ಶೀಘ್ರದಲ್ಲೇ ಜಾರಿಯಾಗಲಿದೆ ಸ್ಕ್ರಾಪ್ ನಿಯಮ; ಹಳೇ ವಾಹನಗಳು ಗುಜುರಿಗೆ ಹಾಕಬೇಕು ಕಡ್ಡಾಯ!

ಕಳೆದೆರಡು ವರ್ಷದಿಂದ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ವಾಹನ ಸ್ಕ್ರಾಪ್ ಪಾಲಿಸಿ ಜಾರಿಗೆ ತರಲು ಅವಿರತ ಪ್ರಯತ್ನ ಪಡುತ್ತಿದ್ದಾರೆ. ಇನ್ನೇನು ಅಂತಿ ರೂಪು ರೇಶೆ ಸಿಗಬೇಕು ಅನ್ನುವಷ್ಟರಲ್ಲಿ ಕೊರೋನಾ ವೈರಸ್ ವಕ್ಕರಿಸಿತು. ಇದೀಗ ಲಾಕ್‌ಡೌನ್ ಸಡಿಲಿಕೆಯಾಗುತ್ತಿರುವ ಬೆನ್ನಲ್ಲೇ ಸ್ಕ್ರಾಪ್ ಪಾಲಿಸಿ ಜಾರಿಗೆ ತರಲು ಕೇಂದ್ರ ಸಜ್ಜಾಗಿದೆ. ನೂತನ ಸ್ಕಾಪ್ ಪಾಲಿಸಿ ಪ್ರಕಾರ ಯಾವ ವಾಹನಗಳನ್ನು ಗುಜುರಿಗೆ ಹಾಕಬೇಕು ಇಲ್ಲಿದೆ ಮಾಹಿತಿ.

Nitin Gadkari ready to bring in vehicle scrappage policy

ನವದೆಹಲಿ(ಮೇ.10): ಮಾಲಿನ್ಯ ನಿಯಂತ್ರಣ ಹಾಗೂ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಕ್ರಾಪ್ ಪಾಲಿಸಿ(ಗುಜುರಿ ನಿಯಮ) ಜಾರಿಗೆ ತರಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದರೆಡು ವರ್ಷದಿಂದ ನಿರಂತರ ಹೋರಾಟ ಮಾಡುತ್ತಿರುವ ನಿತಿನ್ ಗಡ್ಕರಿ ಇದೀಗ ಶೀಘ್ರದಲ್ಲೇ ಸ್ಕ್ರಾಪ್ ಪಾಲಿಸಿ ಜಾರಿಗೆ ತರುವುದಾಗಿ ಹೇಳಿದ್ದಾರೆ.

ವಾಹನ ಚಾಲಕರಿಗೆ ಸಿಹಿ ಸುದ್ದಿ ನೀಡಿದ ನಿತಿನ್ ಗಡ್ಕರಿ!.

ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಗಬೇಕಿದೆ. ಸದ್ಯ ಲಾಕ್‌ಡೌನ್ ಕಾರಣ ಆದ್ಯತೆ ಆರೋಗ್ಯವಾದ ಕಾರಣ ಸ್ಕ್ರಾಪ್ ಪಾಲಿಸಿ ತಡವಾಗಿದೆ. ಇದೀಗ ಅಂತಿಮ ಹಂತಕ್ಕೆ ತಲುಪಿದ್ದು ಲಾಕ್‌ಡೌನ್ ಬಳಿಕ ಭಾರತ ಹೊಸ ನಿಯಮಕ್ಕೆ ಸಾಕ್ಷಿಯಾಗಲಿದೆ. ಇಂಡಿಯನ್ ಆಟೋಮೊಬೇಲ್ ಮ್ಯಾನ್ಯುಫಾಕ್ಯರ್(SIAM)ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ ಗಡ್ಕರಿ, ಹೊಸ ನಿಯಮದಿಂದ ಭಾರತ ಹೊಸ ದಿಕ್ಕಿನಲ್ಲಿ ಸಂಚರಿಸಲಿದೆ ಎಂದಿದ್ದಾರೆ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕ್ರಾಂತಿ; ನಿತಿನ್ ಗಡ್ಕರಿಗೆ 'ಸುಪ್ರೀಂ' ಬುಲಾವ್!..

ಏನಿದು ಸ್ಕ್ರಾಪ್ ಪಾಲಿಸಿ:
15 ವರ್ಷಕ್ಕಿಂತ ಹಳಯೆ ವಾಹನಗಳನ್ನು ಗುಜುರಿಗೆ ಕಡ್ಡಾಯವಾಗಿ ಹಾಕಬೇಕು. ದೇಶದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಲಕ್ಷಾಂತರ ವಾಹನಗಳು ಓಡಾಡುತ್ತಿದೆ. ಇದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಹೀಗಾಗಿ ಸ್ಕಾಪ್ ಪಾಲಿಸಿ ಮೂಲಕ ಆಯಸ್ಸು ಹೆಚ್ಚಾದ ವಾಹನಗಳನ್ನು ಕಡ್ಡಾಯವಾಗಿ ಗುಜುರಿಗೆ ಹಾಕಬೇಕು. ಈ ವೇಳೆ ವಾಹನದ ಬಿಡಿಭಾಗಗಳ ಕಂಡೀಷನ್ ಆಧರಿಸಿ ಸರ್ಕಾರ ವಾಹನವನ್ನು ಗುಜುರಿಗೆ ಹಾಕುವ ಮಾಲೀಕರಿಗೆ ಹಣ ನೀಡಲಿದೆ.  ಸರ್ಕಾರ ನಿಗದಿ ಪಡಿಸುವ ಹಳೇ ವಾಹನದ ರೀಸೇಲ್ ವ್ಯಾಲ್ಯೂಗಿಂತ ಹೆಚ್ಚಿರಲಿದೆ ಅಥವಾ ಸಮನಾಗಿ ಇರಲಿದೆ. 

ಸ್ಕ್ರಾಪ್ ಪಾಲಿಸಿ ಉಪಯೋಗವೇನು?
ಪ್ರಮುಖವಾಗಿ ವಾಯ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಡಿಮೆಯಾಗಲಿದೆ. ಇಷ್ಟೇ ಅಲ್ಲ ಹಳೇ ವಾಹನಗಳು ಗುಜರಿ ಸೇರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ ಇದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಗುಜುರಿಗೆ ಹಾಕುವ ಮೊದಲು ಉತ್ತಮ ಕಂಡೀಷನ್‌ನಲ್ಲಿರುವ ಬಿಡಿ ಭಾಗಗಳನ್ನು ಪುನರ್ ಬಳಕೆಗೂ ಅವಕಾಶ ಸಿಗಲಿದೆ.

ಬೆಂಗಳೂರಿನಲ್ಲಿ TVS ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಗಡ್ಕರಿ!

ವಿರೋಧ ಏಕೆ?
ಸ್ಕ್ರಾಪ್ ಪಾಲಿಸಿ ಜಾರಿಗೆ ತರಲು ಉದ್ದೇಶಿಸಿದಾಗಲೇ ವಿರೋಧ ವ್ಯಕ್ತವಾಗಿತ್ತು. ಕಾರಣ ಆರ್ಥಿಕ ಶಸಕ್ತರಲ್ಲದವರು ಹಳೇ ವಾಹನದಲ್ಲಿ ಜೀವನ ನಡೆಸುತ್ತಾರೆ. ಈ ವೇಳೆ ಅವರ ವಾಹನ ಗುಜುರಿಗೆ ತಳ್ಳಿದರೆ ಬದುಕು ದುಸ್ತರವಾಗಲಿದೆ. ಹೊಸ ವಾಹನ ಖರೀದಿ ಸಾಮರ್ಥ್ಯ ಕೂಡ ಕಡಿಮೆ. ಹೀಗಾಗಿ ಬಡ ವರ್ಗ ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿತ್ತು

ಸ್ಕ್ರಾಪ್ ಪಾಲಿಸಿ ಪ್ರಕಾರ 15 ವರ್ಷಕ್ಕಿಂತ ಮೇಲ್ಪಟ್ಟ ಹಲವು ವಾಹನಗಳು ಉತ್ತಮ ಸ್ಥಿತಿಯಲ್ಲಿದೆ. ಇಷ್ಟೇ ಅಲ್ಲ ಪ್ರತಿ ವಾಹನ 6 ತಿಂಗಳಿಗೊಮ್ಮೆ ಎಮಿಶನ್ ಟೆಸ್ಟ್ ಮಾಡಿಸಬೇಕು. ಎಮಿಶನ್ ಟೆಸ್ಟ್ ಪಾಸಾದ ವಾಹನವನ್ನು ಗುಜುರಿಗೆ ಹಾಕುವುದು ಎಷ್ಟು ಸರಿ.  ಎಮಿಶನ್ ಸರಿಇಲ್ಲ ಎಂದರ್ಥವೇ? ಅನ್ನೋ ಮಾತುಗಳು ಇವೆ. ಇದರ ಜೊತೆಗೆ 10 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕು. ಸ್ಕಾಪ್ ಪಾಲಿಸಿ ಜಾರಿಗೆ ಬಂದರೆ ಫಿಟ್ನೆಸ್ ಸರ್ಟಿಫಿಕೇಟ್ ಅವಶ್ಯಕತೆ ಏನು? ಹೀಗೆ ಕೆಲ ಗೊಂದಲಗಳು ಈ ಪಾಲಿಸಿಯಲ್ಲಿದೆ. ಆದರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಎಲ್ಲಾ ಗೊಂದಲಕ್ಕೆ ತೆರೆ ಎಳೆದು ಹಲವು ಬದಲಾವಣೆಯೊಂದಿಗೆ ನೂತನ ನಿಯಮ ಜಾರಿಯಾಗಲಿದೆ ಎಂದಿದ್ದಾರೆ.


 

Latest Videos
Follow Us:
Download App:
  • android
  • ios