ಬೆಂಗಳೂರು: 6 ದಿನದಲ್ಲಿ 6 ಸಾವಿರ ಟ್ರಾಫಿಕ್ ಕೇಸ್, 72 ಲಕ್ಷ ರೂ ದಂಡ ವಸೂಲಿ!

ಹೊಸ ಟ್ರಾಫಿಕ್ ನಿಯಮದಿಂದ ಟ್ರಾಫಿಕ್ ಉಲ್ಲಂಘನೆ ಮಾಡುವರು ಎರಡು ಬಾರಿ ಆಲೋಚಿಸುವಂತಾಗಿದೆ. ಒಂದು ವೇಳೆ ಗೊತ್ತಿದ್ದು ಗೊತ್ತಿಲ್ಲದೆ ನಿಯಮ ಉಲ್ಲಂಘಿಸಿದರೆ ಮುಗಿಯಿತು. ಕೊನೆಗೆ ಸಾಲ ಮಾಡಿ ದಂಡ ಕಟ್ಟೋ ಪರಿಸ್ಛಿತಿ ಎದುರಾಗಬಹುದು. ಹೊಸ ನಿಯಮ ಜಾರಿಯಾದ ಬಳಿಕ ಬೆಂಗಳೂರಲ್ಲಿ ಸಂಗ್ರಹವಾದ ದಂಡದ ಮೊತ್ತದ ಹಾಗೂ ಪ್ರಕರಣದ ಕುರಿತು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.   

New traffic rule Bengalurur police Collect more than 70 lakh rupees in 6 days

ಬೆಂಗಳೂರು(ಸೆ.09): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬೆನ್ನಲ್ಲೇ ದೇಶದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ದಂಡ ವಸೂಲಿಯಿಂದ ಬರೋ ಆದಾಯ ಕೂಡ 10 ಪಟ್ಟು ಹೆಚ್ಚಾಗಿದೆ. ಬೆಂಗಳೂರಲ್ಲಿ ಕೇವಲ 6 ದಿನದಲಲಿ 6 ಸಾವಿರಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿದ್ದು, ಬರೋಬ್ಬರಿ 70 ಲಕ್ಷ ರೂಪಾಯಿಗೂ ಹೆಚ್ಚಿನ ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 86,500 ರು. ದಂಡ

ಸೆಪ್ಟೆಂಬರ್ 4 ರಿಂದ 9 ರ ವರೆಗಿನ ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ದಂಡ ವಸೂಲಿ ಪಟ್ಟಿಯನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್ ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಕೇವಲ 6 ದಿನದಲ್ಲಿ ಬೆಂಗಳೂರಲ್ಲಿ 6813 ಪ್ರಕರಣಗಳು ದಾಖಲಾಗಿದ್ದು, 72,49,900 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.ಹೆಲ್ಮೆಟ್ ರಹಿತ, ಹೆಲ್ಮೆಟ್ ರಹಿತ ಹಿಂಬದಿ ಸವಾರ ಹಾಗೂ ಮೊಬೈಲ್ ಫೋನ್ ಬಳಕೆ ಪ್ರಕರಣಗಳಿಂದ ಗರಿಷ್ಠ ದಂಡ ವಸೂಲಿ ಮಾಡಲಾಗಿದೆ.

 

ಇದನ್ನೂ ಓದಿ: ಟ್ರಾಫಿಕ್ ಜಾಗೃತಿ ಮೂಡಿಸುತ್ತಿದ್ದ MLA ಕಾರಿಗೆ ದಂಡ!

ಆಗಸ್ಟ್ ತಿಂಗಳ 31 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ 30 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದರು. ಇದೀಗ ಹೊಸ ನಿಯಮ ಜಾರಿಯಾದ ಬಳಿಕ 6 ದಿನದಲ್ಲಿ 70 ಲಕ್ಷ ರೂಪಾಯಿ ದಾಟಿದೆ. ದುಬಾರಿ ದಂಡ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ದಂಡ ವಸೂಲಿ ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಇದನ್ನೂ ಓದಿ: ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!

ಸಿದ್ದು ಸೇರಿದಂತೆ ಹಲವರ ಟೀಕೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿರುಗೇಟು ನೀಡಿದ್ದಾರೆ. ದಂಡ ದುಬಾರಿಯಾದರೆ ನಿಯಮ ಪಾಲಿಸಿ ಎಂದು ಕಿವಿ ಮಾತು ಹೇಳಿದ್ದಾರೆ. ದೇಶದೆಲ್ಲೆಡೆ ದುಬಾರಿ ದಂಡ ಹಾಕಿದ ಪ್ರಕರಣಗಳು ವರದಿಯಾಗಿದೆ. ಇದೀಗ ಜನರಲ್ಲಿ ಟ್ರಾಫಿಕ್ ನಿಯಮದ  ಕುರಿತು ಭಯ ಮೂಡುತ್ತಿದೆ. ಜನರು ಎಚ್ಚರಿಕೆಯ ಹೆಜ್ಜೆ ಇಡುವಂತಾಗಿರುದು ಸುಳ್ಳಲ್ಲ.

Latest Videos
Follow Us:
Download App:
  • android
  • ios