ಎರಿಯೂರ್(ಸೆ.18): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ಪೊಲೀಸರು ವಾಹನ ಸವಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿ ರಸ್ತೆಗಳಲ್ಲೂ ಟ್ರಾಫಿಕ್ ಪೊಲೀಸರ ತಪಾಸಣೆ ನಡೆಯುತ್ತಿದೆ. ಇದೇ ರೀತಿ ತಪಾಸಣೆ ಮಾಡುತ್ತಿದ್ದ ವೇಳೆ ಸೈಕಲ್‌ನಲ್ಲಿ ಬರುತ್ತಿದ್ದ ವಿದ್ಯಾರ್ಥಿಯನ್ನು ನಿಲ್ಲಿಸಿ ತಪಾಸಣೆ ಮಾಡಿ, ಸೈಕಲನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಹೆಲ್ಮೆಟ್ ಹಾಕಲ್ಲ, ಪೊಲೀಸರು ಹಿಡಿಯಲ್ಲ; ಈತ ಎಲ್ಲೇ ಹೋದ್ರು ದಂಡ ಇಲ್ಲ!

ಈ ಘಟನೆ ನಡೆದಿರುವುದು ತಮಿಳುನಾಡಿನ ಶಿವಂಗಗಾ ಜಿಲ್ಲಿಯ ಎರಿಯೂರ್‌ನಲ್ಲಿ. ಪೊಲೀಸರು ತಪಾಸಣೆ ಮಾಡುತ್ತಿದ್ದ ವೇಳೆ ಎದುರಿನಿಂದ ಸೈಕಲ್ ಮೇಲೆ ಬಂದ ವಿದ್ಯಾರ್ಥಿಯನ್ನು ನಿಲ್ಲಿಸಿದ್ದಾರೆ. ಬಳಿಕ ಆತನಿಗೆ ಖಡಕ್ ವಾರ್ನಿಂಗ್ ನೀಡಿ, ಸೈಕಲನ್ನೇ ಸೀಝ್ ಮಾಡಿದ್ದಾರೆ. ಇತ್ತ ವಿದ್ಯಾರ್ಥಿ ಇತರ ವಾಹನ ಸವಾರರಂತೆ ಸರದಿ ಸಾಲಿನಲ್ಲಿ ನಿಂತು, ಪೊಲೀಸರಲ್ಲಿ ಸೈಕಲ್ ಮರಳಿ ನೀಡುವಂತೆ ಮನವಿ ಮಾಡಿದ್ದಾನೆ.

ಇದನ್ನೂ ಓದಿ: ಫೈನ್ ಹಾಕಿದ್ರೆ ಸೂಸೈಡ್; ಮಹಿಳೆಗೆ ಅಂಜಿ ಬಿಟ್ಟು ಕಳುಹಿಸಿದ ಪೊಲೀಸ್!

ಪೊಲೀಸರ ತಪಾಸಣೆ, ವಿದ್ಯಾರ್ಥಿ ಸೈಕಲ್ ಸೀಝ್ ಘಟನೆಗಳನ್ನು ಪಕ್ಕದ ಬಿಲ್ಡಿಂಗ್ ಮೇಲಿದ್ದ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.  ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.  ಸೈಕಲ್‌ನಲ್ಲಿ ಬಂದ ವಿದ್ಯಾರ್ಥಿ‌ಗೆ ಹೆಲ್ಮೆಟ್ ಹಾಕಿಲ್ಲ, ಹೀಗಾಗಿ ದಂಡ ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕ್ಷಣಾರ್ಧದಲ್ಲೇ ಈ ವಿಡಿಯೋ ವೈರಲ್ ಆಗಿದೆ. 

"

ಇದನ್ನೂ ಓದಿ: ಭಾರೀ ದಂಡದ ಭೀತಿ: ಬೈಕ್‌ ಸಾಹಸ ತಡೆಯಲು ಮಗನ ಬಂಧಿಸಿಟ್ಟ ಅಪ್ಪ!

ತಮಿಳುನಾಡಿನಾದ್ಯಂತ ಪೊಲೀಸ್ ನಡತೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ಎರಿಯೂರ್ ಸಬ್ ಇನ್ಸ್‌ಪೆಕ್ಟರ್ ಸುಬ್ರಮಣಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿ ಸೈಕಲ್‌ ಹ್ಯಾಂಡಲ್‌ನಲ್ಲಿ  ಮೇಲೆ ಎರಡು ಕೈಗಳನ್ನು ಬಿಟ್ಟು ಓಡಿಸುತ್ತಿದ್ದ. ಇದಕ್ಕಾಗಿ ವಿದ್ಯಾರ್ಥಿಯನ್ನು ನಿಲ್ಲಿಸಿ, ಸೈಕಲ್ ವಶಕ್ಕೆ ಪಡೆದೆ ಎಂದು ಸುಬ್ರಮಣಿ ಹೇಳಿದ್ದಾರೆ.

ಇದನ್ನೂ ಓದಿ: ₹100 ಪಾವತಿಸಿದರೆ ಸಾಕು, ದುಬಾರಿ ದಂಡದಿಂದ ಸಿಗಲಿದೆ ಮುಕ್ತಿ!

ವಿದ್ಯಾರ್ಥಿ ತನ್ನ ಶರ್ಟ್ ಬಟನ್ ಹಾಕಿಕೊಳ್ಳುತ್ತಾ ಸೈಕಲ್ ಮೇಲೆ ಬಂದಿದ್ದಾನೆ. ಇದು ಅಪಾಯಕಾರಿ. ಹೀಗಾಗಿ ನಿಲ್ಲಿಸಿ ಎಚ್ಚರಿಕೆ ನೀಡಲಾಗಿದೆ. ಆದರೆ ಹೆಲ್ಮೆಟ್ ಹಾಗೂ ನಿಯಮ ಕುರಿತು ವಿದ್ಯಾರ್ಥಿ ಬಳಿ ಯಾವುದೇ  ದಾಖಲೆ ಕೇಳಿಲ್ಲ ಎಂದಿದ್ದಾರೆ. ಪೊಲೀಸ್ ಸ್ಪಷ್ಟನೆ ನೀಡಿದ್ದರೂ, ಈ ವಿಡಿಯೋದಲ್ಲಿ ಪೊಲೀಸರು ದಾಖಲೆ ಕೇಳುವಂತಿದೆ. ಹೀಗಾಗಿ ವಿಡಿಯೋ ವೈರಲ್ ಆಗಿತ್ತಿದ್ದಂತೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಅನ್ನೋ ಮಾತುಗಳು ಸಾಮಾಜಿಕ ಜಾಲತಾದಲ್ಲಿ ಕೇಳಿ ಬರುತ್ತಿದೆ.