ನವದಹೆಲಿ(ಡಿ.27): ಜನವರಿಯಿಂದ ಯಾವುದೋ ಕಡಿಮೆ ಬೆಲೆಯಲ್ಲಿ ಸಿಕ್ತು, ಪೊಲೀಸರ ಮುಂದೆ ಬಚಾವ್ ಆದರೆ ಸಾಕು ಎಂದುಕೊಂಡು ಹೆಲ್ಮೆಟ್ ಖರೀದಿಸಿದರೆ ಜೋಕೆ. 2019ರ ಜನವರಿ 15 ರಿಂದ ISL(Indian standard Institute)ಮಾನ್ಯತೆ ಇರೋ ಹೆಲ್ಮೆಟ್ ಮಾತ್ರ ಬಳಕೆ ಮಾಡಬೇಕು. ಇದು ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಹಾಗೂ ಹೈವೇ (MoRTH)ವಿಭಾಗದ ನಿಯಮ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ರೆಡ್ಡಿಚ್ ABS ಬೈಕ್ ಬಿಡುಗಡೆ!

ಮುಂದಿನ ವರ್ಷದ ಆರಂಭದಿಂದ ISI ಮಾನ್ಯತೆ ಇಲ್ಲದೆ ಹೆಲ್ಮೆಟ್ ಮಾರಾಟ ಮಾಡಿದರೆ 2 ವರ್ಷ ಜೈಲು ಅಥವಾ 2 ಲಕ್ಷ ರೂಪಾಯಿ ದಂಡಕ್ಕೆ ಗುರಿಯಾಗಬೇಕಾಗುತ್ತೆ. ಇಷ್ಟೇ ಅಲ್ಲ ಹೆಲ್ಮೆಟ್ ಗರಿಷ್ಠ ತೂಕ 1.2 ಕೆ.ಜಿ ಮಾತ್ರ ಇರಬೇಕು. ಸದ್ಯ 1.5 ಕೆ.ಜಿ ಇದೆ. ನೂತನ ನಿಯಮ ಇದೀಗ ಹೆಲ್ಮೆಟ್  ಮಾರಾಟಗಾರರಿಗೆ ಸಂಕಷ್ಟ ತಂದಿದೆ.

ಇದನ್ನೂ ಓದಿ: ನಿದ್ದೆ ಕಣ್ಣಿನಲ್ಲಿ BMW ಕಾರನ್ನ ವಿಮಾನ ತರ ಹಾರಿಸಿದ ಭೂಪ-ವೀಡಿಯೋ ವೈರಲ್!

ISI ಮಾನ್ಯತೆ ರಹಿತ ಹೆಲ್ಮೆಟ್ ಸ್ಟಾಕ್ ಕ್ಲೀಯರ್ ಮಾಡಲು ಮಾರಾಟಗಾರರು ಹೆಣಗಾಡುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆಯೇ ISI ಹೆಲ್ಮೆಟ್ ಖಡ್ಡಾಯಕ್ಕೆ ಸೂಚನೆ ನೀಡಲಾಗಿತ್ತು. ಆದರೆ ಯಾರೂ ಕೂಡ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಗಡುವು ಹತ್ತಿರಬಂದಂತೆ ಹೆಲ್ಮೆಟ್ ಮಾರಾಟಗಾರರು ಟೆನ್ಶನ್ ಹೆಚ್ಚಾಗಿದೆ.

ಇದನ್ನೂ ಓದಿ: ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿದೆ 10 ಟಿಪ್ಸ್!

MoRTH ನೀಡಿರುವ 2016ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ದಿನ 28 ಹೆಲ್ಮೆಟ್ ರಹಿತ ಬೈಕ್ ಸವಾರರು ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ.  2016ರಲ್ಲಿ ಒಟ್ಟು 10,135 ಹೆಲ್ಮೆಟ್ ರಹಿತ ಬೈಕ್ ಸವಾರರು ಸಾವನ್ನಪ್ಪಿದ್ದರೆ, 2017ರಲ್ಲಿ 35,975 ಮಂದಿ ಬೈಕ್ ಸವಾರರು ಹೆಲ್ಮೆಟ್ ಇಲ್ಲದೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ 2019ರಿಂದ ಕಟ್ಟು ನಿಟ್ಟಿನ ಕ್ರಮಕ್ಕೆ ಕೇಂದ್ರ ಮುಂದಾಗಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: