ಮಂದಿನ 5 ವರ್ಷದಲ್ಲಿ 5 ಕೋಟಿ ಉದ್ಯೋಗ ಸೃಷ್ಠಿ: ಅಂಕಿ ಅಂಶ ತೆರೆದಿಟ್ಟ ನಿತಿನ್ ಗಡ್ಕರಿ!
ಕೊರೋನಾ ವೈರಸ್, ಲಾಕ್‌ಡೌನ್ , ಜಿಡಿಪಿ ಕುಸಿತ ಸೇರಿದಂತ ಹಲವು ಕಾರಣಗಳಿಂದ ನಿರೋದ್ಯಗ ಸಮಸ್ಯೆ ತಲೆದೋರಿದೆ. ಇದೀಗ ದೇಶದೆಲ್ಲೆಡೆ ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಇತ್ತ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸಿಹಿ ಸುದ್ದಿ ನೀಡಿದ್ದಾರೆ.
ನವದೆಹಲಿ(ಆ.16): ಕೊರೋನಾ ವೈರಸ್ ಕಾರಣ ವಿಶ್ವವೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ವಿದೇಶದಲ್ಲಿದ್ದ ಹಲವರು ಉದ್ಯೋಗ ಕಳೆದುಕೊಂಡು ತವರಿಗೆ ಮರಳಿದ್ದಾರೆ. ಇತ್ತ ಭಾರತದಲ್ಲೂ ಹಲವರು ನಿರುದ್ಯೋಗಿಗಳಾಗಿದ್ದಾರೆ. ಇತ್ತ ವಿದ್ಯಾಭ್ಯಾಸ, ವೃತ್ತಿಪರ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳಿಗೂ ಉದ್ಯೋಗ ಸಿಗುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಸದ್ಯ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ, ಮುಂದಿನ 5 ವರ್ಷದಲ್ಲಿ 5 ಕೋಟಿ ಉದ್ಯೋಗದ ಭರವಸೆ ನೀಡಿದ್ದಾರೆ.
ಶೀಘ್ರದಲ್ಲೇ ಜಾರಿಯಾಗಲಿದೆ ಸ್ಕ್ರಾಪ್ ನಿಯಮ; ಹಳೇ ವಾಹನಗಳು ಗುಜುರಿಗೆ ಹಾಕಬೇಕು ಕಡ್ಡಾಯ!.
ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ(MSMEs) ಭಾರಿ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಅಡಿಯಲ್ಲಿ ವಿದೇಶಿ ವಸ್ತುಗಳ ಆಮದು ಕಡಿಮೆಯಾಗುತ್ತಿದ್ದು, ಭಾರತದಲ್ಲೇ ಉತ್ಪಾದನೆಗೆ ವೇದಿಕೆ ಸೃಷ್ಟಿಯಾಗುತ್ತಿದೆ. ಹಲವು ಕಂಪನಿಗಳು ಭಾರತದಲ್ಲೇ ಉತ್ಪಾದನೆ ಆರಂಭಿಸಿದೆ. ಇದರಿಂದ ಮಂದಿನ 5 ವರ್ಷದಲ್ಲಿ MSMEs ರಫ್ತು ಶೇಕಡಾ 48 ರಿಂದ ಶೇಕಡಾ 60ಕ್ಕೆ ಏರಿಕೆಯಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ರಫ್ತು ಪ್ರಮಾಣ ಹೆಚ್ಚಾದಂತೆ ಸರಿಸುಮಾರು 5 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿದೆ. ಸದ್ಯ ಭಾರತದ GDPಯ ಶೇಕಡಾ 30ರಷ್ಟು ಆದಾಯ MSMEs ಕ್ಷೇತ್ರದಿಂದ ಬರುತ್ತಿದೆ. ಸದ್ಯ ಶೇಕಡಾ 48 ರಷ್ಟು ಉತ್ಪನ್ನಗಳು ರಫ್ತಾಗುತ್ತಿದ್ದು, ಇದರಿಂದ 11 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಹಾಗೂ ಭರ್ತಿಯಾಗಿದೆ. ಆತ್ಮನಿರ್ಭರ್ ಭಾರತ ಯೋಜನೆಯಿಂದ ಬಹುತೇಕ ಕಂಪನಿಗಳು ವಿದೇಶದಿಂದ ಬಿಡಿಭಾಗ ಅಥವಾ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಬದಲು ಇಲ್ಲೇ ಉತ್ಪಾದನೆ ಮಾಡುತ್ತಿದೆ. ಇದರಿಂದ ಖಚಿತವಾಗಿ ರಫ್ತು ಪ್ರಮಾಣ 60ಕ್ಕೆ ಏರಲಿದೆ ಎಂದು ಗಡ್ಕರಿ ಭರವಸೆ ನೀಡಿದ್ದಾರೆ.