ಲಂಡನ್(ಜೂ.26); ಲ್ಯಾಂಬೋರ್ಗಿನಿ ಸ್ಪೋರ್ಟ್ಸ್ ಕಾರು ಖರೀದಿಸಬೇಕು ಅನ್ನೋದು ಹಲವರ ಆಸೆ.  ಲ್ಯಾಂಬೋರ್ಗಿನಿ ಶ್ರೀಮಂತರ ಕಾರು ಎಂದೇ ಗುರುತಿಸಿಕೊಂಡಿದೆ. ಹೀಗೆ ಲಂಡನ್ನಲ್ಲೊಬ್ಬ ಲ್ಯಾಂಬೋರ್ಗಿನಿ ಹುರಕಾನ್ ಸ್ಪೈಡರ್ ಕಾರು ಬುಕ್ ಮಾಡಿದ್ದಾನೆ. ಇದರ ಬೆಲೆ ಬರೋಬ್ಬರಿ 3.89 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).  ಬುಕ್ ಮಾಡಿದ ಕೆಲ ದಿನಗಳಲ್ಲೇ ಕಾರು ಡೆಲಿವರಿಗೆ ಸಜ್ಜಾಗಿದೆ.

ಹರ್ಲೇಡೇವಿಡ್ಸನ್ RS ಲ್ಯಾಂಬೋ; ಇದು ಬೈಕಲ್ಲ ಲ್ಯಾಂಬೋರ್ಗಿನಿ ಸೂಪರ್ ಕಾರು!

ಮಾಲೀಕ ಸಂತಸದಿಂದ ಶೋ ರೂಂ ತೆರಳಿ ಹೊಚ್ಚ ಹೊಸ ಕಾರಿನ ಕೀ ಪಡೆದುಕೊಂಡಿದ್ದಾನೆ. ಬಳಿಕ ದಾಖಲೆ ಪತ್ರಗಳನ್ನು ಪಡೆದು ನೂತನ ಕಾರು ಏರಿ ಸ್ಟಾರ್ಟ್ ಮಾಡಿ ಹೊರಟಿದ್ದಾನೆ. ಕೇವಲ 20 ನಿಮಿಷ ಪ್ರಯಾಣ ಅಷ್ಟೆ ನೋಡಿ. ಕಾರು ಅಪಘಾತಾಗಿ ಸಂಪೂರ್ಣ ಪುಡಿ ಪುಡಿಯಾಗಿದೆ.

ದುಬಾರಿ ಲ್ಯಾಂಬೋರ್ಗಿನಿ ಖರೀದಿಸುವವರಲ್ಲಿ ಬೆಂಗ್ಳೂರಿಗರು ವಿಶ್ವದಲ್ಲೇ ಮೊದಲು!..

ಹೆದ್ದಾರಿಯಲ್ಲಿ ಸ್ಪೋರ್ಟ್ಸ್ ಕಾರಿನಲ್ಲಿ ಸಂತಸದಿಂದ ಪ್ರಯಾಣ ಮಾಡುತ್ತಿದ್ದ ವೇಳೆ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಕಾರು ಮದ್ಯ ದಾರಿಯಲ್ಲಿ ಕೆಟ್ಟು ನಿಂತಿದೆ. ಹೆದ್ದಾರಿ ಆದ ಕಾರಣ ಹಿಂದಿನಿಂದ ವಾಹನ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಹೊಚ್ಚ ಹೊಸ ಕಾರಿಗೆ ಗುದ್ದಿದೆ. ಮಾಲೀಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

 

ಲ್ಯಾಂಬೋರ್ಗಿನಿ ತಾಂತ್ರಿಕ ದೋಷದಿಂದ ಆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಹೊಚ್ಚ ಹೊಸ ಕಾರು ಹೀಗಾಯಿತಲ್ಲ ಅನ್ನೋ ನೋವಿನಲ್ಲಿ ಮಾಲೀಕ ಇದೀಗ ಲ್ಯಾಂಬೋರ್ಗಿನಿ ಸಹಸಾವವೇ ಬೇಡ ಅಂತಿದ್ದಾರೆ.