ಮುಂಬೈ(ಜೂ.08): ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಲೈಫ್ ಸ್ಟೈಲ್ ಎಲ್ಲರಿಗೂ ಕುತೂಹಲ. ಕಾರಣ ಅಂಬಾನಿ ಮನೆ, ಕಾರು, ಬಳಸೋ ವಸ್ತುಗಳೆಲ್ಲವೂ ಅತ್ಯಂತ ದುಬಾರಿ. ಇದೀಗ ಅಂಬಾನಿ ತಮ್ಮ ಕಛೇರಿಗೆ ತೆರಳೋ ಕುರಿತು ಕೂತೂಹಲ ಅಂಶ ಬಯಲಾಗಿದೆ. ಅಂಬಾನಿ ಆಫೀಸ್ ಹೋಗಲು ಬರೋಬ್ಬರಿ 14 ಕೋಟಿ ರೂಪಾಯಿ ಮೌಲ್ಯದ ಬೆಂಗಾವಲು ಕಾರು ಬಳಸುತ್ತಾರೆ.

ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

ಸಾಮಾನ್ಯವಾಗಿ ಆಫೀಸ್‌ಗೆ ಕಾರು, ಬೈಕ್, ಸಾರಿಗೆ ವಾಹನದಲ್ಲಿ ಪ್ರಯಾಣಿಸುತ್ತಾರೆ. ಇನ್ನು ಅಂಬಾನಿ ಕೂಡ ತಮ್ಮ ದುಬಾರಿ ಕಾರುಗಳಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಅಂಬಾನಿಗೆ ಭದ್ರತೆ ನೀಡಲು ಪೊಲೀಸರು ಬಳಸೋ ವಾಹನ ಕೂಡ ಅಷ್ಟೇ ದುಬಾರಿ. ಅಂಬಾನಿಗೆ ಬೆಂಗಾವಲು ಪಡೆಯಾಗಿ BMW X5, ಲ್ಯಾಂಡ್‌ರೋವರ್ ಡಿಸ್ಕವರ್, ಮರ್ಸಜೀಸ್ ಬೆಂಝ್ GLS 400 4MATIC ಹಾಗೂ ಮರ್ಸಡೀಸ್ ಎಸ್ ಗಾರ್ಡ್ ಕಾರು ಬಳಕೆ ಮಾಡುತ್ತಾರೆ.

ಇದನ್ನೂ ಓದಿ:ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!

ಅಂಬಾನಿ ಬೆಂಗಾವಲು ಪಡೆಗೆ ನೀಡಿರುವ ಕಾರಿನ ಮೊತ್ತ ಬರೋಬ್ಬರಿ 14 ಕೋಟಿ ರೂಪಾಯಿ. ಇದು ಪ್ರತಿ ದಿನ ಅಂಬಾನಿ ಕಚೇರಿಗೆ ತೆರಳುವಾಗ ಈ ದುಬಾರಿ ಕಾರುಗಳಲ್ಲಿ ಪೊಲೀಸರು ಭದ್ರತೆ ನೀಡುತ್ತಾರೆ. ಇನ್ನು ಸಮಾರಂಭ ಹಾಗೂ ಇತರೆಡೆ ತೆರಳುವಾಗ ಅಂಬಾನಿಗೆ ಮತ್ತಷ್ಟು ವಿಶೇಷ ಭದ್ರತೆ ಇದೆ.