ಮುಂಬೈ(ಜ.08): ಬಜಾಜ್ ಮೋಟಾರು ಸಂಸ್ಥೆ ಮೋಸ್ಟ್ ಪವರ್‌ಫುಲ್ ಬೈಕ್ ಡೊಮಿನಾರ್ ಇದೀಗ ಕೆಲ ಬದಲಾವಣೆಗಳೊಂದಿಗೆ ಮತ್ತೆ ಬಿಡುಗಡೆಯಾಗುತ್ತಿದೆ. ಈಗಾಗಲೇ  ಮಾರುಕಟ್ಟೆಯಲ್ಲಿರುವ ಡ್ಯುಕ್ 390, ಮೋಡೋ ಎಕ್ಸ್‌ಟಿ 300 ಬೈಕ್‌ ಸೇರಿದಂತೆ ಸ್ಪೋರ್ಟ್ಸ್ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಡೊಮಿನಾರ್ ಇದೀಗ ಅಗ್ರಸ್ಥಾನ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ.

ಇದನ್ನೂ ಓದಿ: ಜೀಪ್ ಕಂಪಾಸ್ V/S ಮಹೀಂದ್ರ XUV500: ಜನರ ಆಯ್ಕೆ ಯಾವುದು?

ಬಜಾಜ್ ಡೊಮಿನಾರ್ ಮೊದಲ ಬಾರಿಗೆ 2016ರಲ್ಲಿ ಮಾರುಕಟ್ಟೆ ಪ್ರವೇಶಿಸಿತ್ತು. ಸ್ಪೋರ್ಟ್ಸ್ ಬೈಕ್ ಪ್ರೀಯರ ನೆಚ್ಚಿನ ಬೈಕಾಗಿ ಬದಲಾಗಿರುವ ಡೊಮಿನಾರ್ ಇದೀಗ ಕೆಲ ಬದಲಾವಣೆಯೊಂದಿಗೆ ರಸ್ತೆಗಳಿಯುತ್ತಿದೆ.ಉತ್ತಮ ರೈಡ್, ಸ್ಮೂತ್ ಇಂಜಿನ್ ಹೆಚ್ಚು ಆರಾಮದಾಯಕ ಪ್ರಯಾಣಕ್ಕಾಗಿ ಡೊಮಿನಾರ್ ಇಂಜಿನ್ ಹಾಗು ಕೆಲ ಬಿಡಿಭಾಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಸ್ಪೀಡ್ ಅಪ್‌ಗ್ರೇಡ್ ಜೊತೆಗೆ ಬಿಎಸ್-ವಿಐ ಇಂಜಿನ್‌ ಸೇರಿದಂತೆ ಸಣ್ಣ ಬದಲಾಣೆಗಳೊಂದಿಗೆ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಹೊಸ ವರ್ಷದಲ್ಲಿ ವೋಕ್ಸ್‌ವ್ಯಾಗನ್ ಕಾರು ನಿರ್ವಹಣೆ ವೆಚ್ಚ ಕಡಿತ

ಎಬಿಎಸ್ ಸೇರಿದಂತೆ ಹೊಸ ತಂತ್ರಜ್ಞಾನಗಳು ಈಗಾಗಲೇ ಬೈಕ್ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿದೆ. ನೂತನ ಬೈಕ್ ಮೈಲೇಜ್ ಪ್ರತಿ ಲೀಟರ್ ಪೆಟ್ರೋಲ್‌ಗೆ ಸರಿಸುಮಾರು 25 ಕೀಲೋಮೀಟರ್ ಕ್ರಮಿಸಲಿದೆ.  ಡೊಮಿನಾರ್ ಬೆಲೆ 1.63 ಲಕ್ಷ(ಎಕ್ಸ್ ಶೋ ರೂಂ) ರೂಪಾಯಿ.