ನೂತನ ಬಜಾಜ್ ಅವೆಂಜರ್ 220 ABS ಬೈಕ್ ಬೆಲೆ ಬಹಿರಂಗ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Jan 2019, 4:05 PM IST
New Bajaj Avenger 220  ABS bike price revealed
Highlights

ನೂತನ ಬಜಾಜ್ ಅವೆಂಜರ್ ಬೈಕ್ ಬೆಲೆ ಬಹಿರಂಗವಾಗಿದೆ. ಎಬಿಎಸ್ ತಂತ್ರಜ್ಞಾನ ಹೊಂದಿರುವ ನೂತನ ಬೈಕ್ ವಿಶೇಷತೆ ಏನು? ಈ ಹಿಂದಿನ ಬೈಕ್‌ಗಿಂತ ನೂತನ ಬೈಕ್ ಭಿನ್ನ ಯಾಕೆ? ಇಲ್ಲಿದೆ ಸಂಪೂರ್ಣ ವಿವರ.

ಮುಂಬೈ(ಜ.08): ಕ್ರೂಸರ್ ಮಾಡೆಲ್ ಬೈಕ್‌ಗಳಲ್ಲಿ ಕಡಿಮೆ ಬೆಲೆ, ಆಕರ್ಷಕ ವಿನ್ಯಾದಲ್ಲಿ ಜನರನ್ನ ಮೋಡಿ ಮಾಡಿರುವ ಬಜಾಜ್ ಅವೆಂಜರ್ ಇದೀಗ ABS ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ಬೈಕ್ ಬಿಡುಗಡೆಗೂ ಮುನ್ನವೇ ನೂತನ ಬಜಾಜ್ ಅವೆಂಜರ್ ಬೆಲೆ ಬಹಿರಂಗವಾಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಬಜಾಜ್ ಡೊಮಿನಾರ್ ಬಿಡುಗಡೆ-ಬೆಲೆ ಎಷ್ಟು?

ABS ತಂತ್ರಜ್ಞಾನ ಹೊಂದಿರುವ ಬಜಾಜ್ ಅವೆಂಜರ್ ಸ್ಟ್ರೀಟ್ 220, ಅವೆಂಜರ್ ಕ್ರೂಸ್ 220   ಬೆಲೆ 1.02 ಲಕ್ಷ ರೂಪಾಯಿ. ABS ರಹಿತ ಅವೆಂಜರ್ 220 ಬೈಕ್ ಬೆಲೆ 95,705 ರೂಪಾಯಿ(ಎಕ್ಸ್ ಶೋ ರೂಂ). ಇನ್ನುಳಿದಂತೆ ಎಂಜಿನ್ ಹಾಗೂ ಇತರ ಯಾವುದೇ ಬದಲಾವಣೆಗಳಿಲ್ಲದೆ ಅವೆಂಜರ್ ರಸ್ತೆಗಳಿಯಲಿದೆ.

ಇದನ್ನೂ ಓದಿ: ಸ್ವರಾಜ್ ಟ್ರಾಕ್ಟರ್-ಫೋರ್ಡ್ ಎಂಡೇವರ್ ನಡುವೆ ಸ್ಪರ್ಧೆ-ಅಚ್ಚರಿ ಫಲಿತಾಂಶ!

2019ರ ಎಪ್ರಿಲ್‍‌ನಿಂದ 125 ಸಿಸಿಗಿಂತ ಹೆಚ್ಚಿನ ಎಲ್ಲಾ ಬೈಕ್‌ಗಳು ABS ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಾಗಿ ಇದೀಗ ಬಜಾಜ್ 125 ಸಿಸಿಗಿಂತ ಹೆಚ್ಚಿರುವ ಎಲ್ಲಾ ಬೈಕ್‌ಗಳಲ್ಲಿ ABS ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ಈಗಾಗಲೇ ಪಲ್ಸಾರ್ ಸೇರಿದಂತೆ ಇತರ ಬೈಕ್‌ಗಳಲ್ಲಿ ಬಜಾಜ್ ABS ಅಳವಡಿಸಿ ಬಿಡುಗಡೆ ಮಾಡಿದೆ.

loader