂಜಿನ್ ಅನ್ನು ನೀಡಲಾಗಿದೆ. ಅತ್ಯಾಧುನಿಕ ಜಪಾನಿನ ತಂತ್ರಜ್ಞಾನವು ಇಂದಿನ ಗ್ರಾಹಕರಿಗೆ ಮತ್ತು ತಂತ್ರಜ್ಞಾನ ಉತ್ಸಾಹಿಗಳಿಗೆ ಮುದ ನೀಡುತ್ತದೆ. ಇದರ ಸಾಮರ್ಥ್ಯತೆಯು ಭಾರತೀಯ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಲಿದೆ ಎಂಬ ವಿಶ್ವಾಸ ನಮಗಿದೆ’’ ಎಂದು ತಿಳಿಸಿದರು.