ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿದೆ 10 ಟಿಪ್ಸ್!
ಹೊಸ ಬೈಕ್ ಖರೀದಿಸಿದವರೂ ಅದನ್ನ ಸರಿಯಾಗಿ ಬಳಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನಿಮ್ಮ ರೈಡ್ ಅಥವಾ ಬಳಕೆ ಸಮರ್ಪಕವಾಗಿಲ್ಲದಿದ್ದರೆ, ಬೈಕ್ ಬಹುಬೇಗನೆ ಸಮಸ್ಯೆಗೆ ತುತ್ತಾಗಲಿದೆ. ಹೀಗಾಗಿ ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿದೆ 10 ಟಿಪ್ಸ್
ಬೆಂಗಳೂರು(ನ.18): ಹೊಸ ಬೈಕ್ ಖರೀದಿಸಿದವರು ಕೆಲ ಅಂಶಗಳನ್ನ ಗಮನದಲ್ಲಿಡಬೇಕು. ನೂತನ ಬೈಕ್ ಬಳಕೆ, ಸ್ಪೀಡ್ ಸೇರಿದಂತೆ ಎಲ್ಲವೂ ಕೂಡ ಬಹಳ ಮುಖ್ಯ. ಹೀಗೆ ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ.
- ಆರಂಭಿಕ 1000 ಕಿ.ಮೀ ವರೆಗೆ 40 ಕಿ.ಮಿ/ ಪ್ರತಿ ಗಂಟೆಗೆ ವೇಗದಲ್ಲಿ ಪ್ರಯಾಣಿಸಿ
- ಸರಿಯಾದ ಗೇರ್ ಬಳಕೆ ಮಾಡಿ- ಎಂಜಿನ್ ಮೇಲಿನ ಹೊರೆ ತಪ್ಪಿಸಿ
- ಗೇರ್ ಶಿಫ್ಟ್ ಮಾಡುವಾಗ ಕ್ಲಚ್ ಸಂಪೂರ್ಣವಾಗಿ ಬಳಸಿ
- ಹೊಸ ಬೈಕ್ ಮೈಲೇಜ್ ನೀಡುತ್ತಿಲ್ಲ ಎಂದು ಕಾರ್ಬೋರೇಟರ್ ಅಥವಾ ಇತರ ಯಾವುದೇ ಸೆಟ್ಟಿಂಗ್ ಬದಲಾಯಿಸಬೇಡಿ
- ಸರಿಯಾದ ಸಮಯಕ್ಕೆ ಸರ್ವೀಸ್ ಮಾಡಿಸಿಕೊಳ್ಳಿ
- ಎರಡನೇ ಸರ್ವೀಸ್ ಬಳಿಕ ನಿಮ್ಮ ವೇಗದ ಮಿತಿಯಲ್ಲಿ ನಿಯಮಿತವಾಗಿ ಏರಿಕೆ ಮಾಡಬಹುದು
- 2ನೇ ಸರ್ವೀಸ್ ಬಳಿಕ ಬೈಕ್ ನಿಗದಿತ ಮೈಲೇಜ್ ನೀಡದಿದ್ದರೆ ಪರೀಕ್ಷಿಸಿ
- ಪೆಟ್ರೋಲ್ ಪೂರ್ತಿ ಖಾಲಿಯಾಗುವ ವರೆಗೂ ಓಡಿಸಬೇಡಿ-ರಿಸರ್ವ್ ಬಿದ್ದ ಬಳಿಕ ಪೆಟ್ರೋಲ್ ಹಾಕಿ
- ಎರಡು ಚಕ್ರದ ಗಾಳಿ ಸರಿಯಾದ ಪ್ರಮಾಣದಲ್ಲಿದೆಯೇ ಎಂದು ಪರೀಕ್ಷಿಸಿಕೊಳ್ಳಿ
- ಆದಷ್ಟು ಬೈಕ್ ಶುಚಿಯಾಗಿಡಿ-ಕೆಸರು ಮಣ್ಣು, ಧೂಳು ಮೆತ್ತಿಕೊಳ್ಳದಂತೆ ನೋಡಿಕೊಳ್ಳಿ