ಟ್ರಾಫಿಕ್ ಜಾಗೃತಿ ಮೂಡಿಸುತ್ತಿದ್ದ MLA ಕಾರಿಗೆ ದಂಡ!

ದೇಶದೆಲ್ಲೆಡೆ ನೂತನ ಟ್ರಾಫಿಕ್ ನಿಯಮ ಜಾರಿಯಾಗಿದೆ. ಟ್ರಾಫಿಕ್ ನಿಯಮ ಹಾಗೂ ದಂಡದ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗೆ ಜಾಗೃತಿ ಮೂಡಿಸುತ್ತಿದ್ದ MLAಗೆ ದಂಡ ಹಾಕಲಾಗಿದೆ.

Police issued challan to Bhubaneswar MLA for no parking zone

ಭುಬನೇಶ್ವರ್(ಸೆ.08): ಹೊಸ ಟ್ರಾಫಿಕ್ ನಿಯಮ ಜಾರಿಯಾಗಿದ್ದು, ಪೊಲೀಸರು ದುಬಾರಿ ದಂಡದ ಜೊತೆಗೆ ಜಾಗೃತಿ ಕೂಡ ಮೂಡಿಸುತ್ತಿದ್ದಾರೆ. ಇದೇ ರೀತಿ ಹೊಸ ಟ್ರಾಫಿಕ್ ನಿಯಮ ರೂಲ್ಸ್  ಕುರಿತು ಜಾಗೃತಿ ಮೂಡಿಸಲು ಆಗಮಿಸಿದ MLAಗೆ ದಂಡ ಹಾಕಲಾಗಿದೆ. ಈ ಪ್ರಕರಣ ಇದೀಗ ಇಡೀ ದೇಶದ ಗಮನಸೆಳೆದಿದೆ.

ಇದನ್ನೂ ಓದಿ: ಹೊಸ ಟ್ರಾಫಿಕ್ ರೂಲ್ಸ್ ಜಾರಿ; 51 ಪೊಲೀಸರಿಂದ ನಿಯಮ ಉಲ್ಲಂಘನೆ!

ಒಡಿಶಾ ಭುಬನೇಶ್ವರದಲ್ಲಿ ಪೊಲೀಸ್ ಕಮಿಶನರ್ ನೂತನ ಟ್ರಾಫಿಕ್ ನಿಯಮದ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಬಿಜೆಡಿ ಶಾಸಕ ಅನಂತ್ ನಾರಾಯಣ ಜೇನ ಅವರನ್ನೂ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಿಗೂ ಪೊಲೀಸರು ದಂಡ  ಹಾಕಿದ್ದಾರೆ. ಕಾರಣ ನೋ ಪಾರ್ಕಿಂಗ್ ಏರಿಯಾದಲ್ಲಿ ಅನಂತ್ ನಾರಾಯಣ ಕಾರು ನಿಲ್ಲಿಸಲಾಗಿತ್ತು.. 

ಇದನ್ನೂ ಓದಿ: ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!

ಅನಂತ ನಾರಾಯಣ ಕಾರು ಡ್ರೈವರ್ ಕಾರನ್ನು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದರು. ಹೀಗಾಗಿ ಪೊಲೀಸರು MLA ಕಾರಿಗೆ ದಂಡ ಹಾಕಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅನಂತ ನಾರಾಯಣ, ನಿಯಮ ಎಲ್ಲರಿಗೂ ಒಂದೇ. ನನ್ನ ಕಾರಿಗೆ ದಂಡ ಹಾಕಲಾಗಿದೆ. ಡ್ರೈವರ್ ತಿಳಿಯದೇ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದರು. ನೋ ಪಾರ್ಕಿಂಗ್‌ಗಾಗಿ 500 ರೂಪಾಯಿ ದಂಡ ಕಟ್ಟಿದ್ದೇನೆ ಎಂದಿದ್ದಾರೆ.
 

Latest Videos
Follow Us:
Download App:
  • android
  • ios