ನಗರಗಳಲ್ಲಿ ವಾಹನ ಖರೀದಿ ಇನ್ನು ಕಷ್ಟ-ಜಾರಿಯಾಗಲಿದೆ ಹೊಸ ನಿಯಮ!

ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಭಾರತ ಪ್ರಮುಖ ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು NGT ಮುಂದಾಗಿದೆ. NGT ನೂತನ ನಿಯಮ ಜಾರಿಯಾದರೆ ನಗರದಲ್ಲಿ ವಾಹನ ಖರೀದಿ ಕಷ್ಟವಾಗಲಿದೆ.
 

NGT directs government to study vehicle count in relation to road capacity

ನವದೆಹಲಿ(ಅ.30): ನಗರಗಳಲ್ಲಿ ವಾಹನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ರಸ್ತೆಗಳಲ್ಲಿ ಪ್ರಮಾಣಕ್ಕಿಂತ ಹೆಚ್ಚಿನ ವಾಹನಗಳು ಸಂಚರಿಸುತ್ತಿದೆ. ಇಷ್ಟೇ ಅಲ್ಲ ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್‌ನಿಂದ ನಗರ ಪ್ರದೇಶದ ವಾಹನ ಪ್ರಯಾಣ ಹಾಗೂ ಪರಿಸರ ಮಾಲಿನ್ಯಕ್ಕೆ ಜನರು ಹೈರಾಣಾಗುತ್ತಿದ್ದಾರೆ.

ಸಮಸ್ಯೆಗಳಿಗೆ ಮುಕ್ತಿ ಹಾಡಲು ನ್ಯಾಶನಲ್ ಗ್ರೀನ್ ಟ್ರಿಬ್ಯೂನಲ್(NGT)ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ. NGT ಮುಖ್ಯಸ್ಥ ಜಸ್ಟೀಸ್ ಆದರ್ಶ್ ಕುಮಾರ್ ಗೊಯೆಲ್ ನೇೃತ್ವದ ಸಮಿತಿ ದೆಹಲಿಯಲ್ಲಿ ಸಭೆ ಸೇರಿ ವಾಹನ ದಟ್ಟಣೆ ನಿಯಂತ್ರಿಸಲು ಚರ್ಚೆ ನಡೆಸಿದೆ.

ಮಾರ್ಚು 31ರ ಒಳಗೆ NGT ಸಮಿತಿ ಕೇಂದ್ರ ಸಾರಿಗೆ ಇಲಾಖೆಗೆ ವರದಿ ಸಲ್ಲಿಸಲಿದೆ. ಇಷ್ಟೇ ಅಲ್ಲ ಶೀಘ್ರದಲ್ಲೇ ಹೊಸ ನಿಯಮ ಜಾರಿಗೆ ತರಲು NGT ಮುಂದಾಗಿದೆ. ವಾಹನ ಖರೀದಿಸುವವರು ಪಾರ್ಕಿಂಗ್ ಧೃಡೀಕರಣ ಪತ್ರ ಖಡ್ಡಾಯಗೊಳಿಸುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ನಗರ ಪ್ರದೇಶದಲ್ಲಿ ವಾಹನ ಖರೀದಿ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಸಾಧ್ಯತೆ ಇದೆ.

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ  ನಿಯಮಗಳನ್ನ ಜಾರಿಗೆ ತರಲು NGT ತಯಾರಿ ಮಾಡಿಕೊಂಡಿದೆ. ಈ ಮೂಲಕ ನಗರಗಳಲ್ಲಿ ವಾಹನ ಪ್ರಮಾಣ ಏರಿಕೆಯನ್ನ ತಡೆಗಟ್ಟಲು ಮುಂದಾಗಿದೆ. ಹಾಗಂತ ಈಗಾಗಲೇ ವಾಹನ ಖರೀದಿಸಿದವರು ಅದೃಷ್ಟವಂತರು ಎಂದು ಭಾವಿಸಬೇಡಿ.  ಎಮಿಶನ್ ಸೇರಿದಂತೆ ಇತರ ರಿನಿವಲ್ ಚಾರ್ಜ್‌ಗಳು ದುಪ್ಪಟ್ಟಾಗಲಿದೆ.

Latest Videos
Follow Us:
Download App:
  • android
  • ios