ಮುಂಬೈ(ಜೂ.10): ಕಾರು ಚಲಾಯಿಸುವಾಗ ರಸ್ತೆ ನಿಯಮ ಪಾಲನೆ ಮಾಡಲೇಬೇಕು. ಆದರೆ ಹಲವು ಬಾರಿ ನಿಯಮಗಳನ್ನು ಗಾಳಿಗೆ ತೂರಿ ಕಾರು ಡ್ರೈವಿಂಗ ಮಾಡುತ್ತಾರೆ. ಇದೇ ರೀತಿ ಬಾಲಿವುಡ್ ಸ್ಟೈಲ್‌ನಲ್ಲಿ ಕಾರು ಡ್ರೈವಿಂಗ್ ಮಾಡಿದ ಕಾಲೇಜು ವಿದ್ಯಾರ್ಥಿಗಳನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಇದನ್ನೂ ಓದಿ: ಮೋದಿ ಹೊಸ ನೀತಿ -ಪೆಟ್ರೋಲ್ ಡೀಸಲ್ ಆಗಲ್ಲ, ಟ್ಯಾಕ್ಸಿ‌ಗೆ ಎಲೆಕ್ಟ್ರಿಕ್ ಕಾರು ಕಡ್ಡಾಯ!

ಮುಂಬೈನ ಮುಖ್ಯ ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ತಮ್ಮ ಹ್ಯುಂಡೈ ಎಸ್ಸೆಂಟ್ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಇಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ವಿದ್ಯಾರ್ಥಿಗಳು ಕಾರಿನ ಎರಡೂ ಬದಿಯ ವಿಂಡೋ ಮೂಲಕ ನಿಂತು ಮಧ್ಯಪಾನ ಮಾಡಿದ್ದಾರೆ. ವೇಗವಾಗಿ ಚಲಿಸುತ್ತಿರುವ ಕಾರಿನಲ್ಲಿ ವಿದ್ಯಾರ್ಥಿಗಳು ಮಧ್ಯಪಾನ ಮಾಡಿದ ಜೊತೆಗೆ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ.

 

 

ಇದನ್ನೂ ಓದಿ: ಅಂಬಾನಿ ಆಫೀಸ್ ಹೋಗಲು ಬೇಕು 14 ಕೋಟಿ ಮೌಲ್ಯದ ಬೆಂಗಾವಲು ಕಾರು!

ವಿದ್ಯಾರ್ಥಿಗಳ ಕಾರಿನ ಹಿಂಭಾಗದಲ್ಲಿ ತೆರಳುತ್ತಿದ್ದ ಕಾರಿನ ಪ್ರಯಾಣಿಕರು ವಿದ್ಯಾರ್ಥಿಗಳ ಸ್ಟಂಟ್‌ಗಳನ್ನು ವಿಡಿಯೋ ಮಾಡಿದ್ದಾರೆ. ಬಳಿಕ ಮುಂಬೈ ಪೊಲೀಸರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಕಾರನ್ನು ವಶಕ್ಕೆ ಪಡೆದು ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಿದ್ದಾರೆ.