ಬೆಂಗಳೂರು(ಜು.07): ನಿಸಾನ್ ಇಂಡಿಯಾ ತನ್ನ ಇಂಟಲಿಜೆಂಟ್ ಎಸ್‍ಯುವಿ ಶ್ರೇಣಿಯ ಕಿಕ್ಸ್ XE ಡೀಸೆಲ್ ಶ್ರೇಣಿಯ ವಾಹನವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಪ್‌ಗೇಡೆಡ್ ಫೀಚರ್ಸ್ ಹಾಗೂ ಹಲವು ವಿಶೇಷತೆಗಳನ್ನೊಳಗೊಂಡಿರುವ ನೂತನ ಕಾರಿನ ಬೆಲೆ ದೇಶಾದ್ಯಂತ ಇದರ  9.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಇದನ್ನೂ ಓದಿ: ಭಾರತೀಯ ಸೇನೆಯ ಸಾರಥಿಗೆ ಕಣ್ಣೀರಿನ ವಿದಾಯ!

ಪ್ರೀಮಿಯಂ, ಸಾಕಷ್ಟು ಸ್ಥಳಾವಕಾಶ ಹೊಂದಿದ ಇಂಟೀರಿಯರ್ಸ್ ಮತ್ತು ಸ್ಟೈಲಿಶ್ ಹೊರಾಂಗಣವನ್ನು ಬಯಸುವ ಗ್ರಾಹಕರಿಗೆ ಈ ಕಿಕ್ಸ್ ಹೇಳಿ ಮಾಡಿಸಿದಂತಹ ವಾಹನವಾಗಿದೆ. ಹಿಂಭಾಗದ ಎಸಿ ವೆಂಟ್ ಆಟೋ ಎಸಿ, ಡ್ಯುಯೆಲ್ ಏರ್‌ಬ್ಯಾಗ್, ABS, EBD ಬ್ರೇಕ್ ಅಸಿಸ್ಟ್, ನಿಸಾನ್ ಕನೆಕ್ಟ್, ಯುಎಸ್‍ಬಿ & ಬ್ಲೂಟೂತ್ ಕನೆಕ್ಟಿವಿಟಿ, ಕೂಲ್ಡ್ ಗ್ಲೋವ್ ಬಾಕ್ಸ್, ಶಾರ್ಕ್ ಫಿನ್ ಆಂಟೆನಾ, ಚೈಲ್ಡ್ ಲಾಕ್ ಜತೆಗೆ ಸೆಂಟ್ರಲ್ ಡೋರ್ ಲಾಕ್, ಸ್ಪೀಡ್, ಸೆನ್ಸಿಂಗ್ ಆಟೋ ಡೋರ್ ಲಾಕ್ & ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್‍ಲಾಕ್, ರಿಯರ್ ಪಾರ್ಕಿಂಗ್ ಸೆನ್ಸಾರ್‍ಗಳು, 2ಡಿಐಎನ್ ಎಸ್‍ಟಿಡಿ ಆಡಿಯೋ ಸೇರಿದಂತೆ 50 ಕ್ಕೂ ಹೆಚ್ಚು ವೈಶಿಷ್ಟ್ಯತೆಗಳನ್ನು ಈ ಕಿಕ್ಸ್ ಹೊಂದಿದೆ. ಈ ಎಲ್ಲಾ ವೈಶಿಷ್ಟ್ಯತೆಗಳು ಕಿಕ್ಸ್ ಎಕ್ಸ್‍ಇ ಡೀಸೆಲ್ ಮತ್ತು ಇತರೆ ಶ್ರೇಣಿಗಳಲ್ಲಿಯೂ (ಕಿಕ್ಸ್ XL ಡೀಸೆಲ್, ಕಿಕ್ಸ್ XV ಡೀಸೆಲ್, ಕಿಕ್ಸ್ XV ಪ್ರೀಮಿಯಂ ಡೀಸೆಲ್) ಲಭ್ಯವಿವೆ.

ಇದನ್ನೂ ಓದಿ: ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಪರಿಪೂರ್ಣವಾದ ನೆಮ್ಮದಿ:
ಇದಲ್ಲದೇ, ನಿಸಾನ್ ಕಿಕ್ಸ್ ಗ್ರಾಹಕರಿಗೆ ಸಂಪೂರ್ಣವಾದ ನೆಮ್ಮದಿಯನ್ನು ನೀಡಲಿದೆ. ಅಂದರೆ, 5 ವರ್ಷಗಳ ಉಚಿತ ವಾರಂಟಿ ಮತ್ತು ದಿನದ 24 ಗಂಟೆಯೂ ರೋಡ್‍ಸೈಡ್ ಅಸಿಸ್ಟೆನ್ಸ್ ನೀಡಲಿದೆ. ನಿಸಾನ್ ಕಿಕ್ಸ್ `ವೆಚ್ಚ ನಿರ್ವಹಣೆ ಪ್ಯಾಕೇಜ್’ ನ ಎರಡು ಆಯ್ಕೆಗಳನ್ನು ನೀಡಲಿದೆ. ಇದು ಸಿಲ್ವರ್ & ಬ್ರೌನ್ಝ್‍‌ಗೆ ಲಭ್ಯವಿದ್ದು, ತಡೆರಹಿತವಾದ ಮಾಲೀಕತ್ವದ ಅನುಭವವನ್ನು ನೀಡಲಿದೆ. ಬ್ರೌನ್ಝ್ ಪ್ಯಾಕೇಜ್ ನಿಗದಿತ ನಿರ್ವಹಣೆ ಮತ್ತು ಸಿಲ್ವರ್ ಪ್ಯಾಕೇಜ್ ವಿಯರ್ ಅಂಡ್ ಟಿಯರ್ (ಬ್ಯಾಟರಿ ಮತ್ತು ಟೈಯರ್‌ಗಳನ್ನು ಹೊರತುಪಡಿಸಿ)  ಒಳಗೊಂಡಿದೆ. ಈ ಆಯ್ಕೆಗಳಿಂದ  ನಿಯಮಿತವಾದ ನಿರ್ವಹಣೆಗೆ ಮಾಡುವ ವೆಚ್ಚದಲ್ಲಿ ಶೇ.30 ರವರೆಗೆ ಉಳಿತಾಯ ಮಾಡಬಹುದಾಗಿದೆ.

ಇದನ್ನೂ ಓದಿ: 2 ದಶಕಗಳಲ್ಲೇ ಇದು ಗರಿಷ್ಠ; ಜುಲೈನಲ್ಲಿ ಪಾತಾಳಕ್ಕೆ ಕುಸಿದ ವಾಹನ ಮಾರಾಟ!

ನಿಸಾನ್ ಇಂಟಲಿಜೆಂಟ್ ಮೊಬಿಲಿಟಿ & SUV DNA ಇನ್ನು ಹೊಸ ನಿಸಾನ್ ಕಿಕ್ಸ್ ನಿಸಾನ್‍ನ ಜಾಗತಿಕ ಎಸ್‍ಯುವಿ ಪರಂಪರೆಯನ್ನು ನಿರ್ಮಾಣ ಮಾಡಲಿದೆ. ಸುರಕ್ಷತೆ, ಸ್ಟೈಲ್, ಸಾಕಷ್ಟು ಸ್ಥಳಾವಕಾಶ ಮತ್ತು ಇಂಟಲಿಜೆನ್ಸ್ ಮಟ್ಟವನ್ನು ಹೆಚ್ಚಿಸುವ ಮೂಲಕ ಈ ಕಿಕ್ಸ್ ಜಾಗತಿಕ ಪರಂಪರೆಯನ್ನು ಭಾರತೀಯ ಗ್ರಾಹಕರಿಗೆ ನೀಡಲಿದೆ. ಇಂಟಲಿಜೆಂಟ್ ಟೆಕ್ನಾಲಜಿ, ಕ್ಲಾಸ್-ಲೀಡಿಂಗ್ ಪ್ರೀಮಿಯಂನೆಸ್, ಮಾಲೀಕತ್ವದ ಇಂಟಲಿಜೆಂಟ್ ಆಯ್ಕೆ ಮತ್ತು ವೈಯಕ್ತಿಕ ಆಯ್ಕೆ ಮೂಲಕ ಅತ್ಯದ್ಭುತವಾದ ಅನುಭವಗಳನ್ನು ನೀಡಲಿದೆ.

ನಿಸಾನ್‍ನ ಇಂಟಲಿಜೆಂಟ್ ಮೊಬಿಲಿಟಿ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿರುವ ನಿಸಾನ್ ಕನೆಕ್ಟ್ ಕಾರು ಆಧುನಿಕ ತಂತ್ರಜ್ಞಾನದ ಹೊಂದಿದೆ. ಇದು ಕಿಕ್ಸ್‍ನ ಪೆಟ್ರೋಲ್ ಮತ್ತು ಡೀಸೆಲ್ ಶ್ರೇಣಿಗಳೆರಡರಲ್ಲೂ ಲಭ್ಯವಿದೆ.

ಇದನ್ನೂ ಓದಿ: ಕಡಿಮೆ ಬೆಲೆ, ಗರಿಷ್ಠ ಮೈಲೇಜ್; ಬರುತ್ತಿದೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!

ಜಿಯೋ ಫೆನ್ಸಿಂಗ್, ಸ್ಪೀಡ್ ಅಲರ್ಟ್,  ಲೊಕೇಟ್ ಮೈ ಕಾರ್ ಮತ್ತು ಶೇರ್ ಮೈ ಕಾರ್ ಲೊಕೇಶನ್ ಸೇರಿದಂತೆ ಕಾರಿನ ಸುರಕ್ಷತೆ ಮತ್ತು ಭದ್ರತೆಗೆ ಅಗತ್ಯವಾದ ವೈಶಿಷ್ಟ್ಯತೆಗಳು ಸೇರಿದಂತೆ ನಿಸಾನ್ ಕನೆಕ್ಟ್ 50 ಕ್ಕೂ ಹೆಚ್ಚು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಕೀ ರಹಿತವಾದ ಕಾರು ಪ್ರವೇಶ, ಇಂಟಲಿಜೆಂಟ್ ಕೀ ಮೂಲಕ ಪುಶ್-ಸ್ಟಾಪ್-ಸ್ಟಾರ್ಟ್ ಮತ್ತು `ಲೀಡ್ ಮಿ ಟು ಕಾರ್’ ಸೌಲಭ್ಯವನ್ನು ಹೊಂದಿದೆ. ಇದು ಕಾರಿನ ಪ್ರಯಾಣಿಕರಿಗೆ ಸೂಕ್ತ ಮಾರ್ಗದರ್ಶನ ಮಾಡಲಿದೆ ಮತ್ತು ವಾಹನ ಚಾಲಕನಿಗೆ ಅನುಕೂಲಕರವಾದ ಅನುಭವವನ್ನು ನೀಡಲಿದೆ.

ಹೆಚ್ಚಿಸಿದ ಕಾರ್ಯಕ್ಷಮತೆ ಮತ್ತು ಡ್ರೈವಿಂಗ್ ಡೈನಾಮಿಕ್‍ಗಳೊಂದಿಗೆ ಸ್ಟೈಲಿಶ್ ವಿನ್ಯಾಸವನ್ನು ಒಳಗೊಂಡಿದೆ. ಈ ಹೊಸ ಕಿಕ್ಸ್ 1.5 H4K ಪೆಟ್ರೋಲ್ ಆಯ್ಕೆಯನ್ನು ನೀಡಲಿದ್ದು, 106PS ಅತ್ಯಧಿಕ ಪವರ್ ಜನರೇಟ್ ಮಾಡಲಿದೆ. ಅದೇರೀತಿ 1.5 K9K DCI ಡೀಸೆಲ್ ಇಂಜಿನ್ 116PS ಅಧಿಕ ಪವರ್ ಜನರೇಟ್ ಮಾಡುವ ಸಾಮಥ್ರ್ಯ ಹೊಂದಿದೆ. ARAI ಪ್ರಮಾಣೀಕೃತಕ್ಕೆ ಅನುಗುಣವಾಗಿ ಈ ವಾಹನಗಳ ಇಂಧನ ಕ್ಷಮತೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್‌ಗೆ 14.23 ಕಿಲೋಮೀಟರ್ ನೀಡಿದರೆ, ಡೀಸೆಲ್‍ನ ವಾಹನ ಪ್ರತಿ ಲೀಟರ್‌ಗೆ 20.45 ಕಿಲೋಮೀಟರ್ ಓಡಲಿದೆ.