ಹೆಲ್ಮೆಟ್ ಹಾಕಲ್ಲ, ಪೊಲೀಸರು ಹಿಡಿಯಲ್ಲ; ಈತ ಎಲ್ಲೇ ಹೋದ್ರು ದಂಡ ಇಲ್ಲ!

ಹೆಲ್ಮೆಟ್ ಹಾಕದಿದ್ದರೆ ದಂಡದಿಂದ ವಿನಾಯಿತಿ ಇಲ್ಲ. ಆದರೆ ಇಲ್ಲೊಬ್ಬ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುತ್ತಲೇ ಇದ್ದಾನೆ. ಪೊಲೀಸರು ಕೂಡ ಈತನಗಿ ದಂಡ ಹಾಕಲ್ಲ. ಎಲ್ಲರು ಕಾನೂನು ಪಾಲಿಸುತ್ತಿರುವಾಗ ಈತನಿಗೆ ವಿಶೇಷ ವಿನಾಯಿತಿ ಯಾಕೆ? ಇಲ್ಲಿದೆ ವಿವರ.

New traffic rules Gujarat man ride without helmet but no fine no violation

ಅಹಮ್ಮದಾಬಾದ್(ಸೆ.17): ಮೋಟಾರು ವಾಹನ್ ಕಾಯ್ದೆ ತಿದ್ದುಪಡಿಯಿಂದ ದೇಶದಲ್ಲೆಡೆ ನಿಯಮ ಪಾಲನೆ ಜಾಗೃತಿ ಮೂಡುತ್ತಿದೆ. ದುಬಾರಿ ದಂಡಕ್ಕೆ ಬೆಚ್ಚಿ ಬಿದ್ದಿರುವ ಸವಾರರು ನಿಯಮ ಪಾಲಿಸಲು ಮುಂದಾಗಿದ್ದಾರೆ.  ಇತ್ತ ಪೊಲೀಸರು ಸಿಗ್ನಲ್ ಜಂಪ್ ಮಾತು ಬದಿಗಿರಲಿ, ಝೀಬ್ರಾ ಲೈನ್ ಕ್ರಾಸ್ ಆದರೂ ದುಬಾರಿ ದಂಡ ಹಾಕಿ ಬಿಡುತ್ತಾರೆ. ಆದರೆ ಅಹಮ್ಮದಾಬಾದ್‌ನ ಝಾಕಿರ್ ಮೆಮನ್‌ ಹೆಲ್ಮೆಟ್ ಹಾಕದಿದ್ದರೂ ಯಾವುದೇ ದಂಡ ಹಾಕಲ್ಲ.

ಇದನ್ನೂ ಓದಿ: ಫೈನ್ ಹಾಕಿದ್ರೆ ಸೂಸೈಡ್; ಮಹಿಳೆಗೆ ಅಂಜಿ ಬಿಟ್ಟು ಕಳುಹಿಸಿದ ಪೊಲೀಸ್!

ನಿಯಮ ಉಲ್ಲಂಘನೆಗಳಲ್ಲಿ ಹೆಲ್ಮೆಟ್ ರಹಿತ ಪ್ರಯಾಣ  ಅಗ್ರಸ್ಥಾನದಲ್ಲಿದೆ.  ಹಲವು ನಗರಗಳಲ್ಲಿ ಹೆಲ್ಮೆಟ್ ಹಾಕದವರಿಗೆ ಪೊಲೀಸರು ಉಚಿತ ಹೆಲ್ಮೆಟ್ ನೀಡುತ್ತಿದ್ದಾರೆ. ಆದರೆ ಝಾಕೀರ್ ಮೆಮನ್ ಹೆಲ್ಮೆಟ್ ಹಾಕದೇ ಬೈಕ್ ಓಡಿಸುತ್ತಿದ್ದಾರೆ. ಇಲ್ಲೀವರೆಗೆ ಝಾಕೀರ್‌ಗೆ ದಂಡ ಹಾಕಿಲ್ಲ. ಇದಕ್ಕೆ ಕಾರಣ ಝಾಕೀರ್ ತಲೆ ಗಾತ್ರಕ್ಕೆ ತಕ್ಕ ಹೆಲ್ಮೆಟ್ ಭಾರತದಲ್ಲಿಲ್ಲ.

ಇದನ್ನೂ ಓದಿ: ನಿಯಮ ಉಲ್ಲಂಘಿಸಿದ್ರೆ ದಂಡ ಇಲ್ಲ, ಪೊಲೀಸರೇ ನೀಡುತ್ತಾರೆ ಲೈಸೆನ್ಸ್, ಹೆಲ್ಮೆಟ್!

ಉದೇಪುರ್‌ನ ಬೊಡೇಲಿ ಪಟ್ಟಣ ನಿವಾಸಿಯಾಗಿರುವ ಝಾಕೀರ್‌ನನ್ನು ಇತ್ತೀಚೆಗೆ ಪೊಲೀಸರು ನಿಲ್ಲಿಸಿ ಹೆಲ್ಮೆಟ್ ಹಾಕದ ಕಾರಣಕ್ಕೆ ದಂಡ ಹಾಕಲು ಮುಂದಾಗಿದ್ದಾರೆ. ಝಾಕೀರ್ ತಕ್ಷಣವೇ ತಮ್ಮ ಸಮಸ್ಯೆಯನ್ನು ಹೇಳಿದ್ದಾರೆ. ನನ್ನ ತಲೆ ಗಾತ್ರ ದೊಡ್ಡದಿದೆ. ಹೀಗಾಗಿ ಈ ಗಾತ್ರಕ್ಕೆ ತಕ್ಕ ಹೆಲ್ಮೆಟ್ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಎಂದಿದ್ದಾನೆ.

New traffic rules Gujarat man ride without helmet but no fine no violation

ಇದನ್ನೂ ಓದಿ: ₹100 ಪಾವತಿಸಿದರೆ ಸಾಕು, ದುಬಾರಿ ದಂಡದಿಂದ ಸಿಗಲಿದೆ ಮುಕ್ತಿ!

ಬೊಡೇಲಿ ಪಟ್ಟಣದ ಟ್ರಾಫಿಕ್ ಇನ್ಸ್‌ಪೆಕ್ಟರ್ ವಸಂತ್ ರಾಥ್ವ ವಾಹನದ ಇತರ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಡ್ರೈವಿಂಗ್ ಲೈಸೆನ್ಸ್, ಎಮಿಶನ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಝಾಕೀರ್ ಇಟ್ಟುಕೊಂಡಿದ್ದಾರೆ. ಇಷ್ಟೇ ಅಲ್ಲ ಎಲ್ಲೂ ಕೂಡ ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ಒನ್ ವೇ ಸೇರಿದಂತೆ ಯಾವುದೇ ನೀಯಮ ಉಲ್ಲಂಘನೆ ಮಾಡಿಲ್ಲ. ಹೀಗಾಗಿ ಝಾಕೀರ್ ಮೆಮನ್‌ಗೆ ಹೆಲ್ಮೆಟ್ ರಹಿತ ಪ್ರಯಾಣಕ್ಕೆ ದಂಡ ಹಾಕುವುದಿಲ್ಲ ಎಂದು ವಸಂತ್ ರಾಥ್ವ ಹೇಳಿದ್ದಾರೆ.

ಇದನ್ನೂ ಓದಿ: 6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!

ನನ್ನಲ್ಲಿ ಎಲ್ಲಾ ದಾಖಲೆಗಳಿವೆ. ನಾನು ನಿಯಮವನ್ನು ಗೌರವಿಸುತ್ತೇನೆ. ಆದರೆ ಹೆಲ್ಮೆಟ್ ಕುರಿತು ನನ್ನಿಂದ  ಏನು  ಮಾಡಲು ಸಾಧ್ಯ. ಬಹುತೇಕ ಎಲ್ಲಾ ಹೆಲ್ಮೆಟ್ ಡೀಲರ್ ಬಳಿ ವಿಚಾರಿಸಿದ್ದೇನೆ. ನನ್ನ ಸೈಝ್ ಹೆಲ್ಮೆಟ್ ಸಿಗುತ್ತಿಲ್ಲ. ಈ ಕುರಿತು ಪೊಲೀಸರಿಗೆ ತಿಳಿಸಿದ್ದೇನೆ ಎಂದು ಝಾಕೀರ್ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
 

Latest Videos
Follow Us:
Download App:
  • android
  • ios