ನಿದ್ದೆ ಕಣ್ಣಿನಲ್ಲಿ ಅನಾಹುತಗಳಾಗೋದು ಹೆಚ್ಚು. ಇದೀಗ 44 ಹರೆಯ ವ್ಯಕ್ತಿ ನಿದ್ದೆ ಕಣ್ಣಿಲ್ಲಿ ಕಾರನ್ನೇ ವಿಮಾನ ತರ ಹಾರಿಸಿ ಸಖತ್ ವೈರಲ್ ಆಗಿದ್ದಾರೆ. ಈ ವೀಡಿಯೋ ನೋಡಿದರೆ ಮೈ ಜುಮ್ಮೆನ್ನುವುದು ಖಚಿತ.
ಸ್ಲೊವೇಕಿಯಾ(ಡಿ.23): ರಾತ್ರಿ ವೇಳೆ ನಿದ್ದೆ ಕಣ್ಣಿನಲ್ಲಿ ಕಾರು ಚಲಾಯಿಸಿ ಅಪಘಾತವಾಗಿರೋದನ್ನ ನಾವು ಕೇಳಿದ್ದೇವೆ. ಆದರೆ ನಿದ್ದೆ ಕಣ್ಣಿನಲ್ಲಿ ಕಾರನ್ನ ವಿಮಾನ ತರ ಹಾರಿಸಿದ ಘಟನೆ ನೋಡಿರಲಿಕ್ಕಿಲ್ಲ. ಸ್ಲೊವೇಕಿಯಾದ ಪೊಪ್ರಾಡ್ ನಗರದ ಹೈವೇನಲ್ಲಿ ಈ ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ.
ಇದನ್ನೂ ಓದಿ: ನ್ಯಾನೋಗಿಂತ ಮೊದಲು ಭಾರತದಲ್ಲಿತ್ತು 12ಸಾವಿರ ರೂಪಾಯಿ ಮೀರಾ ಕಾರು!
44ರ ಹರೆಯದ ವ್ಯಕ್ತಿ ಪೊಪ್ರಾಡ್ ಹೈವೇಯಲ್ಲಿ ಅತೀ ವೇಗದಲ್ಲಿ BMW ಕಾರನ್ನ ಚಲಾಯಿಸುತ್ತಿದ್ದರು. ಅತೀ ವೇಗದ ಕಾರಣ ರಸ್ತೆಯ ಬಲ ಬದಿಯಲ್ಲಿ ಚಲಿಸುತ್ತಿತ್ತು. ಆದರೆ ಸುರಂಗ ಮಾರ್ಗ ಪ್ರವೇಶಿಸುತ್ತಿದ್ದಂತೆ ರಸ್ತೆ ಕಿರಿದಾಗಿದೆ. ನಿದ್ದೆ ಕಣ್ಣಿನಲ್ಲಿ ಇದನ್ನ ಗಮನಿಸಿದ ಡ್ರೈವರ್ ಅತೀ ವೇಗದಲ್ಲೇ ರಸ್ತ ಬದಿಯ ಲೇನ್‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರು ರಸ್ತೆಯಿಂದ ಸುರಂಗ ಮಾರ್ಗದ ಮೆಲ್ಛಾವಣಿಗೆ ಹಾರಿ ಹೋಗಿ ಡಿಕ್ಕಿ ಹೊಡೆದಿದೆ. ಸಿಸಿಟಿವಿಯಲ್ಲಿ ದಾಖಲಾಗಿರೋ ದೃಶ್ಯ ಮೈ ಜುಮ್ಮೆನಿಸುವಂತಿದೆ.
BMW ಕಾರಿನ ಸುರಕ್ಷತೆಯಿಂದ 44ರ ಹರೆಯದ ವ್ಯಕ್ತಿ ಹೆಚ್ಚಿನ ಗಾಯಗಳಿಲ್ಲದೆ ಪಾರಾಗಿದ್ದಾರೆ. ಚಾಲಕ ಅಲ್ಪ ಪ್ರಮಾಣದಲ್ಲಿ ಮದ್ಯ ಸೇವಿಸಿದ್ದರು. ನಿದ್ದೆಗೆ ಜಾರಿದ ಪರಿಣಾಮ ಕಾರು ಅಪಘಾತ ಸಂಭವಿಸಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ.
