ಬೆಂಗಳೂರು(ಜ.13): ಲ್ಯಾಂಬೋರ್ಗಿನಿ ಕಾರು ಮೊದಲ ನೋಟಕ್ಕೆ ಎಲ್ಲರ ಕಣ್ಣು ಕುಕ್ಕುತ್ತೆ. ಕಾರಣ ಈ ಕಾರಿನ ಅಂದ, ಪವರ್ ಸೇರಿದಂತೆ ಪ್ರತಿಯೊಂದು ವಿಚಾರವೂ ಅತ್ಯುತ್ತಮ. ಇಟಲಿ ಮೂಲದ ಲ್ಯಾಂಬೋರ್ಗಿನಿ ಕಾರು ಫೋಕ್ಸ್‌ವ್ಯಾಗನ್ ಗ್ರೂಪ್ ಸದಸ್ಯ. ಲ್ಯಾಂಬೋರ್ಗಿನಿ ಕಾರಿನ ಬೆಲೆ ಆರಂಭವಾಗುವುದೇ ಕೋಟಿ ರೂಪಾಯಿಂದ. ಹೀಗಾಗಿ ಇದು ಅತ್ಯಂತ ಶ್ರೀಮಂತರ ಕಾರು ಎಂದೇ ಗುರುತಿಸಿಕೊಂಡಿದೆ. ಇದೀಗ ಈ ದುಬಾರಾ ಕಾರು ಖರೀದಿಸುವುದರಲ್ಲಿ ಬೆಂಗಳೂರಿಗರು ವಿಶ್ವದಲ್ಲೇ ಮಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರು ಶೋರೂಂ; ದಕ್ಷಿಣ ಭಾರತದಲ್ಲೇ ಮೊದಲು!

2019ರಲ್ಲಿ ಭಾರತ ಸೇರಿದಂತೆ ವಿಶ್ವದಲ್ಲೇ ಕಾರು ಮಾರಾಟ ಕುಸಿತಗೊಂಡಿತ್ತು. ಇದಕ್ಕೆ ಲ್ಯಾಂಬೊರ್ಗಿನಿ ಹೊರತಾಗಿರಲಿಲ್ಲ. ಆದರೆ ಲ್ಯಾಂಬೋರ್ಗಿನಿ ಕಂಪನಿ ಉಸಿರಾಡಿದ್ದು ಬೆಂಗಳೂರಿನಿಂದ. ಕಾರಣ ವಿಶ್ವದಲ್ಲೇ ಕಾರು ಮಾರಾಟ ಕುಸಿತವಾಗಿದ್ದರೂ ದುಬಾರಿ ಲ್ಯಾಂಬೋರ್ಗಿನಿ ಕಾರು ಬೆಂಗಳೂರಲ್ಲಿ ಗರಿಷ್ಠ ಮಾರಾಟವಾಗಿದೆ. ವಿಶ್ವದ ಆದಾಯದಲ್ಲಿ ಶೇಕಡಾ 50 ರಷ್ಟು ಕೇವಲ ಬೆಂಗಳೂರಿನಿಂದಲೇ ಬರುತ್ತಿದೆ.

ಇದನ್ನೂ ಓದಿ: ಬಿಡುಗಡೆಯಾಯ್ತು ಲ್ಯಾಂಬೋರ್ಗಿನಿ ಕಾರು: ಬೆಲೆ 4 ಕೋಟಿಗೂ ಮೇಲು!.

ಹೀಗಾಗಿ ಲ್ಯಾಂಬೋರ್ಗಿನಿ ಬೆಂಗಳೂರಲ್ಲಿ ಇತ್ತೀಚೆಗೆ ಮೊದಲ ಶೋ ರೂಂ ತೆರೆದಿದೆ. ಇದು ದಕ್ಷಿಣ ಭಾರತದ ಮೊದಲ ಲ್ಯಾಂಬೋರ್ಗಿನಿ ಶೋ ರೂಂ. ಇಷ್ಟೇ ಅಲ್ಲ ಭಾರತದ 3ನೇ ಲ್ಯಾಂಬೋರ್ಗಿನಿ ಶೋ ರೂಂ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ದೆಹಲಿ ಹಾಗೂ ಮುಂಬೈನಲ್ಲಿ ಲ್ಯಾಂಬೋರ್ಗಿನಿ ಕಾರು ಶೋ ರೂಂ ತೆರೆಯಲಾಗಿತ್ತು.

ಇದನ್ನೂ ಓದಿ: ಟಿ ಸಪ್ಲೈ ಮಾಡುತ್ತಿದ್ದ ಬೆಂಗಳೂರಿಗ ಈಗ ನೂರಾರು ಕೋಟಿಯ ಲ್ಯಾಂಬೋರ್ಗಿನಿ ಡೀಲರ್!

ದಕ್ಷಿಣ ಭಾರತದಿಂದ ನಮಗೆ ಹೆಚ್ಚಿನ ಸ್ಪಂದನೆ ಸಿಗುತ್ತಿದೆ. ಪ್ರಮುಖವಾಗಿ ಬೆಂಗಳೂರು. ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಹೆಚ್ಚು ಕಾರುಗಳು ಮಾರಾಟವಾಗುತ್ತಿದೆ. 2019ರಲ್ಲಿ ಲ್ಯಾಂಬೋರ್ಗಿನಿಯ ಅತ್ಯಂತ ದುಬಾರಿ ಕಾರು ಅವೆಂಟಡೊರ್  svj ಕಾರು ಭಾರತದಲ್ಲಿ ಕೇವಲ 1 ಕಾರು ಮಾರಾಟವಾಗಿದೆ. ಅದು ಬೆಂಗಳೂರಲ್ಲಿ ಅನ್ನೋದು ವಿಶೇಷ ಎಂದು ಲ್ಯಾಂಬೊರ್ಗಿನಿ ಇಂಡಿಯಾ ಮುಖ್ಯಸ್ಥ ಶರದ್ ಅಗರ್ವಾಲ್ ಹೇಳಿದರು.